ಬೆಳಗಾವಿ: ನಾಳೆಯಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು, ಈ ವೇಳೆ ಸಾವರ್ಕರ್ ಫೋಟೋ ಅನಾವರಣ ಮಾಡಲು ಬಿಜೆಪಿ ಸರ್ಕಾರ ಸಿದ್ಧತೆ ನಡೆಸಿದೆ. ಈ ಮೂಲಕ ಮತ್ತೆ ಸಾವರ್ಕರ್ ಸಮಯ ಜೋರಾಗುವ ಸಾಧ್ಯತೆ ಇದೆ.
ರಾಜ್ಯ ಚುನಾವಣೆಗೆ ನಾಲ್ಕೈದು ತಿಂಗಳು ಬಾಕಿಯಿದ್ದು, ಈ ಬಾರಿ ಬಿಜೆಪಿಗೆ ಹಿಂದೂ ಅಸ್ತ್ರದ ಜೊತೆಗೆ ಸಾವರ್ಕರ್ ಕೂಡ ಒಂದು ಅಜೆಂಡಾ ಆಗುವ ಸಾಧ್ಯತೆ ಇದೆ. ನಾಳೆಯಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು, ಮತ್ತೆ ಸಾವರ್ಕರ್ ಸಮಯ ಜೋರಾಗುವ ಸಾಧ್ಯತೆ ಇದೆ. ವಿಧಾನಸಭೆಯಲ್ಲಿ ಗಾಂಧೀಜಿ, ನೆಹರೂ, ಅಂಬೇಡ್ಕರ್, ಸ್ವಾಮಿ ವಿವೇಕಾನಂದರ ಜೊತೆಗೆ ಸಾವರ್ಕರ್ ಫೋಟೋ ಅನಾವರಣ ಮಾಡಲು ಬಿಜೆಪಿ ಸರ್ಕಾರ ಸಿದ್ಧತೆ ನಡೆಸಿದೆ.
Advertisement
Advertisement
ಈಗಾಗಲೇ ವಿಧಾನಸಭೆಯ ಸಿಬ್ಬಂದಿ ಎಲ್ಲಾ ಫೋಟೋಗಳಿಗೆ ಕರ್ಟನ್ ಹಾಕಿ ಮುಚ್ಚಿದ್ದಾರೆ. ನಾಳೆ ಬೆಳಗ್ಗೆ 10:30ಕ್ಕೆ ಸ್ಪೀಕರ್ ಕಾಗೇರಿ ನೇತೃತ್ವದಲ್ಲಿ ಅಧಿವೇಶನ ಆರಂಭಕ್ಕೂ ಮುನ್ನವೇ ಸಾವರ್ಕರ್ ಫೋಟೋ ಅನಾವರಣವಾಗಲಿದೆ ಎನ್ನಲಾಗಿದೆ. ಬಿಜೆಪಿ ಸಾವರ್ಕರ್ ಫೋಟೋ ಅಸ್ತ್ರಕ್ಕೆ ಕಾಂಗ್ರೆಸಿಗರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ತಂದೆಯ ಆತ್ಮ ವಿಲವಿಲ ಅಂತ ಒದ್ದಾಡುತ್ತಿರಬಹುದು : ಸಿ.ಟಿ.ರವಿ
Advertisement
Advertisement
ಮಾಹಿತಿ ಬಂದಿದೆ. ನಾಳೆ ಮಾತಾಡ್ತೇನೆ ಅಂತ ಸಿದ್ದರಾಮಯ್ಯ ಹೇಳಿದ್ದರೆ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಸಾವರ್ಕರ್‍ಗೂ ಕರ್ನಾಟಕಕ್ಕೂ ಏನ್ ಸಂಬಂಧ ಎಂದು ಕಿಡಿಕಾರಿದ್ದಾರೆ. ಮಾಜಿ ಡಿಸಿಎಂ ಪರಮೇಶ್ವರ್ ಕೂಡ ಬಿಜೆಪಿಯವರು ವಿವಾದಗಳನ್ನೇ ಹುಟ್ಟುಹಾಕಿದ್ದಾರೆ. ಏಕಾಏಕಿ ಇಂಥಹ ತೀರ್ಮಾನ ಮಾಡ್ತಾರೆ ಅಂದರೆ ಏನರ್ಥ? ಕನಿಷ್ಠ ಜ್ಞಾನವೂ ಇಲ್ವಾ ಅಂತ ಪರಮೇಶ್ವರ್ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ವಿಶ್ವನಾಥ್ ಒಬ್ಬ ಕೃತಜ್ಞತೆ ಇಲ್ಲದ ಕೃತಘ್ನ; ಮೆದುಳು, ನಾಲಿಗೆಗೆ ಕಂಟ್ರೋಲ್ ತಪ್ಪಿದೆ: ಕೆ.ಜಿ ಬೋಪಯ್ಯ