ಚೆನ್ನೈ: ವಿವಾಹೇತರ ಸಂಬಂಧ ಅಪರಾಧವಲ್ಲ ಎಂದು ನ್ಯಾ. ದೀಪಕ್ ಮಿಶ್ರಾ ನೇತೃತ್ವದ ಸುಪ್ರೀಂ ಕೋರ್ಟ್ ನ್ಯಾಯಪೀಠ ತೀರ್ಪು ನೀಡಿದ ಬೆನ್ನಲ್ಲೇ ತಮಿಳುನಾಡಿನಲ್ಲಿ ಮಹಿಳೆಯೊಬ್ಬರು ಪತಿ ಬೇರೊಬ್ಬ ಮಹಿಳೆಯ ಜೊತೆಗೆ ಸಂಬಂಧ ಹೊಂದಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಮಿಳನಾಡಿನ ಚೆನ್ನೈನ ಪುಷ್ಪಲತಾ (24) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಜಾನ್ ಪೌಲ್ ಫ್ರಾಂಕ್ಲಿನ್ (27) ಮತ್ತು ಪುಷ್ಪಲತಾ 2 ವರ್ಷಗಳ ಹಿಂದೆಯೇ ಇಬ್ಬರು ಪ್ರೀತಿಸಿ, ಪೋಷಕರ ವಿರೋಧದ ನಡುವೆ ವಿವಾಹವಾಗಿದ್ದರು.
Advertisement
ಜಾನ್ ಪೌಲ್ ಫ್ರಾಂಕ್ಲಿನ್ ಚೆನ್ನೈ ನಗರದ ಪಾರ್ಕ್ ಒಂದರಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದರು. ಪತ್ನಿ ಪುಷ್ಪಲತಾ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದ್ದರಿಂದ ಒಮ್ಮೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ. ತಪಾಸಣೆ ಮಾಡಿದ ವೈದ್ಯರು, ಪುಷ್ಪಲತಾಗೆ ಕ್ಯಾನ್ಸರ್ ಇರುವುದಾಗಿ ತಿಳಿಸಿದ್ದಾರೆ. ಇದರಿಂದಾಗಿ ಪತ್ನಿಯ ಜೊತೆಗೆ ಹಂತ ಹಂತವಾಗಿ ದೂರ ಉಳಿಯುತ್ತ ಬಂದ ಜಾನ್ ಪೌಲ್ ಫ್ರಾಂಕ್ಲಿನ್ ಮತ್ತೊಬ್ಬ ಮಹಿಳೆಯ ಜೊತೆಗೆ ಸಂಬಂಧ ಬೆಳೆಸಿದ್ದ.
Advertisement
ಪುಷ್ಪಲತಾ ಎಷ್ಟೇ ಕೇಳಿಕೊಂಡರೂ, ಜಾನ್ ಪೌಲ್ ಫ್ರಾಂಕ್ಲಿನ್ ತನ್ನ ಸಂಬಂಧವನ್ನು ಬಿಟ್ಟಿರಲಿಲ್ಲ. ಬದಲಾಗಿ ‘ಮತ್ತೊಬ್ಬರ ಜೊತೆಗೆ ಸಂಬಂಧ ಹೊಂದುವುದನ್ನು ತಡೆಯುವ ಹಕ್ಕು ನಿನಗಿಲ್ಲ ಎಂದು ಪತಿ ವಾದಿಸಿದ್ದಾನೆ. ಇದರಿಂದಾಗಿ ಬೇರೆ ದಾರಿ ತೋಚದೆ ಪುಷ್ಪಲತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತ ಪೊಲೀಸರು ಜಾನ್ ಪೌಲ್ ಫ್ರಾಂಕ್ಲಿನ್ ನನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ವರದಿಯಾಗಿದೆ.
Advertisement
ಸುಪ್ರೀಂ ಕೋರ್ಟ್ ಹೇಳಿದ್ದು ಏನು?
ವ್ಯಭಿಚಾರವನ್ನು ಅಪರಾಧ ಎಂದು ಪರಿಗಣಿಸಿ ಪುರುಷನಿಗೆ ಮಾತ್ರ ಶಿಕ್ಷೆ ವಿಧಿಸುವ ಐಪಿಸಿ ಸೆಕ್ಷನ್ 497 ಅಸಾಂವಿಧಾನಿಕ. ವ್ಯಭಿಚಾರ ಅಪರಾಧವಾಗು ವುದಕ್ಕೆ ಸಾಧ್ಯವಿಲ್ಲ. ಆದರೆ ಅದು ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದರೆ ಮಾತ್ರ ಅಪರಾಧವಾಗುತ್ತದೆ ಎಂದು ಸುಪ್ರೀಂ ತನ್ನ ತೀರ್ಪಿನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿತ್ತು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv