Connect with us

Bengaluru City

ನಾನು ಜಯಲಲಿತಾ ಮಗಳು, ಡಿಎನ್‍ಎ ಟೆಸ್ಟ್ ಆಗ್ಲಿ ಎಂದು ಅಮೃತಾ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

Published

on

ಬೆಂಗಳೂರು: ತಾನು ಜಯಲಲಿತಾ ಮಗಳು, ಇದನ್ನ ಸಾಬೀತುಪಡಿಸಲು ಡಿಎನ್‍ಎ ಪರೀಕ್ಷೆ ಆಗಲಿ ಎಂದು ಬೆಂಗಳೂರಿನ ಅಮೃತಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ತಾನೇ ಜಯಲಲಿತಾ ಉತ್ತರಾಧಿಕಾರಿ ಎಂದು ಅರ್ಜಿ ಹಾಕಿದ್ದ ಅಮೃತಾ, ವಿಚಾರಣೆ ನಡೆಸಬೇಕೆಂದು ಮನವಿ ಮಾಡಿದ್ದರು. ಡಿಎನ್‍ಎ ಪರೀಕ್ಷೆಗೂ ಸಿದ್ಧ ಎಂದಿದ್ದರು. ಆದ್ರೆ ಜಯಾ ಸತ್ತು ಸುಮಾರು ಒಂದು ವರ್ಷ ಕಳೆದ ನಂತರ ಬಂದ ಹಿನ್ನೆಲೆಯಲ್ಲಿ ಅಮೃತಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ.

ನಿಜಕ್ಕೂ ವಿಚಾರಣೆ ಆಗಲೇಬೇಕು ಎನ್ನುವುದಾದರೆ ಹೈಕೋರ್ಟಿಗೆ ಹೋಗಿ. ಮೊದಲು ಕರ್ನಾಟಕ ಹೈಕೋರ್ಟ್ ವಿಚಾರಣೆ ಮಾಡಲಿ ಅಂತ ಅಮೃತಾ ಪರ ವಕೀಲರಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

ಈ ಹಿಂದೆಯೇ ಅಮೃತಾ ತಾನು ಜಯಲಲಿತಾ ಅವರು ಮಗಳು ಎಂದು ಹೇಳಿ ರಾಷ್ಟ್ರಪತಿಯಿಂದ ಹಿಡಿದು ಸುಪ್ರೀಂ ಕೋರ್ಟ್, ಪ್ರಧಾನಿ, ಮಾನವ ಹಕ್ಕುಗಳ ಆಯೋಗ ಹೀಗೆ ನಾನಾ ಕಡೆ ಮನವಿ ಪತ್ರ ಸಲ್ಲಿಸಿದ್ದರು.

ಜನ್ಮ ರಹಸ್ಯ: ಸಂಧ್ಯಾ ಮತ್ತು ಜಯರಾಂ ದಂಪತಿಗೆ ಜಯಲಲಿತಾ ಸೇರಿ ಒಟ್ಟು ಮೂವರು ಮಕ್ಕಳು. ಅವರೇ ಜಯಕುಮಾರ್, ಜಯಲಲಿತಾ ಅಲಿಯಾಸ್ ಕೋಮಲವಲ್ಲಿ ಹಾಗು ಶೈಲಜಾ. ಇದೇ ಶೈಲಜಾ ಅವರ ಮಗಳಾಗಿ ಅಮೃತಾ ಬೆಳೆದಿದ್ದರು.

ನನ್ನಪ್ಪ ಶೋಭನ್ ಬಾಬು: ಅಮೃತ ತನ್ನ ತಂದೆ ತೆಲಗು ನಟ ಶೋಭನ್ ಬಾಬು ಎಂಬ ಸತ್ಯವನ್ನು ಹೊರಹಾಕಿದ್ದರು. ಜಯಲಲಿತಾ ಅವರು ತೀರ ಸಂಕಷ್ಟದಲ್ಲಿದ್ದಾಗ ಶೋಭನ್ ಬಾಬು ಸಾಂತ್ವನ ಹೇಳಲು ಬಂದಿದ್ದರು. ಮುಂದೆ ಸಾಂತ್ವನ, ಗೆಳತನಕ್ಕೆ ತಿರುಗುತ್ತದೆ. ಗೆಳತನ ಪ್ರೀತಿ-ಪ್ರೇಮಕ್ಕೆ ಬದಲಾಗಿದೆ. ಆ ಇಬ್ಬರ ಪ್ರೀತಿಯ ಕುಡಿಯಾಗಿ ಹುಟ್ಟಿದವಳು ನಾನು ಎನ್ನುವುದು ಅಮೃತಾ ಅವರ ವಾದವಾಗಿದೆ.

ಶೋಭನ್ ಬಾಬು ಅವರ ಮೊದಲ ಪತ್ನಿಯಿಂದಾಗಿ ಜಯಲಲಿತಾರ ಮದುವೆಗೆ ತೀವ್ರ ಅಡ್ಡಿಯುಂಟಾಗಿತ್ತು. ನಾನಾ ಕಾರಣಗಳಿಂದ ಕೊನೆ ಕ್ಷಣದಲ್ಲಿ ಇಬ್ಬರ ಮದುವೆ ಮುರಿದು ಬಿದ್ದಿತ್ತು. ಆ ಹೊತ್ತಿಗೆ ಜಯಲಲಿತಾರ ಗರ್ಭದಲ್ಲಿ ಅಮೃತ ಇದ್ದರು. ಕೊನೆಗೆ ಚೆನ್ನೈನ ಮೈಲಾಪುರದಲ್ಲಿ ಅಮೃತಾರ ಜನನವಾಯ್ತು ಎಂದು ಹೇಳಿದ್ದಾರೆ.

ಆ ಇಬ್ಬರೇ ಸಾಕ್ಷಿ: ಜಯಲಲಿತಾರ ಸಂಬಂಧಿ ರಜಿನಿ ರವೀಂದ್ರನಾಥ್ ಮತ್ತು ಎಲ್.ಎಸ್.ಲಲಿತಾರನ್ನು ಕರೆಸಿಕೊಂಡಿದ್ದರು. ಆ ಇಬ್ಬರು ನನ್ನ ಜನನದ ಕಾರ್ಯವನ್ನು ನೋಡಿಕೊಂಡಿದ್ದಾರೆ. ಅವತ್ತು ಎಲ್ಲರೂ ಸೇರಿ ದೇವರ ಮುಂದೆ ಪ್ರಮಾಣ ಮಾಡಿದ್ದ ಕಾರಣಕ್ಕೆ ಗುಟ್ಟು ರಟ್ಟಾಗಿಲ್ಲ. ನಾನು ಹತ್ತಾರು ಬಾರಿ ಜಯಾಲಲಿತಾರ ಪೋಯಸ್ ಗಾರ್ಡನ್ ಭೇಟಿ ಕೊಟ್ಟಿದ್ದೇನೆ. ಅಮ್ಮ ನನ್ನನ್ನು ತುಂಬಾ ಅಕ್ಕರೆಯಿಂದ ನೋಡಿಕೊಂಡ್ರು. ಬೇಕಿದ್ದಕ್ಕಿಂತ ಹೆಚ್ಚಾಗಿ ನನ್ನ ಜೋಪಾನ ಮಾಡಿದ್ದಾರೆ. ನನ್ನ ಹೆಸರಿನಲ್ಲಿ ಜಯಲಿಲಿತಾ ಚಿನ್ನ ಮತ್ತು ಡೈಮಂಡ್ ಆಭರಣಗಳನ್ನು ಖರೀದಿ ಮಾಡಿದ್ದಾರೆ. ಹಲವು ಕಡೆ ಆಸ್ತಿಗಳನ್ನು ನನಗೆ ಖರೀದಿ ಮಾಡಿರೋ ಬಗ್ಗೆ ಹತ್ತಾರು ಬಾರಿ ಹೇಳಿದ್ದಾರೆ ಎಂದು ಅಮೃತಾ ಹೇಳಿದ್ದಾರೆ.

https://www.youtube.com/watch?v=n_5kQ-hV6eY

https://www.youtube.com/watch?v=hg7er083YCg

Click to comment

Leave a Reply

Your email address will not be published. Required fields are marked *