ಬಳ್ಳಾರಿ: ಜಿಲ್ಲೆಯ ಎಸ್‍ಬಿಐ ಬ್ಯಾಂಕ್ ಎಟಿಎಂನಲ್ಲಿ ಹಣದ ಬದಲು ಪೇಪರ್ ಬಂದ ಪ್ರಕರಣಕ್ಕೆ ಸಂಭಂದಿಸಿದಂತೆ ಬ್ಯಾಂಕ್ ಅಧಿಕಾರಿಗಳು ತಪ್ಪೊಪ್ಪಿಕೊಂಡಿದ್ದಾರೆ.
Advertisement
ಗ್ರಾಹಕ ರಮೇಶ್‍ಗೆ 500 ರೂಪಾಯಿ ಹಣ ವಾಪಸ್ ಮಾಡುವ ಭರವಸೆ ನೀಡಿರೋ ಬ್ಯಾಂಕ್ ಸಿಬ್ಬಂದಿ, ಇನ್ನೆಂದೂ ಈ ರೀತಿ ತಪ್ಪಾಗದಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಭಾನುವಾರದಂದು ರಮೇಶ್ ಅವರು ಬಳ್ಳಾರಿಯ ಎಸ್‍ಬಿಐ ಎಟಿಎಂ ನಲ್ಲಿ ಹಣ ಡ್ರಾ ಮಾಡಿದಾಗ 500 ರೂ. ಬದಲಾಗಿ ಪೇಪರ್ ಬಂದಿತ್ತು.
Advertisement
Advertisement
ಈ ಕುರಿತು ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡುತ್ತಿದ್ದಂತೆ ಎಚ್ಚೆತ್ತುಕೊಂಡ ಬ್ಯಂಕ್ ಸಿಬ್ಬಂದಿ, ಗ್ರಾಹಕ ರಮೇಶ್ ಎಟಿಎಂನಲ್ಲಿ ಹಣ ಡ್ರಾ ಮಾಡಿದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಿ ಹಣವನ್ನು ಮರಳಿ ನೀಡುವ ತೀರ್ಮಾನ ಕೈಗೊಂಡಿದ್ದಾರೆ. ಅಲ್ಲದೇ ಗ್ರಾಹಕ ರಮೇಶ್ ಮುಂದೆ ಬ್ಯಾಂಕ್ ಅಧಿಕಾರಿಗಳು ತಪ್ಪೊಪ್ಪಿಕೊಂಡು ಗ್ರಾಹಕನ ಕ್ಷಮೆ ಕೋರಿದ್ದಾರೆ.