ನವದೆಹಲಿ: ರಾಜಕೀಯ ಪಕ್ಷಗಳಿಗೆ ನೀಡಿದ ಚುನಾವಣಾ ಬಾಂಡ್‍ಗಳ (Electoral Bonds) ಮಾಹಿತಿಯನ್ನು ಕೇಂದ್ರ ಚುನಾವಣಾ ಆಯೋಗಕ್ಕೆ (Election Commission of India) ನೀಡಿದ ಬೆನ್ನಲ್ಲೇ ಸುಪ್ರೀಂಕೋರ್ಟ್‍ಗೆ (Supreme Court) ಎಸ್‍ಬಿಐ (SBI) ಅಫಿಡವಿಟ್ ಸಲ್ಲಿಸಿದೆ. ಏ.1, 2019 ರಿಂದ ಫೆ.15, 2024ರ ಅವಧಿಯಲ್ಲಿ ಒಟ್ಟು 22,217 ಬಾಂಡ್‍ಗಳನ್ನು ಖರೀದಿಸಲಾಗಿದೆ, ಅವುಗಳಲ್ಲಿ 22,030 ಬಾಂಡ್‍ಗಳನ್ನು ರಿಡೀಮ್ ಮಾಡಲಾಗಿದೆ ಎಂದು ನ್ಯಾಯಾಲಯಕ್ಕೆ ಎಸ್‍ಬಿಐ ತಿಳಿಸಿದೆ.
ಬ್ಯಾಂಕ್‍ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ದಿನೇಶ್ ಖಾರಾ ಅವರು ಈ ಮಾಹಿತಿಯೊಂದಿಗೆ ಸುಪ್ರೀಂಕೋರ್ಟ್‍ಗೆ ಅಫಿಡವಿಟ್ ಸಲ್ಲಿಸಿದ್ದಾರೆ. ಅಫಿಡವಿಟ್‍ನಲ್ಲಿ ಬಾಂಡ್ ಖರೀದಿಸಿದ ದಿನಾಂಕ, ಮುಖಬೆಲೆ ಮತ್ತು ಖರೀದಿದಾರರ ಹೆಸರನ್ನು ದಾಖಲಿಸಿದ ದಾಖಲೆಗಳು ಮತ್ತು ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದಂತೆ ಎನ್‍ಕ್ಯಾಶ್‍ಮೆಂಟ್ ದಿನಾಂಕ ಮತ್ತು ಎನ್‍ಕ್ಯಾಶ್ ಮಾಡಿದ ಬಾಂಡ್‍ಗಳ ಮುಖಬೆಲೆಯ ಮಾಹಿತಿಯನ್ನು ದಾಖಲಿಸಲಾಗಿದೆ. ಇದನ್ನೂ ಓದಿ: ಜಪಾನ್ ಖಾಸಗಿ ಉಪಗ್ರಹ ಉಡಾವಣೆಯಾದ ಕೆಲವೇ ಸೆಕೆಂಡುಗಳಲ್ಲಿ ಸ್ಫೋಟ
Advertisement
Advertisement
ಮೂಲಗಳ ಪ್ರಕಾರ, ಎಸ್‍ಬಿಐ ನ್ಯಾಯಾಲಯದ ಆದೇಶಗಳನ್ನು ಪಾಲಿಸಿದೆ. ಚುನಾವಣಾ ಬಾಂಡ್‍ಗಳ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ. 2018ರಲ್ಲಿ ಯೋಜನೆ ಪ್ರಾರಂಭವಾದಾಗಿನಿಂದ ಎಸ್‍ಬಿಐ 30 ಹಂತಗಳಲ್ಲಿ 16,518 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್‍ಗಳನ್ನು ಬಿಡುಗಡೆ ಮಾಡಿದೆ ಎಂದು ತಿಳಿದು ಬಂದಿದೆ.
Advertisement
Advertisement
ಅನಾಮಧೇಯ ರಾಜಕೀಯ ನಿಧಿಯನ್ನು ಅನುಮತಿಸುವ ಕೇಂದ್ರದ ಚುನಾವಣಾ ಬಾಂಡ್‍ಗಳ ಯೋಜನೆಯನ್ನು ಸುಪ್ರೀಂಕೋರ್ಟ್ ಈ ಹಿಂದೆ ರದ್ದುಗೊಳಿಸಿತ್ತು. ಇದನ್ನು ಅಸಂವಿಧಾನಿಕ ಎಂದು ಕರೆದು ಈವರೆಗೂ ನೀಡಿದ ದೇಣಿಗೆಯನ್ನು ಬಹಿರಂಗಪಡಿಸುವಂತೆ ಆದೇಶಿಸಿತು. ಎಸ್‍ಬಿಐ ವಿವರಗಳನ್ನು ಬಹಿರಂಗಪಡಿಸಲು ಜೂನ್ 30 ರವರೆಗೆ ಸಮಯ ಕೋರಿತ್ತು. ಮನವಿಯನ್ನು ನ್ಯಾಯಾಲಯವು ತಿರಸ್ಕರಿಸಿ, ಮಂಗಳವಾರದ ಕೆಲಸದ ಸಮಯ ಮುಕ್ತಾಯ ಆಗುವುದರೊಳಗೆ ಎಲ್ಲಾ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ತಿಳಿಸಿತ್ತು. ಇದನ್ನೂ ಓದಿ: 5,8 ಮತ್ತು 9ನೇ ತರಗತಿಯ ಬೋರ್ಡ್ ಪರೀಕ್ಷೆಗೆ ಸುಪ್ರೀಂ ತಡೆ – ಎಕ್ಸಾಂ ಮುಂದೂಡಿದ ಶಿಕ್ಷಣ ಇಲಾಖೆ