ಬೆಂಗಳೂರು: ಬ್ಯಾಂಕ್‌ಗೆ (SBI Bank) 20 ಕೋಟಿ ವಂಚಿಸಿ ತಲೆಮರೆಸಿಕೊಂಡಿದ್ದ ಮಹಿಳೆಯನ್ನ ಬರೋಬ್ಬರಿ 20 ವರ್ಷದ ಬಳಿಕ ಸಿಬಿಐ ಪೊಲೀಸರು (CBI Police) ಬಂಧಿಸಿದ್ದಾರೆ.
ಮಣಿ ಸೇಖರ್ ಬಂಧಿತ ಮಹಿಳೆ. ಎಸ್‌ಬಿಐ ಶಾಖೆಯೊಂದಕ್ಕೆ 8 ಕೋಟಿ ವಂಚನೆ ಮಾಡಿದ್ದ ದಂಪತಿ ಮುತ್ತು ರಾಮಲಿಂಗಂ ಸೇಖರ್ ಮತ್ತು ಪತ್ನಿ ಮಣಿ ಸೇಖರ್ ತಲೆ ಮರೆಸಿಕೊಂಡಿದ್ರು. 2002 -05ರ ನಡ್ವೆ ನಡೆದಿದ್ದ ವಂಚನೆ ಪ್ರಕರಣ ಸಂಬಂಧ ಬೆಂಗಳೂರು ಸಿಬಿಐನಲ್ಲಿ 2006ರಲ್ಲಿ ಎಫ್‌ಐಆರ್ ದಾಖಲಾಗಿತ್ತು. ಇದನ್ನೂ ಓದಿ: 10 ವರ್ಷಗಳಿಂದ ಭಾರತದಲ್ಲಿ ಮಂಗಳಮುಖಿ ವೇಷದಲ್ಲಿದ್ದ ಅಬ್ದುಲ್ ಕಲಾಂ ಅರೆಸ್ಟ್
ಕೇಸ್ ದಾಖಲಾಗ್ತಿದ್ದಂತೆ ತಲೆಮರೆಸಿಕೊಂಡಿದ್ದ ದಂಪತಿ ಮೇಲೆ 2007 ರಲ್ಲಿ ಸಿಬಿಐ ಚಾರ್ಜ್ ಶೀಟ್ ಹಾಕಿತ್ತು. ಆರೋಪಿಗಳ ವಿರುದ್ಧ ನ್ಯಾಯಲಯ 2009 ರಲ್ಲಿ ಪ್ರೊಕ್ಲೈಮೇಷನ್ ಆದೇಶ ಹೊರಡಿಸಿತ್ತು. ಆರೋಪಿಗಳು ತಮ್ಮ ಗುರುತು ಸಿಗದಂತೆ ಕೆವೈಸಿ ಬದಲಿಸಿ ಕೃಷ್ಣ ಕುಮಾರ್ ಗುಪ್ತ ಹಾಗೂ ಗೀತಾ ಕೃಷ್ಣ ಕುಮಾರ್ ಗುಪ್ತ ಎಂದು ಹೆಸರು ಬದಲಾವಣೆ ಮಾಡಿಕೊಂಡಿದ್ರಂತೆ. ಮೊಬೈಲ್ ನಂಬರ್, ಇಮೇಲ್, ಪ್ಯಾನ್ ಎಲ್ಲವನ್ನೂ ಬದಲಿಸಿದ್ದ ದಂಪತಿ ಮಧ್ಯಪ್ರದೇಶದ ಇಂದೋರ್ ನಲ್ಲಿ ತಲೆಮರೆಸಿಕೊಂಡು ವಾಸ ಮಾಡ್ತಿದ್ರು. ಇದನ್ನೂ ಓದಿ: Uttar Pradesh | ಸ್ಕೂಲ್ ವ್ಯಾನ್‌ನಲ್ಲಿ 4 ವರ್ಷದ ಬಾಲಕಿ ಮೇಲೆ ರೇಪ್ – ಡ್ರೈವರ್ ಬಂಧನ
ಸಿಬಿಐ ಅತ್ಯಾಧುನಿಕ ಇಮೇಜ್ ಸರ್ಚ್ ಅನಾಲಿಟಿಕ್ಸ್ ಸಾಫ್ಟ್‌ವೇರ್ ಮೂಲಕ ಆರೊಪಿಯನ್ನ ಬಂಧಿಸಿದೆ. ಹಳೇ ಕೇಸ್ ಆರೋಪಿಗಳ ಬಗ್ಗೆ ಸರ್ಚ್ ಮಾಡುವಾಗ ಸುಳಿವು ಪತ್ತೆಯಾಗಿದ್ದು ಹಳೇ ಇಮೇಜ್ ಇಟ್ಟುಕೊಂಡು ಶೋಧ ನಡೆಸಿದಾಗ ಮಹಿಳೆ ಇಂದೋರ್‌ನಲ್ಲಿ ಪತ್ತೆಯಾಗಿದ್ದಾಳೆ. ಸದ್ಯ ಸಿಬಿಐ ಮಹಿಳೆಯನ್ನ ಬಂಧಿಸಿ ವಿಚಾರಣೆ ನಡೆಸುತ್ತಿದೆ. ವಿಚಾರಣೆ ವೇಳೆ ಗಂಡ ಮುತ್ತು ರಾಮಲಿಂಗಂ ಸಾವಿನ ಕುರಿತು ವಿಚಾರ ತಿಳಿಸಿದ್ದಾಳೆ. ಎಂಟು ಕೋಟಿ ಬ್ಯಾಂಕ್ ಸಾಲ ಪಡೆದು ವಂಚಿಸಿದ್ದ ದಂಪತಿ ಪತ್ತೆಗೆ ಸಿಬಿಐ ತಲಾ 50 ಸಾವಿರ ಬಹುಮಾನ ಕೂಡ ಘೋಷಿಸಿತ್ತು. ಸದ್ಯ ಮಹಿಳೆಯನ್ನ ಬಂಧಿಸಿ ಸಿಬಿಐ ಜೈಲಿಗಟ್ಟಿದೆ. ಇದನ್ನೂ ಓದಿ: Chitradurga | ಮದುವೆಯಾಗಲು ಹೆಣ್ಣು ಸಿಕ್ಕಿಲ್ಲವೆಂದು ಹೋಂ ಗಾರ್ಡ್ ನೇಣಿಗೆ ಶರಣು