ಕೇಪ್‍ಟೌನ್: ಟೀಂ ಇಂಡಿಯಾ ಆರಂಭಿಕ ಆಟಗಾರ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತದ ಪರ ವಿಶೇಷ ಸಾಧನೆ ನಿರ್ಮಿಸಿದ್ದಾರೆ.
ವಿದೇಶ ಪ್ರವಾಸದಲ್ಲಿ ಮೊದಲ ಪಂದ್ಯದಲ್ಲೇ ಜಯಗಳಿಸಿದ ಟೀಂ ಇಂಡಿಯಾದ ಮೊದಲ ನಾಯಕ ಎನ್ನುವ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗಿದ್ದಾರೆ. ಕೊನೆಯ ಟಿ20 ಪಂದ್ಯದ ವೇಳೆ ಕೊಹ್ಲಿ ಬೆನ್ನು ನೋವಿನಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿತ್ತು.
Advertisement
ಭಾರತದ ಪರ ರೋಹಿತ್ ಶರ್ಮಾ ಈ ಸಾಧನೆ ಮಾಡಿದ ಮೊದಲ ನಾಯಕನಾಗಿದ್ದರೆ, ಏಷ್ಯಾದಲ್ಲಿ ಈ ಸಾಧನೆ ನಿರ್ಮಿಸಿದ 6ನೇ ನಾಯಕ ಎನ್ನುವ ಪಟ್ಟ ಈಗ ಒಲಿದಿದೆ.
Advertisement
Advertisement
ಕೊನೆಯ ಟಿ 20 ಪಂದ್ಯವನ್ನು ಭಾರತ 7 ರನ್ ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ಟಿ20 ಸರಣಿಯಲ್ಲಿ 2-1 ಅಂತರದಿಂದ ಗೆದ್ದುಕೊಂಡು ದಕ್ಷಿಣ ಆಫ್ರಿಕಾ ಪ್ರವಾಸವನ್ನು ಮುಕ್ತಾಯಗೊಳಿಸಿದೆ. ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಭಾರತ 7 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತ್ತು. ದಕ್ಷಿಣ ಆಫ್ರಿಕಾ 6 ವಿಕೆಟ್ ಕಳೆದುಕೊಂಡು 165 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತ್ತು.
Advertisement
ಬ್ಯಾಟಿಂಗ್ ನಲ್ಲಿ 43 ರನ್(27 ಎಸೆತ, 5 ಬೌಂಡರಿ, 1 ಸಿಕ್ಸರ್) ಸಿಡಿಸಿ ಬೌಲಿಂಗ್ ನಲ್ಲಿ ಒಂದು ವಿಕೆಟ್ ಕಿತ್ತ ಸುರೇಶ್ ರೈನಾ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಭುವನೇಶ್ವರ್ ಕುಮಾರ್ ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾದರು.