ಮುರುಘಾಮಠದ ಪೀಠಾಧಿಪತಿ ಬದಲಾವಣೆಗೆ ಹೆಚ್ಚಿದ ಒತ್ತಡ

Public TV
1 Min Read
MURUGHA SHREE

ಚಿತ್ರದುರ್ಗ: ಪೋಕ್ಸೋ ಪ್ರಕರಣದಡಿ (POCSO case) ಮುರುಘಾ ಶ್ರೀಗಳು ನ್ಯಾಯಾಂಗ ಬಂಧನದಲ್ಲಿರುವುದರಿಂದ ಮುರುಘಾ ಮಠದ (Murugha Mutt) ದೈನಂದಿನ ಧಾರ್ಮಿಕ ಕಾರ್ಯಗಳನ್ನು ಹಾಗೂ ಆಡಳಿತಾತ್ಮಕ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗಲು ನೂತನ ಸ್ವಾಮೀಜಿ ನೇಮಕ ಮಾಡುವ ಅಗತ್ಯವಿದೆ ಎಂದು ಕೆಲ ಲಿಂಗಾಯತ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ.

muruga shree4444

ಮುರುಘಾ ಶ್ರೀಗಳು (Shivamurthy Murugha Sharanaru) ಜೈಲಿನಲ್ಲಿರುವ ಹಿನ್ನೆಲೆ ವೀರಶೈವ ಲಿಂಗಾಯತ (Lingayat) ಸಮಾಜದ ಮುಖಂಡರು ಚಿತ್ರದುರ್ಗದಲ್ಲಿ ಸಭೆ ಸೇರಿ ಮಠಕ್ಕೆ ನೂತನ ಪೀಠಾಧಿಪತಿಯನ್ನು ನೇಮಿಸಬೇಕು. ಅಲ್ಲದೇ ಕಳಂಕಿತ ಸ್ವಾಮೀಜಿ ಬೆನ್ನಿಗೆ ನಿಂತಿರುವ ಪಟ್ಟಭದ್ರರನ್ನು ಮಠದಿಂದ ಹೊರಹಾಕಬೇಕು. ಇದಕ್ಕೆ ಅಗತ್ಯಬಿದ್ದರೇ ಕಾನೂನು ಹೋರಾಟ ಕೂಡ ನಡೆಸಲು ನಿರ್ಣಯ ಕೈಗೊಳ್ಳಲಾಗಿದೆ. ಆದರೆ, ಇದಕ್ಕೆ ಸ್ವಾಮೀಜಿ ಮತ್ತು ಎಸ್‍ಕೆ ಬಸವರಾಜನ್ ಬೆಂಬಲಿಗರು ತಗಾದೆ ತೆಗೆದು ಗದ್ದಲ ಎಬ್ಬಿಸಲು ನೋಡಿದ್ದಾರೆ. ಈ ವೇಳೆ ಜೋರು ವಾಗ್ವಾದಗಳು ನಡೆದವು. ಪರಿಸ್ಥಿತಿ ತಿಳಿಗೊಳಿಸಬೇಕಿದ್ದ ಪೊಲೀಸರು ಸುಮ್ನೆ ಎಲ್ಲವನ್ನು ನೋಡುತ್ತಾ ನಿಂತಿದ್ದರು. ಇದಕ್ಕೂ ಆಕ್ರೋಶ ವ್ಯಕ್ತವಾಯಿತು. ಇನ್ನು, ಈ ವಿಚಾರ ಬಿಎಸ್‍ವೈ ಮತ್ತು ಸರ್ಕಾರದ ಗಮನದಲ್ಲಿದೆ ಎಂದು ಎಂಎಲ್‍ಸಿ ನವೀನ್ ಹೇಳಿದ್ದಾರೆ. ಇದನ್ನೂ ಓದಿ: ನಮ್ಮ ಸ್ನಾನದ ವೀಡಿಯೋ ಮಾಡಿದ್ದಾರೆ – ಹಾಸ್ಟೆಲ್ ಸಿಬ್ಬಂದಿ ವಿರುದ್ಧ ಠಾಣೆ ಎದುರು ವಿದ್ಯಾರ್ಥಿನಿಯರ ಪ್ರತಿಭಟನೆ

ಈ ಮಧ್ಯೆ, ಸೆಲ್ಫ್ ಚೆಕ್‍ಗಳಿಗೆ ಶ್ರೀಗಳ ಸಹಿ ಹಾಕಿಸಲು ಮಾಡಿದ ಮನವಿಗೆ ಹೈಕೋರ್ಟ್ ಗರಂ ಆಗಿದೆ. ಎಲ್ಲವೂ ಸೆಲ್ಫ್ ಚೆಕ್‍ಗಳೇ ಏಕೆ? ಸಂಸ್ಥೆ ಹೆಸರಿಗೆ ಏಕಿಲ್ಲ? ಮೆಮೋ ಬಗ್ಗೆ ನಮಗೆ ವಿಶ್ವಾಸ ಮೂಡುತ್ತಿಲ್ಲ ಎಂದಿದೆ. ಸಮರ್ಪಕ ಮಾಹಿತಿಯುಳ್ಳ ಮೆಮೋ ಸಲ್ಲಿಸಲು ಹೈಕೋರ್ಟ್ ಸೂಚನೆ ನೀಡಿ, ವಿಚಾರಣೆಯನ್ನು ನಾಳೆಗೆ ಮುಂದೂಡಿದೆ. ಇದನ್ನೂ ಓದಿ: ನೆಹರೂ-ಗಾಂಧಿ ಕುಟುಂಬವಿಲ್ಲದಿದ್ದರೆ ಕಾಂಗ್ರೆಸ್ ಶೂನ್ಯ: ದಿಗ್ವಿಜಯ ಸಿಂಗ್

Live Tv
[brid partner=56869869 player=32851 video=960834 autoplay=true]

Share This Article