ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲಾತಿ (SC ST Reservation) ಕಾಂಗ್ರೆಸ್ (Congress) ಪಕ್ಷದ ಕೂಸು. ನ್ಯಾ.ನಾಗಮೋಹನ್ ದಾಸ್ ಸಮಿತಿ (Nagamohan Das Committee) ನಾವು ಮಾಡಿದ್ದಕ್ಕೆ ಯಶಸ್ಸು ಕಂಡಿದೆ ಎಂದು ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ತಿರುಗೇಟು ನೀಡಿದ್ದಾರೆ.
ಕೆಪಿಸಿಸಿ (KPCC) ಕಚೇರಿಯಲ್ಲಿ ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಬಯಕೆ ಜನಾಂಗಕ್ಕೆ ನ್ಯಾಯ ಒದಗಿಸಬೇಕು ಎನ್ನುವುದಾಗಿದೆ. ಎಸ್‌ಟಿ ಜನಾಂಗದ ಮೇಲೆ ಬಿಜೆಪಿಗೆ (BJP) ನಂಬಿಕೆ ಇಲ್ಲ. ಅಧಿಕಾರ ಬಂದ 24 ಗಂಟೆಯಲ್ಲೇ ಬಿಜೆಪಿ ಇದನ್ನು ಮಾಡಬೇಕಿತ್ತು ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಬಸವರಾಜ ಬೊಮ್ಮಾಯಿ ಅವರಿಗೆ ಗಂಡೆದೆ ಇದೆ – ಆರ್.ಅಶೋಕ್
Advertisement
Advertisement
ಈಗಲೂ ಡಬಲ್ ಇಂಜಿನ್ ಸರ್ಕಾರ ಇದೆ. ಬರೀ ಪೇಪರ್‌ನಲ್ಲಿ ಇಟ್ಟು ಚಾಕ್ಲೆಟ್ ಕೊಡೋಕೆ ಹೋಗಬೇಡಿ. ಬಿಜೆಪಿ ತೀರ್ಮಾನ ಕೇವಲ ಕಣ್ಣು ಒರೆಸುವುದಷ್ಟೇ, ಬೇರೇನೂ ಇಲ್ಲ. ಸಿಎಂ ದೆಹಲಿಯಲ್ಲಿ ಕೂತು ಪಾರ್ಲಿಮೆಂಟ್‌ನಲ್ಲಿ ಇಟ್ಟು 9ನೇ ಶೆಡ್ಯೂಲ್‌ನಲ್ಲಿ ಮಾಡಲಿ ಎಂದು ಸವಾಲು ಹಾಕಿದ್ದಾರೆ.
Advertisement
Advertisement
ಭಾರತ್ ಜೋಡೋ ಯಾತ್ರೆ (Bharat Jodo Yatra) ಕುರಿತು ಮಾತನಾಡಿದ ಡಿಕೆಶಿ, ಪಾದಯಾತ್ರೆ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ದೆಹಲಿಯಲ್ಲಿ ನಾಡಿದ್ದು ಮೀಟಿಂಗ್ ಇದೆ. ಬಸ್ ಯಾತ್ರೆ ಬಗ್ಗೆ ನಾನೊಬ್ಬನೇ ಕೂತು ನಿರ್ಧಾರ ಮಾಡುವುದಕ್ಕೆ ಆಗುವುದಿಲ್ಲ. ಅಲ್ಲಿ ಈ ಸಂಬಂಧ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಎಲ್ಲ ನಾಯಕರ ಬಳಿ ಚರ್ಚೆ ಮಾಡಿ ಬಸ್ ಯಾತ್ರೆ ಬಗ್ಗೆ ನಿರ್ಧಾರ ಮಾಡ್ತೇವೆ. ಕಲೆಕ್ಟಿವ್ ಆಗಿ ಕುಳಿತು ನಿರ್ಧಾರ ಕೈಗೊಂಡು ಕಲೆಕ್ಟಿವ್ ಲೀಡರ್ ಶಿಪ್‌ನಲ್ಲಿ ಮತ್ತೊಂದು ಯಾತ್ರೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: SC-ST ಮೀಸಲಾತಿ ಹೆಚ್ಚಳಕ್ಕೆ ಸುಗ್ರೀವಾಜ್ಞೆ – ಮುಂದಿನ ಅಧಿವೇಶನದಲ್ಲಿ ಅನುಮೋದನೆ: ಬೊಮ್ಮಾಯಿ