ಬೆಂಗಳೂರು: ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಸಿಕ್ಕಿಲ್ಲ ಎಂದರೆ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ, ಡಿನ್ನರ್ ಮೀಟಿಂಗ್ ಯಾಕೆ ಎಂದು ಕಾಂಗ್ರೆಸ್‌ನಲ್ಲಿ (Congress) ದಲಿತ ನಾಯಕರ ಡಿನ್ನರ್ ಮೀಟಿಂಗ್ ಕುರಿತು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಕಿಡಿಕಾರಿದ್ದಾರೆ.
ದಲಿತ ನಾಯಕರ ಡಿನ್ನರ್ ಮೀಟಿಂಗ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ದಲಿತ ಶಾಸಕರು, ನಾಯಕರು, ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಕೊಟ್ಟಿಲ್ಲ ಅದಕ್ಕೆ ಸಭೆ ಮಾಡ್ತೀನಿ ಎಂದು ಹೇಳುತ್ತಾರೆ. ಡಿನ್ನರ್ ಪಾರ್ಟಿ ಮಾಡಿ ಚರ್ಚೆ ಮಾಡ್ತೀವಿ ಅಂತಾರೆ. ಡಿನ್ನರ್ ಪಾರ್ಟಿಯಲ್ಲಿ ಚರ್ಚೆ ಮಾಡೋದಾದ್ರೆ ಕ್ಯಾಬಿನೆಟ್ ಇರೋದು ಯಾಕೆ ಅಂತ ಪ್ರಶ್ನೆ ಮಾಡಿದರು.ಇದನ್ನೂ ಓದಿ: Kempegowda International Airport | 2024ರಲ್ಲಿ ದಾಖಲೆಯ 4 ಕೋಟಿ ಪ್ರಯಾಣಿಕರ ಸಂಖ್ಯೆ
ಎಸ್ಸಿ-ಎಸ್ಟಿ ಇರಲಿ ಯಾವುದೇ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸಿಗದೇ ಇದ್ದರೆ ಕ್ಯಾಬಿನೆಟ್ ಚರ್ಚೆ ಮಾಡಬೇಕಾ? ಅಥವಾ ಬೇರೆಕಡೆ ಊಟಕ್ಕೆ ಸೇರಿ ಡಿನ್ನರ್‌ನಲ್ಲಿ ಚರ್ಚೆ ಮಾಡ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಕಾಂಗ್ರೆಸ್‌ನಲ್ಲಿ ಸಿಎಂ ಫೈಟ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ನಕಾರ ಮಾಡಿದ ಕುಮಾರಸ್ವಾಮಿ, ಅದು ಅವರ ಪಕ್ಷದ ವಿಚಾರ. ಅವರ ಪಕ್ಷದ ವಿಚಾರ ಅವರು ಚರ್ಚೆ ಮಾಡಿಕೊಳ್ಳಲಿ ಬಿಡು ಎಂದು ಜಾರಿಕೊಂಡರು.ಇದನ್ನೂ ಓದಿ: ಡಿಕೆಶಿ ಎರಡೂವರೆ ವರ್ಷ ಯಾಕೆ, ಮುಂದೆ ಐದು ವರ್ಷ ಸಿಎಂ ಆಗಲಿ: ಕೆ.ಎನ್.ರಾಜಣ್ಣ