ನವದೆಹಲಿ: ಭಾರತೀಯ ನೌಕಾಪಡೆಯ ವಿಮಾನ ವಾಹನ ನೌಕೆ ಐಎನ್‌ಎಸ್ ವಿಕ್ರಮಾದಿತ್ಯ ನೌಕೆಯಲ್ಲಿ ಎಸ್‌ಬಿಐನ ನಾವ್ ಇಕ್ಯಾಶ್ ಕಾರ್ಡ್ ಸೇವೆಗೆ ಚಾಲನೆ ಸಿಕ್ಕಿದೆ.
ಎಸ್‌ಬಿಐ ವ್ಯವಸ್ಥಾಪಕ ನಿರ್ದೇಶಕ ಸಿಎಸ್ ಶೆಟ್ಟಿ ಮತ್ತು ಪಶ್ಚಿಮ ನೌಕೆ ಕಮಾಂಡಿಂಗ್ ಮುಖ್ಯ ಅಧಿಕಾರಿ ಅಡ್ಮಿರಲ್ ಆರ್. ಹರಿಕುಮಾರ್ ಅವರು ಈ ಸೇವೆಯನ್ನು ಕಾರವಾರದಲ್ಲಿ ಬಿಡುಗಡೆ ಮಾಡಿದರು.
Advertisement
Advertisement
ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾಗೆ ಈ ಸೇವೆ ಬಲ ತುಂಬಲಿದೆ. ಇದು ಬ್ಯಾಂಕಿಂಗ್ ಕಾರ್ಯಾಚರಣೆಗಳಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದ್ದು, ಸಮುದ್ರದ ಹಡಗುಗಳಲ್ಲಿ ಕರ್ತವ್ಯ ಮಾಡುತ್ತಿರುವ ಭದ್ರತಾ ಸಿಬ್ಬಂದಿ, ಅರೆಸೇನಾ ಪಡೆ, ಕುಗ್ರಾಮಗಳಲ್ಲಿ ಸೇವೆ ಮಾಡುತ್ತಿರುವ ಸೇನಾ ಸಿಬ್ಬಂದಿ ಈ ಸೇವೆಯನ್ನು ಬಳಸಬಹುದಾಗಿದೆ. ಇದನ್ನೂ ಓದಿ: ಭಾರತೀಯ ಸೇನೆಯಲ್ಲಿ ಇತಿಹಾಸ ಸೃಷ್ಟಿ – ಪತಿ ಬಳಿಕ ಪತ್ನಿಗೆ 3 ಸ್ಟಾರ್
Advertisement
The card is designed to replace cash payments with digital transactions even in areas devoid of realtime internet connectivity, like #warships at sea, offshore oil platforms and remote areas. (3/3)#HarKaamDeshKeNaam pic.twitter.com/Lpl9EGukTn
— PRO Defence Mumbai (@DefPROMumbai) October 2, 2021
Advertisement
ಹೆಚ್ಚಿನ ಸಮಯ ಸಮುದ್ರಗಳಲ್ಲಿ ಮತ್ತು ದೂರದ ಪ್ರದೇಶಗಳಿಗೆ ಕರ್ತವ್ಯ ಮಾಡುತ್ತಿರುವ ಸಿಬ್ಬಂದಿ ನಗದು ವ್ಯವಹಾರಕ್ಕೆ ಸಮಸ್ಯೆ ಆಗುತ್ತಿತ್ತು. ಈಗ ನಾವ್ ಇಕ್ಯಾಶ್ ಕಾರ್ಡ್ ಈ ಸಮಸ್ಯೆಗಳನ್ನು ನಿವಾರಿಸಿದೆ.
ಡ್ಯುಯಲ್ ಚಿಪ್ ಕಾರ್ಡ್ ಆಫ್‌ಲೈನ್ ಮತ್ತು ಆನ್‌ಲೈನ್ ಪರಿಸರದಲ್ಲಿ ಕಾರ್ಯನಿರ್ವಹಿಸುತ್ತದೆ. ಆನ್‌ಲೈನ್ ಮೋಡ್‌ನಲ್ಲಿ ಸಾಮಾನ್ಯ ಡೆಬಿಟ್ ಕಾರ್ಡ್ ಆಗಿಯೂ ಬಳಸಬಹುದು.