ಬೆಂಗಳೂರು: ಎಸ್ಸಿ-ಎಸ್ಟಿ ಮೀಸಲಾತಿ (SC ST Reservation) ಹೆಚ್ಚಿಸಲು ರಾಜ್ಯ ಸರ್ಕಾರ (Government Of Karnataka) ಇತ್ತೀಚೆಗಷ್ಟೇ ನಿರ್ಧಾರ ಮಾಡಿತ್ತು. ಇದನ್ನು ಸುಗ್ರಿವಾಜ್ಞೆ ಮೂಲಕ ಜಾರಿ ಮಾಡಲು ಬೊಮ್ಮಾಯಿ (Basavaraj Bommai) ಸರ್ಕಾರ ಪ್ಲಾನ್ ಮಾಡಿದೆ.
ಇದೇ 20ರಂದು ಅಂದ್ರೆ ಗುರುವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ಈ ಸಂಬಂಧ ಸುಗ್ರಿವಾಜ್ಞೆ ಹೊರಡಿಸಲು ಮುಖ್ಯಮಂತ್ರಿ ಮುಂದಾಗಿದ್ದಾರೆ. ಬೆಳಗಾವಿಯಲ್ಲಿ ನಡೆಯೋ ಚಳಿಗಾಲದ ಅಧಿವೇಶನದಲ್ಲಿ ಮೀಸಲಾತಿ ಹೆಚ್ಚಳ ಕುರಿತ ವಿಧೇಯಕ ಮಂಡಿಸಲಿದ್ದಾರೆ. ಇದನ್ನೂ ಓದಿ: ಚನ್ನಪಟ್ಟಣದಲ್ಲಿ ನಿಲ್ಲದ ರಾಜಕೀಯ ದಂಗಲ್ – ಎಸ್‍ಸಿ, ಎಸ್‍ಟಿ ಅನುದಾನಕ್ಕೆ ಸಿಪಿವೈ ತಡೆ ಆರೋಪ
Advertisement
Advertisement
ಈ ಮಧ್ಯೆ ಒಕ್ಕಲಿಗ ಸಮುದಾಯ ಕೂಡ ಮೀಸಲಾತಿ (Reservation) ಹೆಚ್ಚಿಸಬೇಕೆಂಬ ಬೇಡಿಕೆ ಇಟ್ಟಿದೆ. ಕೋಲಾರದಲ್ಲಿ ಮಾತನಾಡಿದ ಆದಿಚುಂಚನಗಿರಿ ಮಠದ ಸ್ವಾಮೀಜಿ, ಶೇಕಡಾ 4ರಷ್ಟಿರುವ ಒಕ್ಕಲಿಗ ಸಮುದಾಯದ ಮೀಸಲಾತಿಯನ್ನು ಶೇಕಡಾ 12ಕ್ಕೆ ಹೆಚ್ಚಳ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದನ್ನೂ ಓದಿ: AICC ಅಧ್ಯಕ್ಷೀಯ ಚುನಾವಣೆಯಲ್ಲಿ 96ರಷ್ಟು ಮತದಾನ- ಕನ್ನಡಿಗ ಖರ್ಗೆ ಪಟ್ಟಕ್ಕೇರೋದು ಫಿಕ್ಸ್
Advertisement
Advertisement
ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್ (Dk Shivakumar), ಈ ಬೇಡಿಕೆ ತಪ್ಪಲ್ಲ. ಇದರ ಬಗ್ಗೆ ಮುಂದೆ ಮಾತಾಡೋಣ ಎಂದಿದ್ದಾರೆ. ಇನ್ನು ಪಂಚಮಸಾಲಿಗಳ ಮೀಸಲಾತಿ ಬೇಡಿಕೆ ಕುರಿತು ಸಮಾಲೋಚನೆ ಮಾಡ್ತೀವಿ ಅಂತಾ ಬಿಜೆಪಿ (BJP) ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.