ಬೆಂಗಳೂರು: ಸಕಾರದ ಟನಲ್ ಯೋಜನೆ (Tunnel Road Project) ವಿರುದ್ಧ ಬಿಜೆಪಿ (BJP) ನಾಯಕರು ಸಹಿ ಸಂಗ್ರಹ ಅಭಿಯಾನ ಆರಂಭಿಸಿದ್ದಾರೆ. ಬೆಂಗಳೂರು ರಕ್ಷಿಸಿ, ಟನಲ್ ರೋಡ್ ನಿಲ್ಲಿಸಿ ಘೋಷಣೆ ಅಡಿಯಲ್ಲಿ ಅಭಿಯಾನ ಆರಂಭಿಸಲಾಗಿದೆ.
ವಿಪಕ್ಷ ನಾಯಕ ಅಶೋಕ್, ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಸಂಹಿ ಸಂಗ್ರಹ ಅಭಿಯಾನ ನಡೆಯುತ್ತಿದೆ. ಸಹಿ ಮಾಡುವುದರ ಮೂಲಕ ಆರ್ ಅಶೋಕ್, ಸಂಸದ ತೇಜಸ್ವಿ ಸೂರ್ಯ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಲಾಲ್‌ಬಾಗ್ ಗುಡ್ಡದ ಮೇಲೆ ಜನರ ಜೊತೆ ಬಿಜೆಪಿ ನಾಯಕರು ಕುಳಿತ ಅಭಿಯಾನ ನಡೆಸುತ್ತಿದ್ದಾರೆ. ವಿಪಕ್ಷ ನಾಯಕ ಅಶೋಕ್ ಟನಲ್ ರೋಡ್ ಮಾರ್ಗದ ಬಗ್ಗೆ ಜಂಟಿ ನಿರ್ದೇಶಕ ಜಗದೀಶ್ ಬಳಿ ಮಾಹಿತಿ ಕೇಳಿ ಪಡೆದಿದ್ದಾರೆ. ಅಲ್ಲದೇ ಜಿಬಿಎಯ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಜೊತೆ ಚರ್ಚೆ ನಡೆಸಿದ್ದಾರೆ. ಇದನ್ನೂ ಓದಿ: ಮೆಕ್ಸಿಕೋ ಸೂಪರ್ ಮಾರ್ಕೆಟ್‌ನಲ್ಲಿ ಸ್ಫೋಟ; ಮಕ್ಕಳು ಸೇರಿ 23 ಮಂದಿ ಸಾವು
ಬಳಿಕ ಮಾತನಾಡಿದ ಅಶೋಕ್, ಬೆಂಗಳೂರಿನ ಪರಿಸರ ಪ್ರೇಮಿಗಳ, ಇತಿಹಾಸ ಇರುವ, ಬೆಂಗಳೂರಿನ ಸಸ್ಯಕಾಶಿಗೆ ರಾಜ್ಯ ಸರ್ಕಾರ ಗುಂಡಿ ತೋಡುವ ಕೆಲಸ ಮಾಡುತ್ತಿದೆ. ಇದಕ್ಕೆ ವಿರೋಧವಾಗಿ ಬಿಜೆಪಿಯವರು ಸೇರಿದ್ದೇವೆ. ಸಾಕಷ್ಟು ಜನ ವಾಕರ್ಸ್ ಬಂದಿದ್ದಾರೆ, ಸೈಲೆಂಟ್ ಆಗಿ ಪ್ರತಿಭಟನೆ ಮಾಡುತ್ತಿದ್ದೇವೆ. ಸುರಂಗ ಯೋಜನೆಯಿಂದ ಬೆಂಗಳೂರಿನ ಪರಿಸರ ಹಾಳಾಗುತ್ತದೆ. ಬೆಂಗಳೂರಿನ ಜನರು ನಿದ್ದೆಗೆಡುವ ಹಾಗಾಗಿದೆ. ಇದು ಟ್ವಿನ್ ಟನಲ್ ರಸ್ತೆ ಅಲ್ಲ, ಇದು ವಿಐಪಿ ಕಾರಿಡಾರ್ ಆಗುತ್ತದೆ. 90% ಜನ ಮಧ್ಯಮ ವರ್ಗದವರು ಹಾಗೂ ಬಡವರು, ಬೈಕ್, ಸೈಕಲ್‌ಗೆ ಎಂಟ್ರಿ ಇಲ್ಲ. ಕೇವಲ ಕಾರಿಗೆ ಮಾತ್ರ ಎಂಟ್ರಿ, ಅದಕ್ಕೆ ಇದು ವಿಐಪಿ ರೋಡ್. 8 ಸಾವಿರ ಕೋಟಿಗೆ ಟೆಂಡರ್ ಕರೆದಿದ್ದಾರೆ. 4 ಸಾವಿರ ಕೋಟಿ ಪೇಮೆಂಟ್ ಕೊಡಬೇಕು. ಈಗ ಸಾಲ ಮಾಡಲು ಹೊರಟಿದ್ದಾರೆ. ಅದಕ್ಕೆ ಬಡ್ಡಿ ಎಲ್ಲಿಂದ ಕೊಡ್ತೀರಾ? ಆರ್ಥಿಕ ಪರಿಸ್ಥಿತಿಯನ್ನ ಪಾತಾಳಕ್ಕೆ ತಳ್ಳುವ ಯೋಜನೆ ಇದು, ಭೂಮಿಯ ಆಳದಲ್ಲಿ ಮಾಡಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಜೈಪುರ | ಶಾಲೆಯ 4ನೇ ಮಹಡಿಯಿಂದ ಹಾರಿ 9ರ ಬಾಲಕಿ ಸಾವು – ರಕ್ತದ ಕಲೆ ಉಳಿಯದಂತೆ ಬಿದ್ದ ಜಾಗ ಶುಚಿಗೊಳಿಸಿದ್ದ ಸಿಬ್ಬಂದಿ
3,000 ದಶಲಕ್ಷ ವರ್ಷದ ಶಿಲೆಗಳಿವೆ. ಕೆಂಪೇಗೌಡರು ಬೆಂಗಳೂರಿಗೆ ಕೊಟ್ಟ ಕೊಡುಗೆ ಇದು. ಶಿಲೆ ಮೇಲೆ ಬೆಂಗಳೂರು ಕಟ್ಟಿದ್ದಾರೆ. ಭೂಕಂಪ ಆಗಲ್ಲ, ಇಲ್ಲಿ ಸೌಖ್ಯವಾಗಿ ಇರಲಿ ಅಂತ ಕಟ್ಟಿದ ಬೆಂಗಳೂರಲ್ಲಿ ಸುರಂಗ ತೆಗೆಯಲು ಹೋಗಿದ್ದಾರೆ, ಪರ್ಮಿಷನ್ ತೆಗೆದುಕೊಂಡಿಲ್ಲ. ಲಾಲ್‌ಬಾಗ್‌ನಲ್ಲಿ ಕಾನೂನಿನ ಬಗ್ಗೆ ಬೋರ್ಡ್ ಇದೆ. ರಾಜ್ಯ ಸರ್ಕಾರನೆ ಬೋರ್ಡ್ ಹಾಕಿ ಕೊಲೆ ಮಾಡಲು ಹೊರಟಿದೆ. ಕಾನೂನಿಗೆ ಕಿಮ್ಮತ್ತಿಲ್ವಾ? 18 ಕಿ.ಮೀ ಟನಲ್ ರೋಡ್ ಮಾಡಿದ್ರೆ ಟ್ರಾಫಿಕ್ ಕಡಿಮೆ ಆಗುತ್ತೆ ಅಂದ್ರೆ ಮಾಡಿ, ನಾವು ಬೆಂಬಲ ಕೊಡುತ್ತೇವೆ. ಸಂಪೂರ್ಣವಾಗಿ ಆಗುತ್ತೆ ಅಂದ್ರೆ ಹೇಳಿ ನಾವು ಸಪೋರ್ಟ್ ಮಾಡುತ್ತೇವೆ. 70% ಟೂ ವೀಲರ್ ಇರೋದು. ಕೇವಲ 10% ಜನರಿಗೆ ಟನಲ್ ರೋಡ್ ಮಾಡುತ್ತಿದ್ದೀರಾ? ಟನಲ್ ರೋಡ್‌ಗೂ ಮೊದಲು ಇರೋ ಗುಂಡಿಗಳನ್ನ ಮುಚ್ಚಿ. ಕಣ್ಣಿಗೆ ಕಾಣುವ ರಸ್ತೆ ಬಿಟ್ಟು, ಕಾಣದ ಟನಲ್ ರೋಡ್ ಮಾಡಲು ಹೊರಟ್ಟಿದ್ದೀರಾ? ಸಿಎಂ ಹೇಳಿದ ಮೇಲೆ ಗುಂಡಿ ಮುಚ್ಚುತ್ತಾರೆ ಅಂತ ಜನ ಅಂದುಕೊಂಡಿದ್ದರು. ಆದರೆ ಸಿಎಂ ಮಾತಿಗೆ ಕಾರ್ಪೋರೇಷನ್ ಅವರು ಬೆಲೆ ಕೊಟ್ಟಿಲ್ಲ. 18 ತಿಂಗಳಲ್ಲಿ ಮುಗಿಸುತ್ತೇವೆ ಎನ್ನುತ್ತಾರೆ, ಆದ್ರೆ 4 ವರ್ಷ ಕಡಿಮೆ ಯಾವ ಪ್ರಾಜೆಕ್ಟ್ ಮುಗಿದಿಲ್ಲ. ಈಜಿಪುರ ಪ್ಲೈಓವರ್ ಇನ್ನೂ ಆಗುತ್ತಿದೆ. ಭೂಮಿ ಮೇಲಿರುವ ರೋಡ್ ಮಾಡಿಲ್ಲ, ಭೂಮಿ ಒಳಗೆ ಮಾಡಲು ಹೊರಟಿದ್ದಾರೆ ಎಂದು ಕೆಂಡಕಾರಿದರು. ಇದನ್ನೂ ಓದಿ: ಬೆಂಗ್ಳೂರಲ್ಲಿ ಬೀದಿನಾಯಿ ಮೇಲೆ ಗ್ಯಾಂಗ್‌ರೇಪ್ ಕೇಸ್ – 25 ಸಿಸಿಟಿವಿ ಪರಿಶೀಲಿಸಿ ನಾಯಿ ಪತ್ತೆ
ಟನಲ್ ರೋಡ್ ಅಲ್ಲಿ ಟ್ರಾವೆಲ್ ಮಾಡಿದರೆ 16-20 ಸಾವಿರ ತಿಂಗಳಿಗೆ ಖರ್ಚು ಮಾಡಬೇಕು. ಅಷ್ಟು ಖರ್ಚು ಮಾಡಿದ್ರೆ ಬೆಂಜ್ ಕಾರಿಗೆ ಇಎಂಐ ಕಟ್ಟಬಹುದು. ಉತ್ತರದಲ್ಲಿ ಸ್ಯಾಂಕಿ, ದಕ್ಷಿಣದಲ್ಲಿ ಲಾಲ್‌ಬಾಗ್‌ನಲ್ಲಿ ಮಾಡುತ್ತಾರೆ. ಸ್ಯಾಂಕಿ ಟ್ಯಾಂಕ್ ಬಳಿ ರೋಡ್ ಮಾಡಲು ಆಗಿಲ್ಲ, ಕೋರ್ಟ್‌ನಲ್ಲಿ ಕೇಸ್ ಇದೆ. ರೋಡ್ ಮಾಡಲು ಹೋದಾಗ ಕಾಂಗ್ರೆಸ್ ಅವರೇ ಹೋರಾಟ ಮಾಡಿದ್ರು, ಈಗ ಔಟ್‌ಲೆಟ್ ಕೊಟ್ಟಿದ್ದಾರೆ. ನಿಮಗೆ ಮಾನ ಮರ್ಯಾದೆ ಇದ್ಯಾ ಎಂದು ಹರಿಹಾಯ್ದರು. ಇದನ್ನೂ ಓದಿ: ಪುತ್ತೂರಿನಲ್ಲಿ ಕಾರು-ಆಟೋ ನಡುವೆ ಭೀಕರ ಅಪಘಾತ; 4 ವರ್ಷದ ಮಗು ಸಾವು
ಒಂದು ಕಿ.ಮೀಗೆ 1,800 ಕೋಟಿ ಖರ್ಚಾಗುತ್ತದೆ. ಸ್ಯಾಟಲೈಟ್‌ಗಿಂತ ಕಾಸ್ಲ್ಟಿ ಇದು. ಡಿಕೆ ಶಿವಕುಮಾರ್ ಅವರು ಸಲಹೆ ಕೊಡಿ ಅಂದಿದ್ದಾರೆ. ಇದೇ ಹಣದಲ್ಲಿ 5 ಕಿ.ಮೀ ಉದ್ದ ಮೆಟ್ರೋ ಮಾಡಬಹುದು. ಹೆಚ್ಚು ಜನರು ಹೋಗಬಹುದು. ಮೆಟ್ರೋದಲ್ಲಿ ಕಮಿಷನ್ ಸಿಗಲ್ಲ, ಇಲ್ಲಿ ಸಿಗುತ್ತೆ ಅಷ್ಟೇ ವ್ಯತ್ಯಾಸ. ಎಲ್ಲೆಲ್ಲಿ ಮೆಟ್ರೋ ಲೈನ್ ಇದೆ, ಅಲ್ಲಿ ಟ್ರಾಫಿಕ್ ಕಡಿಮೆ ಆಗಿದೆ. ನಾವು ಸಲಹೆ ಕೊಡುತ್ತಿದ್ದೇವೆ. ಕಾರ್ಪೋರೇಷನ್ ಸಾಲದಲ್ಲಿದೆ. ಎಲ್ಲಾ ಜಾಗವನ್ನ ಅಡವಿಟ್ಟು ಲೋನ್ ತೆಗೆದುಕೊಳ್ಳುತ್ತಿದ್ದಾರೆ. ಇವರು ಸಾಲ ಮಾಡಿ ಬಿಟ್ಟು ಹೋಗಿದ್ರು, ಉಡ್ಕಾ ಲೋನ್ ನಾವು ತೀರಿಸಿದ್ದೇವೆ ಎಂದರು. ಇದನ್ನೂ ಓದಿ: Bihar Election | ಇಂದು ಬೆಂಗ್ಳೂರಿನಲ್ಲಿರುವ ಬಿಹಾರಿಗಳ ಭೇಟಿ ಮಾಡಲಿರುವ ಡಿಕೆಶಿ
ಈ ಯೋಜನೆಗೆ 120 ಡಿಪಾರ್ಟ್ಮೆಂಟ್ ಇಂದ ಪರ್ಮಿಷನ್ ಬೇಕು. ಆದರೆ ಒಬ್ಬರದು ತಗೊಂಡಿಲ್ಲ. ಇದು ಹಣ ಲೂಟಿ ಹೊಡೆಯೋ ಪ್ಲ್ಯಾನ್. ಬಿಹಾರ್, ತಮಿಳುನಾಡು ಎಲೆಕ್ಷನ್‌ಗೆ ಮಾಡಿರೋ ಪ್ಲ್ಯಾನ್. 1975 ಆಕ್ಟ್‌ನಲ್ಲೇ ಇದೆ, ಯಾವುದೇ ಕಾಮಾಗರಿಗೆ ಪರ್ಮಿಷನ್ ಇಲ್ಲ. ಒಂದು ವೇಳೆ ಕೊಟ್ರೆ ಅಧಿಕಾರಿಗೆ ಜೈಲು ಶಿಕ್ಷೆ ಆಗುತ್ತೆ ಅಂತ ಇದೆ. ಧಮ್ಕಿ ಹಾಕೋದು ಡಿಕೆಗೆ ರಕ್ತಗತವಾಗಿ ಬಂದಿದೆ. ರಾಮಮೂರ್ತಿ ಆಯ್ತು, ತೇಜಸ್ವಿ ಸೂರ್ಯ, ಮೋಹನ್ ದಾಸ್ ಪೈ, ಕಿರಣ್ ಮಜುಂದಾರ್‌ಗೆ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಮಂಡ್ಯ| ನಾಲೆಯಲ್ಲಿ ನಾಲ್ವರು ಮಕ್ಕಳು ನಾಪತ್ತೆ – ಇಬ್ಬರು ಬಾಲಕಿಯರು ಸಾವು

