ಶಾರ್ಟ್ಸ್ ಧರಿಸಿದ್ದಕ್ಕೆ ಬ್ಯಾಂಕ್ ಒಳಗೆ ಬಿಡದ SBI ಸಿಬ್ಬಂದಿ

Public TV
2 Min Read
SBI 1

ಕೋಲ್ಕತ್ತಾ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‍ಬಿಐ) ಬ್ಯಾಂಕ್ ಗೆ ಗ್ರಾಹಕ ಇತ್ತೀಚೆಗೆ ಶಾರ್ಟ್ಸ್ ಧರಿಸಿದ್ದರಿಂದ ಅವರನ್ನು ಒಳಗೆ ಪ್ರವೇಶಿಸಲು ನಿರಾಕರಿಸಲಾಗಿದೆ.

ಬ್ಯಾಂಕ್ ಒಳಗೆ ಪ್ರವೇಶಿಸಲು ಶಾರ್ಟ್ಸ್ ಯೋಗ್ಯವಲ್ಲ, ಪ್ಯಾಂಟ್ ಧರಿಸಿ ನಂತರ ನೀವು ಬನ್ನಿ ಎಂದು ಎಸ್‍ಬಿಐ ಸಿಬ್ಬಂದಿ ಗ್ರಾಹಕನ ಬಳಿ ಜಗಳವಾಡಿ ಅಲ್ಲಿಂದ ಕಳುಹಿಸಿದ್ದಾರೆ. ಈ ಹಿನ್ನೆಲೆ ಕೋಪಕೊಂಡ ಕೋಲ್ಕತ್ತಾದದ ಗ್ರಾಹಕ ಆಶಿಶ್ ಟ್ವಿಟ್ಟರ್ ನಲ್ಲಿ ಎಸ್‍ಬಿಐ ಅನ್ನು ಟ್ಯಾಗ್ ಮಾಡಿದ್ದು, ಬ್ಯಾಂಕ್‍ಗೆ ಭೇಟಿ ನೀಡಲು ಡ್ರೆಸ್ ಕೋಡ್ ಇದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.

ಈ ಕುರಿತು ಟ್ವಟ್ಟರ್ ನಲ್ಲಿ ವಿವರವಾಗಿ ಬರೆದ ಆಶಿಶ್, ಡ್ರೆಸ್ ಕೋಡ್ ವಿಚಾರದಲ್ಲಿ ನನಗೂ ಮತ್ತೆ ಬ್ಯಾಂಕ್ ಸಿಬ್ಬಂದಿಗೂ ವಾಗ್ವಾದ ನಡೆಯಿತು. ಈ ವೇಳೆ ನಾನು ನನ್ನ ಖಾತೆಯನ್ನು ಮುಚ್ಚಲು ಬ್ಯಾಂಕ್‍ಗೆ ಹೋಗಿದ್ದೆ. ನಾನು ಹೋಗಿ ಇನ್ನೂ ಯಾವುದೇ ರೀತಿ ಅಲ್ಲಿ ಮಾತು ಸಹ ಹಾಡಿರಲಿಲ್ಲ. ಶಾಖೆಯನ್ನು ಪ್ರವೇಶಿಸಿದ ತಕ್ಷಣ, ನನ್ನನ್ನು ಶಾಟ್ರ್ಸ್ ಧರಿಸಿದ್ದಿರಾ, ಪ್ಯಾಂಟ್‍ನಲ್ಲಿ ಬನ್ನಿ ಎಂದು ಸಿಬ್ಬಂದಿ ಹೇಳಿದನು. ನಾನು ಈ ನಿಯಮವನ್ನು ಎಲ್ಲಿ ಬರೆದಿಲ್ಲ ಎಂದು ಸಿಬ್ಬಂದಿಯನ್ನು ಪ್ರಶ್ನಿಸಿದೆ. ಆದರೆ ಆತ ನನ್ನ ಬಳಿ ಜಗಳವಾಡಲು ಪ್ರಾರಂಭಿಸಿದ ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ:  ಕ್ರಿಸ್‍ಮಸ್ ಮೆರವಣೆಗೆಯಲ್ಲಿ ಭಾರೀ ಅಪಘಾತ – 20 ಜನರಿಗೆ ತೀವ್ರಗಾಯ

ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ ನೆಟ್ಟಿಗರು, ಬ್ಯಾಂಕ್‍ನ ಇತರ ಶಾಖೆಗಳಲ್ಲಿ ತಮಗೆ ಆದ ಇದೇ ರೀತಿಯ ಘಟನೆಯನ್ನು ಹಂಚಿಕೊಂಡಿದ್ದಾರೆ.

SBI

ಆಶಿಶ್ ಅವರ ಟ್ವೀಟ್‍ಗೆ ಪ್ರತಿಕ್ರಿಯಿಸಿದ ಎಸ್‍ಬಿಐ, ನಾವು ನಿಮ್ಮ ಕಾಳಜಿಯನ್ನು ಅರ್ಥಮಾಡಿಕೊಂಡಿದ್ದೇವೆ ಮತ್ತು ಗೌರವಿಸುತ್ತೇವೆ. ನಮ್ಮ ಗ್ರಾಹಕರಿಗೆ ಯಾವುದೇ ನೀತಿ ಅಥವಾ ನಿಗದಿತ ಡ್ರೆಸ್ ಕೋಡ್ ಇಲ್ಲ. ಅವರು ತಮ್ಮ ಆಯ್ಕೆಯ ಪ್ರಕಾರ ಡ್ರೆಸ್ ಮಾಡಬಹುದು ಮತ್ತು ಬ್ಯಾಂಕ್ ಶಾಖೆಯಂತಹ ಸಾರ್ವಜನಿಕ ಸ್ಥಳಕ್ಕಾಗಿ ಸ್ಥಳೀಯವಾಗಿ ಸ್ವೀಕಾರಾರ್ಹವಾದ ಸಂಪ್ರದಾಯ ಮತ್ತು ಸಂಸ್ಕøತಿಯನ್ನು ಪರಿಗಣಿಸಬಹುದು. ನೀವು ಈ ಸಮಸ್ಯೆಯನ್ನು ಎದುರಿಸಿದ ಶಾಖೆಯ ಕೋಡ್ ಅಥವಾ ಹೆಸರನ್ನು ಹಂಚಿಕೊಳ್ಳಲು ನಾವು ನಿಮ್ಮನ್ನು ವಿನಂತಿಸುತ್ತೇವೆ. ನಾವು ಇದನ್ನು ಪರಿಶೀಲಿಸುತ್ತೇವೆ ಎಂದು ತಿಳಿಸಿದೆ. ಇದನ್ನೂ ಓದಿ: ಡಾ.ಅಭಿನವ ಅನ್ನದಾನೇಶ್ವರ ಮಹಾಸ್ವಾಮೀಜಿ ಲಿಂಗೈಕ್ಯ

Share This Article
Leave a Comment

Leave a Reply

Your email address will not be published. Required fields are marked *