InternationalLatestTech

1 ವರ್ಷ ಸ್ಮಾರ್ಟ್ ಫೋನ್ ಬಿಟ್ರೆ, ಸಿಗುತ್ತೆ 72 ಲಕ್ಷ ರೂ.!

– ಅಮೆರಿಕದ ಕಂಪನಿಯಿಂದ ವಿಶೇಷ ಸ್ಪರ್ಧೆ
– ಕೆಲಸವನ್ನು ತೊರೆಯದೇ ಸ್ಪರ್ಧೆಯಲ್ಲಿ ಭಾಗವಹಿಸಬಹುದು

ವಾಷಿಂಗ್ಟನ್: ಒಂದು ವರ್ಷಗಳ ಕಾಲ ಸ್ಮಾರ್ಟ್ ಫೋನ್ ನಿಂದ ದೂರವಿದ್ದರೆ ಅಮೇರಿಕದ ವಿಟಮಿನ್ ವಾಟರ್-ಕೋಕಾ ಕೋಲಾ ಸಂಸ್ಥೆ ಬರೋಬ್ಬರಿ 1 ಲಕ್ಷ ಡಾಲರ್(ಅಂದಾಜು 72 ಲಕ್ಷ ರೂ.) ಬಹುಮಾನವನ್ನಾಗಿ ನೀಡುವುದಾಗಿ ಘೋಷಿಸಿದೆ.

ಕೋಕಾ ಕೋಲಾ ಕಂಪನಿ ಒಂದು ವಿಶಿಷ್ಟ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ಒಂದು ವರ್ಷದ ಕಾಲದ ಯಾವುದೇ ಸ್ಮಾರ್ಟ್ ಫೋನನ್ನು ಬಳಸಬಾರದು. ತುರ್ತು ಸಂದರ್ಭಕ್ಕಾಗಿ ಕಂಪನಿಯೇ ಸ್ಪರ್ಧಾಳುಗಳಿಗೆ 1996 ರ ಮಾದರಿಯ ಮೊಬೈಲ್ ಗಳನ್ನು ಕರೆ ಮಾಡಲು ನೀಡುತ್ತದೆ. ಈ ಸ್ಪರ್ಧೆಯಲ್ಲಿ ವಿಜೇತರಾಗುವ ಸ್ಪರ್ಧಿಗಳಿಗೆ ಬರೋಬ್ಬರಿ 72 ಲಕ್ಷ ರೂಪಾಯಿಯನ್ನು ಸಂಸ್ಥೆ ಬಹುಮಾನವಾಗಿ ನೀಡುತ್ತದೆ.

ಈ ಸ್ಪರ್ಧೆಗೆ ಭಾಗವಹಿಸುವವರು ತಮ್ಮ ಯಾವುದೇ ಕೆಲಸವನ್ನು ತೊರೆಯಬೇಕಿಲ್ಲ. ಅಲ್ಲದೇ ಕಚೇರಿ ಕೆಲಸಕ್ಕಾಗಿ ಲ್ಯಾಪ್‍ಟಾಪ್, ಡೆಸ್ಕ್ ಟಾಪ್ ಕಂಪ್ಯೂಟರ್, ಗೂಗಲ್ ಹೋಮ್ ಅಥವಾ ಅಮೆಜಾನ್ ನ ಅಲೆಕ್ಸಾ ದಂತಹ ಸ್ಮಾರ್ಟ್ ಸಾಧನಗಳನ್ನು ಮಾತ್ರ ಬಳಸಬೇಕು.

ಅರ್ಜಿ ಸಲ್ಲಿಸಲು ಏನು ಮಾಡಬೇಕು?
ಕೋಕಾ ಕೋಲಾ ಸಂಸ್ಥೆ ಅರ್ಜಿ ಸಲ್ಲಿಸಲು ಜನವರಿ 8ರವರೆಗೆ ದಿನಾಂಕವನ್ನು ನಿಗದಿಮಾಡಿದೆ. ಅರ್ಜಿ ಸಲ್ಲಿಸಲು ಇಚ್ಛಿಸುವವರು ಟ್ವಿಟ್ಟರ್ ಹಾಗೂ ಇನ್‍ಸ್ಟಾಗ್ರಾಮ್‍ನ #nophoneforayear ಮತ್ತು #contest ಹ್ಯಾಶ್‍ಟ್ಯಾಗನ್ನು ಬಳಸಿ, ಒಂದು ವರ್ಷಗಳ ಕಾಲ ಸ್ಮಾರ್ಟ್ ಫೋನ್ ಬಳಸದೇ, ಯಾವ ಕೆಲಸದಲ್ಲಿ ತೊಡಗಿಕೊಳ್ಳುತ್ತಿರೆಂದು ಸಂಪೂರ್ಣವಾಗಿ ಬರೆದು ಹಾಕಬೇಕು. ನೀವು ಹಾಕಿದ ವಿವರ ಎಲ್ಲರಿಗಿಂತ ಉತ್ತಮವಾಗಿದ್ದರೇ, ಸಂಸ್ಥೆಯೇ ನಿಮ್ಮನ್ನು ಸ್ಪರ್ಧಿಗಳನ್ನಾಗಿ ಆಯ್ಕೆ ಮಾಡುತ್ತದೆ.

1 ವರ್ಷ ಅಲ್ಲದೇ 6 ತಿಂಗಳ ಸ್ಪರ್ಧೆಯೂ ಇದೆ:
ಒಂದು ವರ್ಷಗಳ ಕಾಲ ಸ್ಮಾರ್ಟ್ ಫೋನ್‍ಗಳನ್ನು ಬಿಟ್ಟಿರಲು ಸಾಧ್ಯವಾಗಲ್ಲ ಎಂದು ಯೋಚಿಸುವವರು, 6 ತಿಂಗಳ ಅವಧಿಯ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಈ ಸ್ಪರ್ಧೆಯಲ್ಲಿ ಬಹುಮಾನದ ಮೊತ್ತವನ್ನಾಗಿ 7.2 ಲಕ್ಷ ರೂಪಾಯಿಯನ್ನು ಮಾತ್ರವೇ ನೀಡುತ್ತಾರೆ. (ಇದು ಅಮೇರಿಕ ನಾಗರೀಕರಿಗೆ ಮಾತ್ರ ಅನ್ವಯ)

ಪರೀಕ್ಷೆ ಹೇಗೆ?
ಸ್ಪರ್ಧೆಯಲ್ಲಿ ಗೆದ್ದ ಅಭ್ಯರ್ಥಿಗಳು ಹಣವನ್ನು ಪಡೆಯುವ ಮುನ್ನ ಸುಳ್ಳು ಪರೀಕ್ಷಕ ಯಂತ್ರದಲ್ಲಿ ಅವರನ್ನು ಪರೀಕ್ಷಿಸಲಾಗುತ್ತದೆ. ಒಂದು ವೇಳೆ ಅವರು ಸ್ಮಾರ್ಟ್ ಫೋನ್ ಬಳಸಿಲ್ಲದಿರುವ ಬಗ್ಗೆ ಸುಳ್ಳನ್ನು ಹೇಳಿದ್ದರೆ, ಯಂತ್ರದಲ್ಲಿ ಅದು ಬಯಲಾಗುತ್ತದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com

Leave a Reply

Your email address will not be published.

Back to top button