ಬೆಂಗಳೂರು: ಶಿವಮೊಗ್ಗದ ಬಳಿಕ ಇದೀಗ ಸಾವರ್ಕರ್ ಫೋಟೋ ವಿವಾದ ಸಿಲಿಕಾನ್ ಸಿಟಿಗೂ ತಟ್ಟಿದೆ. ನಮ್ಮ ಮೆಟ್ರೋ ಸ್ಟೇಷನ್ ಒಳಗೆ ಸಾರ್ವಕರ್ ಫೋಟೋಗೆ ಈಗ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.
ಅಮೃತ ಮಹೋತ್ಸವದ ಅಂಗವಾಗಿ ಮೆಟ್ರೋ ನಿಲ್ದಾಣದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಫೋಟೋ ಹಾಕಲಾಗಿದೆ. ಆದರೆ ಇದೀಗ ಮೆಟ್ರೋ ನಿಲ್ದಾಣದಲ್ಲಿ ಹಾಕಿರುವ ಫೋಟೋ ವಿವಾದ ಸೃಷ್ಟಿಸುತ್ತಿದೆ. ಫೋಟೋ ತೆಗೆಯುವಂತೆ ಕೆಲವರು ಟ್ವೀಟ್ ಮಾಡಿ ಅಭಿಯಾನ ಆರಂಭಿಸಿದ್ದಾರೆ.
Advertisement
Well-known Mercy petitioner #Savarkar photo is placed with freedom fighters in Majestic Metro station. There is much controversy and outrage from people calling him a bootlicker of British.@cpronammametro @nammametro pic.twitter.com/Pr4qtnL8gt
— Syed Mueen (@Mueen_mgd) August 14, 2022
Advertisement
ಬ್ರಿಟಿಷ್ ರ ಕ್ಷಮೆ ಕೇಳಿದವರನ್ನು ನಾವೇಕೆ ಗೌರವಿಸಬೇಕು. ಇದು ಯಾರ ಆದೇಶ ಅಂತಾ ಟ್ವೀಟ್ ಮಾಡಿ ಟ್ಯಾಗ್ ಮಾಡಲಾಗುತ್ತಿದೆ. ಆದರೆ ಇಷ್ಟೆಲ್ಲಾ ವಿವಾದ ಆದರೂ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೆಷನ್ ಲಿಮಿಟೆಡ್ (BMRCL) ಸಾರ್ವಕರ್ ಫೋಟೋ ತೆರವು ಮಾಡಿಲ್ಲ. ಇದನ್ನೂ ಓದಿ: ಸಾವರ್ಕರ್ ಪೋಸ್ಟರ್ ವಿವಾದ – ನಾಲ್ವರು ಅರೆಸ್ಟ್
Advertisement
Hello @cpronammametro , ಯಾಕೆ ಸ್ವಾಮಿ ಸಾವರ್ಕರ್ ಅವರ ಚಿತ್ರ ಹಾಕಿರೋದು ? ಅವರ ಕೊಡುಗೆಯೇನು ? ಬ್ರಿಟಿಷರಿಗೆ ಕ್ಷಮೆ ಕೇಳಿದವರನ್ನು ನಾವೇಕೆ ಗೌವರಿಸಬೇಕು ? ನಿಮಗೆ ಬೇರೆ ಯಾರು ಸಿಕ್ಕಿಲ್ಲವ ? ಯಾರ ಆದೇಶಇದು ? https://t.co/xgtN4XiQ3C
— Bahutva Karnataka ಬಹುತ್ವ ಕರ್ನಾಟಕ (@BahutvaKtka) August 15, 2022
Advertisement
ಟಿಕೆಟ್ ಕೌಂಟರ್‍ಗೆ ಎಂಟ್ರಿಯಾಗುವ ಭಾಗದಲ್ಲಿ ಫೋಟೋ ಹಾಕಲಾಗಿದೆ. ಒಟ್ಟಿನಲ್ಲಿ ಟ್ವಿಟ್ಟರ್ ಸೇರಿ ಹಲವು ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾದರೂ ಬಿಎಂಆರ್ ಸಿಎಲ್ ಮಾತ್ರ ವಿವಾದದ ಗಂಭೀರತೆ ಅರಿದಂತೆ ಕಾಣುತ್ತಿಲ್ಲ.