ಶಮಿಗೆ 7 ವಿಕೆಟ್ ಸಿಗುತ್ತೆ – ನ.14ಕ್ಕೆ ಬಿದ್ದ ಕನಸು ನನಸಾಯ್ತು

Public TV
2 Min Read
Mohammed Shami 1

ಮುಂಬೈ: ನ್ಯೂಜಿಲೆಂಡ್ (New Zealand) ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ (Team India) ಆಟಗಾರ ಶಮಿ (Mohammed Shami) 7 ವಿಕೆಟ್ ಕಬಳಿಸಿದ್ದಾರೆ. ಇದಕ್ಕೂ ಮುನ್ನ ದಿನವೇ ಅಷ್ಟು ವಿಕೆಟ್ ಗಳಿಸುವುದಾಗಿ ಕನಸು ಕಂಡ ವಿಚಾರವನ್ನು ವ್ಯಕ್ತಿಯೊಬ್ಬ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾನೆ. ಈಗ ವ್ಯಕ್ತಿಯ ಟಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದೆ.

16 ಲಕ್ಷ ಜನ ಈ ಪೋಸ್ಟ್ ನೋಡಿದ್ದಾರೆ. 43.5 ಸಾವಿರ ಲೈಕ್ ಪಡೆದಿದೆ. 13.4 ಸಾವಿರ ಜನ ಹಂಚಿಕೊಂಡಿದ್ದಾರೆ. 3 ಸಾವಿರ ಜನ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: World Cup Semifinal: 7 ವಿಕೆಟ್‌ ಕಿತ್ತು ಗ್ಲೆನ್‌ ಮ್ಯಾಕ್‌ಗ್ರಾತ್‌ ದಾಖಲೆ ಸರಿಗಟ್ಟಿದ ಶಮಿ

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಅಬ್ಬರದ ಬೌಲಿಂಗ್ ನಡೆಸಿ ಮೊಹಮ್ಮದ್ ಶಮಿ ನ್ಯೂಜಿಲೆಂಡ್ ತಂಡದ 7 ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದಾರೆ. ಆಸ್ಟ್ರೇಲಿಯಾ ವೇಗದ ಬೌಲರ್ ಗ್ಲೆನ್ ಮೆಕ್‍ಗ್ರಾತ್ ಅವರ ದಾಖಲೆಯನ್ನು ಶಮಿ ಸರಿಗಟ್ಟಿದ್ದಾರೆ. ಗ್ಲೆನ್ ಮೆಕ್‍ಗ್ರಾತ್ ಐಸಿಸಿ ವಿಶ್ವಕಪ್ 2003ರ ದಕ್ಷಿಣ ಆಫ್ರಿಕಾದ ಪೊಟ್ಚೆಫ್‌ಸ್ಟ್ರೂಮ್‌ನಲ್ಲಿ ನಮೀಬಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 15 ರನ್ ನೀಡಿ 7 ವಿಕೆಟ್ ಕಿತ್ತು ವಿಶ್ವ ದಾಖಲೆ ಬರೆದಿದ್ದರು. ಆ ದಾಖಲೆಯನ್ನು ಭಾರತದ ಬೌಲರ್ ಶಮಿ ಈಗ ಸರಿಗಟ್ಟಿದ್ದಾರೆ. ಅಲ್ಲದೇ ಮೂರು ಬಾರಿ 5 ವಿಕೆಟ್ ಪಡೆದ ಆಸ್ಟ್ರೇಲಿಯಾ ಆಟಗಾರ ಮಿಚೆಲ್ ಸ್ಟಾರ್ಕ್ ಅವರ ದಾಖಲೆಯನ್ನು ಶಮಿ ಮುರಿದಿದ್ದಾರೆ.

ಇದರೊಂದಿಗೆ ಮೊಹಮ್ಮದ್ ಶಮಿ ಏಕದಿನ ಮಾದರಿಯಲ್ಲಿ 7 ವಿಕೆಟ್ ಪಡೆದ ಸಾಧನೆಯನ್ನೂ ಮಾಡಿದ್ದು, ಅಲ್ಲದೇ ಕೇವಲ 17 ವಿಶ್ವಕಪ್ ಇನ್ನಿಂಗ್ಸ್‌ನಲ್ಲಿ 50 ವಿಕೆಟ್ ಪಡೆದು ಮಿಂಚಿದ್ದಾರೆ. 9.5 ಓವರ್‌ಗಳಲ್ಲಿ 57 ರನ್ ನೀಡಿ 7 ವಿಕೆಟ್‍ಗಳನ್ನು ಶಮಿ ಪಡೆದು ಮಿಂಚಿದ್ದಾರೆ. ಜೊತೆಗೆ ಮ್ಯಾನ್ ಆಫ್ ದಿ ಮ್ಯಾಚ್ ಕೂಡ ಶಮಿಗೆ ಒಲಿಯಿತು. ಇದನ್ನೂ ಓದಿ: World Cup Semifinal: 48 ವರ್ಷಗಳ ವಿಶ್ವಕಪ್‌ ಇತಿಹಾಸದಲ್ಲಿ ಹೊಸ ಮೈಲುಗಲ್ಲು‌ ಸ್ಥಾಪಿಸಿದ ಶಮಿ.!

ವಿಶ್ವಕಪ್‍ನಲ್ಲಿ 7 ವಿಕೆಟ್ ಉರುಳಿಸಿದ ದಿಗ್ಗಜರು
ಆಸ್ಟ್ರೇಲಿಯಾದ ಆಂಡಿ ಬಿಚೆಲ್ – 20 ರನ್ 7 ವಿಕೆಟ್, ಇಂಗ್ಲೆಂಡ್ (ಎದುರಾಳಿ) 2003, ಮಾ.2
ನ್ಯೂಜಿಲೆಂಡ್‍ನ ಟಿಮ್ ಸೌಥಿ – 33 ಕ್ಕೆ 7, ಇಂಗ್ಲೆಂಡ್ (ಎದುರಾಳಿ) 2015, ಫೆ.20
ವೆಸ್ಟಿಂಡೀಸ್‍ನ ವಿನ್ಸ್ಟನ್ ಡೇವಿಸ್ – 51 ಕ್ಕೆ 7, ಆಸ್ಟ್ರೇಲಿಯಾ (ಎದುರಾಳಿ) 1983, ಜೂ.11
ಭಾರತದ ಮೊಹಮ್ಮದ್ ಶಮಿ – 57 ಕ್ಕೆ 7, ನ್ಯೂಜಿಲೆಂಡ್ (ಎದುರಾಳಿ) 2023, ನ.15

Share This Article