ಮುಂಬೈ: ವಿನಾಯಕ ದಾಮೋದರ್ ಸಾವರ್ಕರ್ (Savarkar) ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿಕೆಯೊಂದನ್ನು ನೀಡಿದ ಬಳಿಕ ರಾಜಕೀಯ ವಾತಾವರಣ ಬಿಸಿಯಾಗಿದೆ. ರಾಹುಲ್ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲವಾದರೆ, ಶಿವಸೇನೆ ಕೂಡಾ ಅವರ ಹೇಳಿಕೆಯನ್ನು ಒಪ್ಪುವುದಿಲ್ಲ, ಇದು ಪಕ್ಷದಲ್ಲಿ ವಿಭಜನೆಗೆ ಕಾರಣವಾಗಬಹುದು ಎಂದು ಎಚ್ಚರಿಸಿದೆ.
Advertisement
ಈ ನಡುವೆ ಮಹಾತ್ಮ ಗಾಂಧಿಯವರ (Mahatma Gandhi) ಮರಿಮೊಮ್ಮಗ ತುಷಾರ್ ಗಾಂಧಿ (Tushar Gandhi) ಸಾವರ್ಕರ್ ಬಗ್ಗೆ ಟ್ವೀಟ್ ಮಾಡಿದ್ದಾರೆ. ಸಾವರ್ಕರ್ ಅವರು ಬ್ರಿಟಿಷರಿಗೆ ಸಹಾಯ ಮಾಡಿದ್ದು ಮಾತ್ರವಲ್ಲದೇ ನಾಥೂರಾಂ ಗೋಡ್ಸೆ (Nathuram Godse) ಅವರಿಗೆ ಬಾಪು ಅವರನ್ನು ಕೊಲ್ಲಲು ಸಮರ್ಥ ಬಂದೂಕನ್ನು ಪಡೆಯಲು ಸಹಾಯ ಮಾಡಿದ್ದರು ಎಂದು ತಿಳಿಸಿದ್ದಾರೆ. ರಾಹುಲ್ ಗಾಂಧಿ ಬಳಿಕ ಇದೀಗ ತುಷಾರ್ ಅವರ ಹೇಳಿಕೆ ವಿವಾದ ಸೃಷ್ಟಿಸುವ ಸಾಧ್ಯತೆಯಿದೆ.
Advertisement
Advertisement
ಟೀಟ್ನಲ್ಲೇನಿದೆ?
ಸಾವರ್ಕರ್ ಬ್ರಿಟಿಷರಿಗೆ ಸಹಾಯ ಮಾಡಿದ್ದಲ್ಲದೇ, ಬಾಪು ಅವರನ್ನು ಕೊಲ್ಲಲು ನಾಥೂರಾಂ ಗೋಡ್ಸೆಗೆ ಸಮರ್ಥ ಬಂದೂಕನ್ನು ಹುಡುಕಲು ಸಹಾಯ ಮಾಡಿದ್ದರು. ಬಾಪು ಹತ್ಯೆಗೂ 2 ದಿನಗಳ ಮೊದಲು ಗೋಡ್ಸೆ ಬಳಿ ಪ್ರಬಲವಾದ ಯಾವುದೇ ಶಸ್ತ್ರಗಳಿರಲಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗೃಹ ಸಚಿವರ ಮನೆಯ ಸುತ್ತಮುತ್ತಲೇ ಉಗ್ರರು ಅಡಗಿದ್ದಾರೆ – ಮುತಾಲಿಕ್
Advertisement
Savarkar not only helped the British, he also helped Nathuram Godse find an efficient gun to murder Bapu. Till two days before Bapu’s Murder, Godse did not have a reliable weapon to carry out the murder of M. K. Gandhi.
— Tushar (@TusharG) November 19, 2022
ಟ್ವೀಟ್ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ತುಷಾರ್ ಗಾಂಧಿ ತಮ್ಮ ಹೇಳಿಕೆಯನ್ನು ವಿವರಿಸಿದ್ದಾರೆ. ನಾನು ಯಾವುದೇ ಆರೋಪ ಮಾಡುತ್ತಿಲ್ಲ. ಇತಿಹಾಸದಲ್ಲಿ ದಾಖಲಾಗಿರುವುದನ್ನು ಹೇಳುತ್ತಿದ್ದೇನೆ. ಪೊಲೀಸ್ ಎಫ್ಐಆರ್ ಪ್ರಕಾರ ನಾಥೂರಾಂ ಗೋಡ್ಸೆ ಮತ್ತು ವಿನಾಯಕ ಆಪ್ಟೆ ಸಾವರ್ಕರ್ ಅವರು 1948 ರ ಜನವರಿ 26, 27 ರಂದು ಭೇಟಿಯಾಗಿದ್ದರು. ಅವರ ಭೇಟಿಯಾಗುವವರೆಗೂ ಗೋಡ್ಸೆ ಬಳಿ ಬಂದೂಕು ಇರಲಿಲ್ಲ. ಅವರು ಬಂದೂಕು ಹುಡುಕುತ್ತಾ ಮುಂಬೈನಾದ್ಯಂತ ಸುತ್ತಾಡಿದ್ದಾರೆ. ಆದರೆ ಈ ಭೇಟಿಯ ಬಳಿಕ ಅವರು ನೇರವಾಗಿ ದೆಹಲಿಗೆ ಹೋಗಿ, ಅಲ್ಲಿಂದ ಗ್ವಾಲಿಯರ್ಗೆ ಹೋದರು. ಅಲ್ಲಿ ಅವರಿಗೆ ಒಳ್ಳೆಯ ಪಿಸ್ತೂಲ್ ಸಿಕ್ಕಿದೆ. ಇದೆಲ್ಲವೂ ಬಾಪು ಹತ್ಯೆಯ 2 ದಿನಗಳ ಮೊದಲು ನಡೆದಿದೆ. ಇದು ಆರೋಪ ಅಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಹಾನಗರ ಪಾಲಿಕೆ ಚುನಾವಣೆ ಟಿಕೆಟ್ ಮಾರಾಟ – ಆಪ್ ವಿರುದ್ಧ ಬಿಜೆಪಿ ಗಂಭೀರ ಆರೋಪ