ಬೆಂಗಳೂರು: ಸಿಎಂ ಸಚಿವರ ಜೊತೆ ಊಟ ಮಾಡಿದರೆ ತಪ್ಪೇನು ಎಂದು ಸಿಎಂ ಡಿನ್ನರ್ ಪಾಲಿಟಿಕ್ಸ್ (Dinner Politics) ಅನ್ನು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ (MB Patil) ಸಮರ್ಥಿಸಿಕೊಂಡಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಎಸ್‌ಸಿ, ಎಸ್ಟಿ ಶಾಸಕರು, ಸಚಿವರು ಊಟಕ್ಕೆ ಕರೆದಿದ್ದಾರೆ. ಸಿಎಂ ಹೋಗಿದ್ದಾರೆ. ಸಹಜವಾಗಿ ಅವರ ಸಮಸ್ಯೆ ಹೇಳಿಕೊಂಡಿದ್ದಾರೆ. ಸಿಎಂ ನಮ್ಮ ಮನೆಗೆ ಊಟಕ್ಕೆ ಕರೆದರೂ ಬರುತ್ತಾರೆ, ಅದರಲ್ಲಿ ತಪ್ಪೇನಿದೆ? ಊಟಕ್ಕೆ ಹೋದರೆ ತಪ್ಪೇನಿದೆ? ಪಕ್ಷದಲ್ಲಿ ಹೈಕಮಾಂಡ್ ಇದೆ, ವರಿಷ್ಠರಿದ್ದಾರೆ. ಎಲ್ಲವನ್ನೂ ಅವರು ನೋಡಿಕೊಳ್ಳುತ್ತಾರೆ ಎಂದರು. ಇದನ್ನೂ ಓದಿ: ಬ್ಯಾಟಿಂಗ್‌ನಲ್ಲಿ ಧಮ್ ಇಲ್ಲ – ಕೋಚ್‌ಗಳು ಏನ್ ಮಾಡ್ತಿದ್ದಾರೆ? – ಗವಾಸ್ಕರ್ ತೀವ್ರ ತರಾಟೆ
Advertisement
Advertisement
ಅಶ್ವಥ್ ನಾರಾಯಣ್, ಬೊಮ್ಮಾಯಿ ನಮ್ಮನೆಗೆ ಊಟಕ್ಕೆ ಬಂದಿದ್ದರು. ಅದು ದೊಡ್ಡ ಸುದ್ದಿ ಆಗಿತ್ತು. ಊಟಕ್ಕೆ ಹೋಗುವುದೆಲ್ಲ ದೊಡ್ಡದಲ್ಲ. ಸಿಎಂ, ಡಿಸಿಎಂ ಇಬ್ಬರನ್ನು ನಮ್ಮ ಮನೆಗೂ ಊಟಕ್ಕೆ ಕರೆಯೋಣ, ಬರುತ್ತಾರೆ. ಅದರಲ್ಲಿ ವಿಶೇಷ ಏನೂ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಪುರಿಯ ಜಗನ್ನಾಥ ದೇವಸ್ಥಾನದ ಮೇಲೆ ಡ್ರೋನ್ ಹಾರಾಟ – ದೇವಾಲಯದ ಸುತ್ತ ಪೊಲೀಸ್ ಬಿಗಿಭದ್ರತೆ
Advertisement