ಚಾಮರಾಜನಗರ: ಕಾಮಗಾರಿಗಳಲ್ಲಿ 40 ಪರ್ಸೆಂಟ್ ಕಮಿಷನ್ (40 Percent Commission)ಪಡೆಯುತ್ತಿರುವುದು ಸತ್ಯ ಎಂದು ಕರ್ನಾಟಕ ಎಸ್ಸಿ-ಎಸ್ಟಿ (SC-ST) ಗುತ್ತಿಗೆದಾರರ ಸಂಘ ಗಂಭೀರ ಆರೋಪ ಮಾಡಿದೆ.
ಚಾಮರಾಜನಗರದಲ್ಲಿ ಮಾತನಾಡಿದ ಎಸ್ಸಿ-ಎಸ್ಟಿ ಗುತ್ತಿಗೆದಾರರ ಸಂಘದ (Contractors Association) ರಾಜ್ಯಾಧ್ಯಕ್ಷ ಮಹದೇವಸ್ವಾಮಿ, ಕಮಿಷನ್ ದಂಧೆ ಬಗ್ಗೆ ರಾಜ್ಯ ಗುತ್ತಿಗೆದಾರರ ಸಂಘ ಮಾಡಿರುವ ಆರೋಪ ಸರಿಯಾಗಿದೆ. ಇದರಲ್ಲಿ ರಾಜ್ಯದ ಎಲ್ಲಾ ಶಾಸಕರು, ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಟೋಲ್‌ಗಳಲ್ಲಿ ವಾಹನ ನಿಲ್ಲಿಸುವಂತಿಲ್ಲ- ಟೋಲ್ ಸಂಗ್ರಹಕ್ಕೆ ವಿಶೇಷ ತಂತ್ರಜ್ಞಾನ ಅಳವಡಿಕೆಗೆ ಚಿಂತನೆ
Advertisement
Advertisement
50 ಲಕ್ಷ ರೂ. ವರೆಗಿನ ಟೆಂಡರ್‌ಗಳಲ್ಲಿ (Tender) ಮೀಸಲಾತಿ ಉಲ್ಲಂಘನೆ ಮಾಡುವ ಮೂಲಕ 2017ರ ಗುತ್ತಿಗೆ ಮೀಸಲಾತಿ ಕಾಯ್ದೆಯನ್ನು ಸಹ ರಾಜ್ಯ ಬಿಜೆಪಿ ಸರ್ಕಾರ ದುರ್ಬಲಗೊಳಿಸುತ್ತಿದೆ. ತುಂಡು ಗುತ್ತಿಗೆಗಳನ್ನು ಒಟ್ಟಾಗಿ ಸೇರಿಸಿ ದೊಡ್ಡಮೊತ್ತದ ಪ್ಯಾಕೇಜ್ ಟೆಂಡರ್ ಕರೆದು ಎಸ್ಸಿ-ಎಸ್ಟಿ ಗುತ್ತಿಗೆದಾರರು ಟೆಂಡರ್ ಹಾಕಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ಮಾಡಲಾಗುತ್ತಿದೆ ಎಂದು ದೂರಿದ್ದಾರೆ. ಇದನ್ನೂ ಓದಿ: ಕೊಡಗು ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ: ಆರಗ ಜ್ಞಾನೇಂದ್ರ
Advertisement
Advertisement
ನಿಯಮ ಉಲ್ಲಂಘಿಸಿ KRIDLಗೆ 2 ಕೋಟಿವರೆಗಿನ ಕಾಮಗಾರಿಗಳನ್ನು ನೇರಗುತ್ತಿಗೆ ನೀಡಲಾಗುತ್ತಿದೆ. ಸಕಾಲಕ್ಕೆ ಸುತ್ತೋಲೆ ಹೊರಡಿಸಿ ಗುತ್ತಿಗೆ ನೀಡುತ್ತಿದ್ದ ವಿಧಾನವನ್ನೇ ಬದಲಾಯಿಸಿ ಅಕ್ರಮಕ್ಕೆ ದಾರಿ ಮಾಡಿಕೊಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.