ತುಮಕೂರು: ಸಾವರ್ಕರ್ ಅವರನ್ನು ಕಾಂಗ್ರೆಸ್ ನಾಯಕರು ಬಂದಲ್ಲಿ ಹೋದಲ್ಲಿ ಟೀಕೆ ಮಾಡ್ತಾ ಇದ್ದಾರೆ. ಆದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿಯೇ, ಅದೇ ಸಿದ್ದರಾಮಯ್ಯ ಸರ್ಕಾರದ ಮಂತ್ರಿ ಮಹೋದಯರೇ, ತುಮಕೂರಲ್ಲಿ ಸಾವರ್ಕರ್ ಹೆಸರಿನ ಉದ್ಯಾನವನ್ನು ಉದ್ಘಾಟಿಸಿದ್ದ ವಿಚಾರ ಈ ಬೆಳಕಿಗೆ ಬಂದಿದೆ.
2016 ಸೆಪ್ಟೆಂಬರ್ 6ರಂದು ತುಮಕೂರು ನಗರದ ಸೋಮೇಶ್ವರ ಪುರಂ ಬಡಾವಣೆಯ ಉದ್ಯಾನವನಕ್ಕೆ ಸ್ವಾತಂತ್ರ್ಯ ವೀರ ಶ್ರೀ ವಿನಾಯಕ ದಾಮೋದರ ಸಾವರ್ಕರ್ ಪಾರ್ಕ್ ಎಂದು ನಾಮಕರಣ ಮಾಡಿ ಲೋಕಾರ್ಪಣೆ ಕೂಡ ಮಾಡಲಾಗಿತ್ತು. ಸಿದ್ದರಾಮಯ್ಯ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಟಿಬಿ ಜಯಚಂದ್ರ, ನಗರಾಭಿವೃದ್ಧಿ ಸಚಿವರಾಗಿದ್ದ ರೋಶನ್ ಬೇಗ್, ಆಗಿನ ತುಮಕೂರು ನಗರ ಶಾಸಕ ರಫಿಕ್ ಅಹಮದ್, ಆಗ ಸಂಸದರಾಗಿದ್ದ ಮುದ್ದಹನುಮೇಗೌಡ ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.
ಇದೀಗ ಸಾವರ್ಕರ್ ವಿವಾದದ ಹೊತ್ತಲ್ಲಿ ಈ ಫೋಟೋಗಳು ಈಗ ವೈರಲ್ ಆಗ್ತಿವೆ. ಈ ಬೆಳವಣಿಗೆ ಕಾಂಗ್ರೆಸ್ ಪಕ್ಷಕ್ಕೆ ಇರಿಸುಮುರಿಸು ಉಂಟು ಮಾಡಿದೆ. ಈ ಬಗ್ಗೆ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ನಾಯಕರು ಏನ್ ಹೇಳ್ತಾರೆ ಎಂದು ಬಿಜೆಪಿಗರು, ಹಿಂದೂ ಪರ ಕಾರ್ಯಕರ್ತರು ಪ್ರಶ್ನೆ ಮಾಡ್ತಾ ಇದ್ದಾರೆ. ಇದನ್ನೂ ಓದಿ: ರಂಭಾಪುರಿ ಶ್ರೀ ಬಳಿ ನೋವು ತೋಡಿಕೊಂಡಿಲ್ಲ, ಆಗಿದ್ದು ಹೇಳಿದ್ದೇನೆ ಅಷ್ಟೇ: ಸಿದ್ದರಾಮಯ್ಯ ಸ್ಪಷ್ಟನೆ