ನವದೆಹಲಿ: ಸುಪ್ರೀಂ ಕೋರ್ಟ್‌ನ (Supreme Court) ಕಟ್ಟುನಿಟ್ಟಿನ ಆದೇಶದ ಬಳಿಕ ಭಾರತೀಯ ಸ್ಟೇಟ್ ಬ್ಯಾಂಕ್ ಮಂಗಳವಾರ (ಮಾ.12) ಸಂಜೆಯೇ ರಾಜಕೀಯ ಪಕ್ಷಗಳಿಗೆ ನೀಡಿದ ಚುನಾವಣಾ ಬಾಂಡ್‌ಗಳ (Electoral Bond) ಮಾಹಿತಿಯನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ. ಈ ದತ್ತಾಂಶ ಸ್ವೀಕೃತಿಯನ್ನು ಚುನಾವಣಾ ಸಮಿತಿಯಿಂದ ಸ್ವೀಕೃತವಾದ ದತ್ತಾಂಶದೊಂದಿಗೆ ಒಗ್ಗೂಡಿಸಿ ಶುಕ್ರವಾರ ಸಂಜೆ 5 ಗಂಟೆಯೊಳಗೆ ಬಿಡುಗಡೆ ಮಾಡಲಾಗುತ್ತದೆ.
ದತ್ತಾಂಶಗಳನ್ನು ಸಲ್ಲಿಸಿರುವ ಬಗ್ಗೆ ಬ್ಯಾಂಕ್ (SBI) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರು ನ್ಯಾಯಾಲಯದ ಆದೇಶವನ್ನು ದೃಢೀಕರಿಸುವ ಅಫಿಡವಿಟ್ ಇನ್ನೂ ಸಲ್ಲಿಸಿಲ್ಲ. ಅದನ್ನು ಬುಧವಾರ ಸಲ್ಲಿಸಲಾಗುವುದೆಂದು ತಿಳಿಸಿರುವುದಾಗಿ ಮೂಲಗಳು ಹೇಳಿವೆ. ಇದನ್ನೂ ಓದಿ: ಲೋಕಸಭೆಗೆ ಸ್ಪರ್ಧಿಸ್ತಾರಾ ಪ್ರಿಯಾಕೃಷ್ಣ? – ಇಬ್ಬರು ಸಚಿವರ ಕುಟುಂಬಸ್ಥರಿಗೂ ಟಿಕೆಟ್ ಸಾಧ್ಯತೆ
Advertisement
Advertisement
ಎಸ್‌ಬಿಐ ಮನವಿ ಏನಿತ್ತು? ಸುಪ್ರೀಂ ಕೋರ್ಟ್ ಹೇಳಿದ್ದೇನು?
ಚುನಾವಣಾ ಬಾಂಡ್‌ಗಳ ಮಾಹಿತಿ ನೀಡಲು ಜೂನ್ 30ರ ವರೆಗೆ ವರೆಗೂ ಕಾಲವಕಾಶ ಕೋರಿ ಎಸ್‌ಬಿಐ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಹೆಚ್ಚುವರಿ ಕಾಲಮಿತಿ ನೀಡಲು ಸಾಧ್ಯವಿಲ್ಲ ಮಂಗಳವಾರ ಸಂಜೆಯೊಳಗೆ ಅಗತ್ಯ ಮಾಹಿತಿಯನ್ನು ಕೇಂದ್ರ ಚುನಾವಣಾ ಆಯೋಗದ ಜೊತೆಗೆ ಹಂಚಿಕೊಳ್ಳಬೇಕು ಎಂದು ಸಿಜೆಐ ಡಿ.ವೈ ಚಂದ್ರಚೂಡ್ ನೇತೃತ್ವದ ಪೀಠ ಸೂಚಿಸಿತ್ತು.
Advertisement
ಮಾರ್ಚ್ 6ರ ಒಳಗೆ ಮಾಹಿತಿ ನೀಡುವಂತೆ ಈ ಹಿಂದೆ ಸಾಂವಿಧಾನಿಕ ಪೀಠ ಆದೇಶ ನೀಡಿದ ಹಿನ್ನಲೆ ಹೆಚ್ಚುವರಿ ಸಮಯ ಕೋರಿ ಎಸ್‌ಬಿಐ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆ ನಡೆಸಿತ್ತು. ಬ್ಯಾಂಕ್ ಪರವಾಗಿ ಹಿರಿಯ ವಕೀಲ ಹರೀಶ್ ಸಾಳ್ವೆ ವಾದ ಮಂಡಿಸಿದ್ದರು. ಇದನ್ನೂ ಓದಿ: ಭಾನುವಾರವೂ ಓಪನ್ ಇರುತ್ತೆ ಆಯ್ದ ಸಬ್‌ರಿಜಿಸ್ಟ್ರಾರ್ ಕಚೇರಿಗಳು – ಬೆಂಗಳೂರಿನಲ್ಲಿ ಆರಂಭ
Advertisement
ಈ ಹಿಂದೆ ನೀಡಿದ್ದ ಆದೇಶವನ್ನು ಅನುಸರಿಸಲು ನಮಗೆ ಸ್ವಲ್ಪ ಸಮಯ ಬೇಕಾಗುತ್ತದೆ, ನಾವು ಬಾಂಡ್ ನೀಡಿದ ಮಾಹಿತಿಯನ್ನು ಕ್ರೋಢೀಕರಿಸಲು ಪ್ರಯತ್ನಿಸುತ್ತಿದ್ದೇವೆ ಮತ್ತು ನಾವು ಸಂಪೂರ್ಣ ಮಾಹಿತಿಯನ್ನು ಆಯೋಗಕ್ಕೆ ನೀಡಬೇಕಿದೆ. ಇದು ರಹಸ್ಯ ಮಾಹಿತಿಯಾದ ಹಿನ್ನೆಲೆಯಲ್ಲಿ ನಾವು ಕೊಡುಗೆದಾರರ ಮಾಹಿತಿ ಮತ್ತು ಬಾಂಡ್ ಸಂಖ್ಯೆಯನ್ನು ದತ್ತಾಂಶವಾಗಿ ಶೇಖರಿಸಿಲ್ಲ ಈ ಮಾಹಿತಿ ಸಂಗ್ರಹಿಸಲು ಸಮಯ ಬೇಕು ಎಂದು ವಕೀಲರು ಎಸ್‌ಬಿಐ ಪರ ಮನವಿ ಮಾಡಿದ್ದರು.
ಇದಕ್ಕೆ ಉತ್ತರಿಸಿದ ಸಿಜೆಐ ಡಿ.ವೈ ಚಂದ್ರಚೂಡ್, ದಾನಿಗಳ ವಿವರಗಳನ್ನು ಗೊತ್ತುಪಡಿಸಿದ ಶಾಖೆಯಲ್ಲಿ ಮುಚ್ಚಿದ ಕವರ್‌ನಲ್ಲಿ ಇರಿಸಲಾಗಿದೆ. ಅದು ಮುಂಬೈನಲ್ಲಿದೆ ಎಂದು ಬ್ಯಾಂಕ್ ಮಾಹಿತಿ ನೀಡಿದೆ. ರಾಜಕೀಯ ಪಕ್ಷಗಳು ಯಾವುದೇ ಶಾಖೆಗಳಲ್ಲಿ ಖಾತೆಯನ್ನು ನಿರ್ವಹಿಸಿದರು ಚುನಾವಣಾ ಬಾಂಡ್‌ಗಳನ್ನು ಮುಂಬೈ ಶಾಖೆಗೆ ಮಾತ್ರ ಠೇವಣಿ ಇಡಬಹುದು ಎಂದು ಹೇಳಿದೆ. ಎಲ್ಲಾ ಮಾಹಿತಿ ಈಗಾಗಲೇ ಮುಂಬೈ ಶಾಖೆಗೆ ಬಂದಿವೆ ಮಾಹಿತಿ ನೀಡಲು ಏನು ಸಮಸ್ಯೆ? ಎಂದು ಪ್ರಶ್ನಿಸಿದ್ದರು. ಇದನ್ನೂ ಓದಿ: Lok Sabha 2024: ‘ಕೈ’, ಕಮಲ ಪಾಳಯದಲ್ಲಿ ಟಿಕೆಟ್ ಫೈಟ್ – ಈ ಸಲ ಯಾರ ಪಾಲಾಗುತ್ತೆ ಚಿಕ್ಕಬಳ್ಳಾಪುರ?
ಪ್ರತಿ ಖರೀದಿಗೆ ಪ್ರತ್ಯೇಕ ಕೆವೈಸಿ ಇರಬೇಕು ಎಂದು ಎಫ್‌ಎಕ್ಯೂಗಳು (Frequently Asked Questions) ಸೂಚಿಸಿವೆ. ಆದ್ದರಿಂದ ನೀವು ಈಗಾಗಲೇ ವಿವರಗಳನ್ನು ಹೊಂದಿದ್ದೀರಿ ಎಂದು ತಿಳಿಸಿದರು. ಇದಕ್ಕೆ ಧ್ವನಿಗೂಡಿಸಿದ್ದ ನ್ಯಾಯಮೂರ್ತಿ ಸಂಜೀವ್ ಖನ್ನಾ, ನೀವು ಮುಚ್ಚಿದ ಕವರ್ ಅನ್ನು ತೆರೆಯಬೇಕು, ವಿವರಗಳನ್ನು ಒಟ್ಟುಗೂಡಿಸಿ ಮತ್ತು ಮಾಹಿತಿಯನ್ನು ನೀಡಬೇಕು, ಇದಕ್ಕೆ ಹೆಚ್ಚಿನ ಸಮಯ ಯಾಕೆ? ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ್ದ ಸಾಳ್ವೆ, ಬಾಂಡ್ ಅನ್ನು ಯಾರು ಖರೀದಿಸಿದ್ದಾರೆ? ಎಂಬುದರ ಕುರಿತು ನಮ್ಮ ಬಳಿ ಸಂಪೂರ್ಣ ವಿವರಗಳಿವೆ ಮತ್ತು ಹಣ ಎಲ್ಲಿಂದ ಬಂತು ಮತ್ತು ಯಾವ ರಾಜಕೀಯ ಪಕ್ಷಕ್ಕೆ ಎಷ್ಟು ಹಣ ಜಮೆಯಾಗಿದೆ ಎಂಬ ಸಂಪೂರ್ಣ ವಿವರ ನನ್ನ ಬಳಿ ಇದೆ. ಹೆಸರುಗಳನ್ನು ಕ್ರೋಢೀಕರಿಸಬೇಕು, ಬಾಂಡ್ ಸಂಖ್ಯೆಗಳೊಂದಿಗೆ ಕ್ರಾಸ್ ಚೆಕ್ ಮಾಡಬೇಕು, ಫಾರ್ಮ್ ಟು ಫಾರ್ಮ್ ರೀತಿಯಲ್ಲಿ ಕೆಲಸ ಮಾಡಲಾಗುತ್ತಿದೆ. ಇದು ಇನ್ನೂ ಮೂರು ತಿಂಗಳು ತೆಗೆದುಕೊಳ್ಳುತ್ತದೆ. ನಾನು ತಪ್ಪು ಮಾಡಲು ಸಾಧ್ಯವಿಲ್ಲ, ತಪ್ಪು ಮಾಡಿದ್ದಲ್ಲಿ ದಾನಿಗಳಿಂದ ನನ್ನ ಮೇಲೆ ಮೊಕದ್ದಮೆ ಹೂಡುವ ಸಾಧ್ಯತೆಗಳಿದೆ, ಕನಿಷ್ಠ ಮಾಹಿತಿ ನೀಡಲು 2-3 ವಾರಗಳ ಸಮಯ ಬೇಕು ಎಂದರು.
ವಾದ ಆಲಿಸಿದ ಬಳಿಕ ತೀರ್ಪು ನೀಡಿದ ಸಿಜೆಐ ಡಿ.ವೈ ಚಂದ್ರಚೂಡ್, ಫೆಬ್ರವರಿ 15, 2024ರ ತೀರ್ಪಿನ ಮೂಲಕ, ಈ ನ್ಯಾಯಾಲಯವು ಚುನಾವಣಾ ಬಾಂಡ್‌ಗಳ ಯೋಜನೆ ಮತ್ತು RPA 1951 ಮತ್ತು ಆದಾಯ ತೆರಿಗೆ ಕಾಯ್ದೆ-1961 ಅನ್ನು ತಿದ್ದುಪಡಿ ಮಾಡಿದ ಹಣಕಾಸು ಕಾಯ್ದೆ-2017ರ ಭಾಗಗಳನ್ನು ಅಸಂವಿಧಾನಿಕ ಎಂದು ಘೋಷಿಸಿತ್ತು. ಆರ್ಟಿಕಲ್ 19(1)(ಎ) ಅಡಿಯಲ್ಲಿ ನಾಗರಿಕರ ಮಾಹಿತಿ ಹಕ್ಕು ಉಲ್ಲಂಘನೆಯಾಗಿದೆ. ಕಾರ್ಪೊರೇಟ್ ಸಂಸ್ಥೆಗಳಿಂದ ರಾಜಕೀಯ ಪಕ್ಷಗಳಿಗೆ ಅನಿಯಮಿತ ಧನಸಹಾಯವನ್ನು ಅನುಮತಿಸುವ ಹಣಕಾಸು ಕಾಯ್ದೆ 2017ರ ಮೂಲಕ ಪರಿಚಯಿಸಲಾದ ತಿದ್ದುಪಡಿಗಳು ಆರ್ಟಿಕಲ್ 14ರ ಉಲ್ಲಂಘನೆಯಾಗಿದೆ. ಏಪ್ರಿಲ್ 12 ವರೆಗಿನ ದಾಖಲೆಗಳನ್ನು ನೀಡಲು ಆದೇಶಿಸಿತ್ತು. ಮಾಹಿತಿ ಕೇಳಲು ಬ್ಯಾಂಕ್ ಹೆಚ್ಚುವರಿ ಸಮಯ ಕೇಳಿದೆ. ದಾಖಲೆಗಳ ಲಭ್ಯತೆ ಹಿನ್ನೆಲೆ ಹೆಚ್ಚುವರಿ ಸಮಯ ನೀಡಲು ಸಾಧ್ಯವಿಲ್ಲ, ಮಂಗಳವಾರ ಸಂಜೆಯೊಳಗೆ ಮಾಹಿತಿ ನೀಡಬೇಕು ಎಂದು ತಾಕೀತು ಮಾಡಿತ್ತು.