ಬೆಳಗಾವಿ: ಮಹಾತ್ಮ ಗಾಂಧೀಜಿ (Mahatma Gandhiji) ಹತ್ಯೆಯಲ್ಲಿ ವೀರ ಸಾವರ್ಕರ್ (Savarkar) ಕೈವಾಡವಿದೆ. ಅವರ ಫೋಟೋ ಸದನದಲ್ಲಿ ಅಳವಡಿಸುವ ಅಗತ್ಯವಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿಕೆ ನೀಡಿದ್ದಾರೆ.
ಸದನದೊಳಗೆ ಸಾವರ್ಕರ್ ಭಾವಚಿತ್ರ ಅಳವಡಿಕೆ ಸಂಬಂಧ ನಗರದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಸದನದಲ್ಲಿ ಸಾವರ್ಕರ್ ಫೋಟೊ ಅಳವಡಿಕೆ ನನ್ನ ಗಮನಕ್ಕೆ ಬಂದಿಲ್ಲ. ವೀರ ಸಾವರ್ಕರ್ ಮೊದಲೇ ವಿವಾದಾತ್ಮಕ ವ್ಯಕ್ತಿತ್ವ ಹೊಂದಿದವರು. ಪೋಟೋ ಸದನದಲ್ಲಿ ಹಾಕಿದರೆ ಅವರ ಆತ್ಮಕ್ಕೆ ಶಾಂತಿ ಸಿಗಬೇಕಲ್ಲವೇ? ಎಂದು ಸಿದ್ದರಾಮಯ್ಯ ನಸುನಕ್ಕರು.
Advertisement
Advertisement
ವೀರ ಸಾವರ್ಕರ್ ಫೋಟೊ ಸದನದಲ್ಲಿ ಅಳವಡಿಸುವ ಅಗತ್ಯ ಇಲ್ಲ. ಇಲ್ಲಿಯವರೆಗೆ ಸದನದಲ್ಲಿ ಸಾವರ್ಕರ್ ಫೋಟೊ ಹಾಕಿರಲಿಲ್ಲ, ಹಾಗಿದ್ದರೆ ಈಗೇಕೆ? ಫೋಟೋ ಹಾಕುವುದರಿಂದ ವೀರ ಸಾವರ್ಕರ್ ಆತ್ಮಕ್ಕೆ ಶಾಂತಿ ಸಿಗಬೇಕಲ್ಲ? ಫೋಟೋ ಅಳವಡಿಕೆ ಕಾರ್ಯಕ್ರಮಕ್ಕೆ ನನಗೇನೂ ಆಹ್ವಾನ ಬಂದಿಲ್ಲ. ಸಾವರ್ಕರ್ ಪೋಟೋ ಅಳವಡಿಕೆ ವಿಚಾರವನ್ನು ಸರ್ವ ಸದಸ್ಯರ ಗಮನಕ್ಕೆ ತಂದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಸುವರ್ಣ ಸೌಧದಲ್ಲಿ ನಾಳೆ ಸಾವರ್ಕರ್ ಫೋಟೋ ಅನಾವರಣ – ಬಿಜೆಪಿಯಿಂದ ಸಿದ್ಧತೆ
Advertisement
Advertisement
ಬಿಜೆಪಿ ನಾಯಕರು ತಮ್ಮ ಹಿಡನ್ ಅಜೆಂಡಾ ಸದನದೊಳಗೆ ತರುತ್ತಿದ್ದಾರೆ. ಸಾವರ್ಕರ್ ಗಾಂಧೀಜಿ ಮರ್ಡರ್ ಕೇಸ್‌ನಲ್ಲಿ ಇರುವ ವ್ಯಕ್ತಿ ಎಂದು ಸಿದ್ದರಾಮಯ್ಯ ಹೇಳಿದರು. ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾಷಾ ವಿವಾದದ ಕಿಡಿ – ಮರಾಠಿ ಸಿನಿಮಾ ಪೋಸ್ಟರ್‌ಗಳಿಗೆ ಮಸಿ