ಹುಬ್ಬಳ್ಳಿ: ಕಿಡಿಗೇಡಿಗಳು ಪಾಕಿಸ್ತಾನಕ್ಕೆ ಜೈ ಎಂದು ಹೇಳಿ ಹುಬ್ಬಳ್ಳಿಯಲ್ಲಿ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ನಾಲ್ವರು ದೇಶದ್ರೋಹಿ ಯುವಕರು ಬೆದರಿಕೆ ಹಾಕಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವಿಡಿಯೋದಲ್ಲಿ ಏನಿದೆ?
ಪಾಕಿಸ್ತಾನ್ ಜಿಂದಾಬಾದ್ ಜಿಂದಾಬಾದ್. ಹಿಂದೂಸ್ತಾನದವರ ಗುಂಡು ಹೊಡೆಯುತ್ತೇವೆ. ನಮ್ಮ ಟಾರ್ಗೆಟ್ ಭಾರತವನ್ನು ಬರ್ಬಾದ್ ಮಾಡುವುದು, ಹುಬ್ಬಳ್ಳಿಯಲ್ಲಿ ದೊಡ್ಡ ಬಾಂಬ್ ಬ್ಲಾಸ್ಟ್ ಆಗುತ್ತೆ, ಇಂಡಿಯಾಗೆ ಹೊಡೆಯುತ್ತೇವೆ. 2-3 ದಿನಗಳಲ್ಲಿ ನಾವು ದಾಳಿ ನಡೆಸ್ತೇವೆ ನಿಮಗೇನು ಗೊತ್ತಾಗುತ್ತೆ, ನೀವೇನೂ ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ. ನೀವು ಹೋಗಿ ಸುಮ್ಮನೆ ಮಲಗಿಕೊಳ್ಳಿ. ನೀವು ಉಳಿದು ನೋಡಿ. ಒಂದು ಕೆಲಸ ಮಾಡು ಪಾಕಿಸ್ತಾನ ಜಿಂದಾಬಾದ್ ಬೋಲ್.
Advertisement
Advertisement
ಈ ಬಗ್ಗೆ ಗೃಹ ಸಚಿವ ಎಂ.ಬಿ ಪಾಟೀಲ್ ಪ್ರತಿಕ್ರಿಯಿಸಿ, “ರಾಷ್ಟ್ರದ್ರೋಹಿ ಹೇಳಿಕೆ, ಸಂದೇಶಗಳನ್ನು ಕಳಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಸಾಮಾಜಿಕ ಜಾಲತಾಣಗಳ ಮೇಲೆ ನೀಗ ಇರಿಸಲಾಗುತ್ತಿದೆ. ಈ ಕುರಿತು ಡಿಜಿ-ಐಜಿಗಳಿಗೆ ಕಟ್ಟುನಿಟ್ಟಿನ ಕ್ರಮಜರುಗಿಸಲು ಸೂಚನೆ ನೀಡಿದ್ದೇನೆ” ಎಂದು ಹೇಳಿದ್ದಾರೆ.
Advertisement
Advertisement
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ದೇಶ ದ್ರೋಹಿ ಹೇಳಿಕೆ ನೀಡುವವರ ವಿರುದ್ಧ ಭಾರತ ಸರ್ಕಾರ ತಡೆಯ ಕಾಯ್ದೆ ರೂಪಿಸಬೇಕು. ಫೇಸ್ ಬುಕ್, ವಾಟ್ಸಪ್ ನಲ್ಲಿ ಸಂದೇಶ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಹುಬ್ಬಳ್ಳಿ ಸ್ಪೋಟಿಸುವುದಾಗಿ ಹೇಳಿದ ವಿಡಿಯೋ ವೈರಲ್ ಆಗಿದ್ದು ಗಮನಕ್ಕೆ ಬಂದಿಲ್ಲ. ಪೊಲೀಸರು ಆ ಬಗ್ಗೆ ಕ್ರಮಕೈಗೊಳ್ತಾರೆ. ಜನರು ಆತಂಕ ಪಡುವ ಅಗತ್ಯವಿಲ್ಲ. ವಿಶ್ವದ ಎಲ್ಲ ರಾಷ್ಟ್ರಗಳು ಪಾಕಿಸ್ತಾನವನ್ನು ಮೂಲೆ ಗುಂಪು ಮಾಡಬೇಕು. ವ್ಯಾಪಾರ ವಹಿವಾಟುಗಳಿಗೆ ವಿಶ್ವದಲ್ಲಿ ನಿಷೇಧ ಹೇರಬೇಕು. ಪಾಕಿಸ್ತಾನ ಭಯೋತ್ಪಾದಕರ ಬಿತ್ತುವ ರೋಗಗ್ರಸ್ಥ ರಾಷ್ಟ್ರ ಎಂದರು.
ಈ ಬಗ್ಗೆ ಅವಳಿ ನಗರದ ಪೊಲೀಸ್ ಆಯುಕ್ತ ಎಂ. ಎನ್ ನಾಗರಾಜ್ ಮಾತನಾಡಿ, “ಗೃಹ ಸಚಿವರ ಆದೇಶದ ಮೇರೆಗೆ ತನಿಖೆ ಆರಂಭ ಮಾಡಿದ್ದೇವೆ. ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಕಿಡಿಗೇಡಿಗಳು ಯಾರೇ ಇರಲಿ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಪಾಪಿಗಳು ವಿಡಿಯೋದಲ್ಲಿ ಪಾಕಿಸ್ತಾನಕ್ಕೆ ಜೈ ಎಂದಿದ್ದಾರೆ. ಅಲ್ಲದೇ ಹುಬ್ಬಳ್ಳಿಯಲ್ಲಿ ಬಾಂಬ್ ಇಟ್ಟು ಉಡಾಯಿಸುವುದಾಗೆ ಬೆದರಿಕೆ ಒಡಿದ್ದಾರೆ. ಈ ವಿಡಿಯೋವನ್ನು ಸೈಬರ್ ಕ್ರೈಂಗೆ ಕೊಡಲಾಗುವುದು. ಪ್ರಾಥಮಿಕವಾಗಿ ತನಿಖೆಯಲ್ಲಿ ಅದು ಮಹಾರಾಷ್ಟ್ರದ ವಿಡಿಯೋ ಎನ್ನುವುದು ತಿಳಿದು ಬಂದಿದೆ” ಎಂದು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv