ಭೋಪಾಲ್: ಗೋವು ನಮ್ಮ ತಾಯಿ ಅಲ್ಲ, ಗೋಮಾಂಸ ಸೇವನೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಾರ್ವಕರ್ ಅವರೇ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಭೋಪಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಜನಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು, ಹಿಂದುತ್ವ ಮತ್ತು ಹಿಂದೂ ಧರ್ಮಕ್ಕೆ ಯಾವುದೇ ಸಂಬಂಧವಿಲ್ಲ. ಗೋವು ನಮ್ಮ ಮಾತೆಯಲ್ಲ. ಗೋಮಾಂಸ ತಿನ್ನುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ವೀರ್ ಸಾರ್ವಕರ್ ಅವರ ಪುಸ್ತಕದಲ್ಲಿ ಬರೆದಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಜ.3 ರಿಂದ 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ: ಮೋದಿ
Advertisement
Advertisement
ದಿಗ್ವಿಜಯ್ ಸಿಂಗ್ ಹೇಳಿಕೆ ಕುರಿತಂತೆ ಬಿಜೆಪಿ ಶಾಸಕ ರಾಮೇಶ್ವರ ಶರ್ಮಾ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ನಾಯಕರು ಯಾವಾಗಲೂ ಹಿಂದೂಗಳಿಗೆ ಮಾನಹಾನಿ ಮಾಡುವುದರಲ್ಲಿ ನಿರತರಾಗಿದ್ದಾರೆ. ಹಿಂದೂಗಳ ವಿರುದ್ಧ ಷಡ್ಯಂತ್ರ ಮಾಡಲು ಹಗಲಿರುಳು ಶ್ರಮಿಸುತ್ತಿರುವ ದಿಗ್ವಿಜಯ್ ಸಿಂಗ್ ಅವರೇ ಹಿಂದೂಗಳು ಮತ್ತು ಹಿಂದೂಸ್ತಾನದ ಅಭ್ಯುದಯಕ್ಕಾಗಿ ನೀವು ಶ್ರಮಿಸಿದ್ದರೆ, ಪಾಕಿಸ್ತಾನದಲ್ಲಿ ಜಿನ್ನಾ ಹುಟ್ಟುತ್ತಿರಲಿಲ್ಲ. ಭಯೋತ್ಪಾದನೆಯೂ ಇರುತ್ತಿರಲಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಹಿಂದಿನ ಸರ್ಕಾರ ಹಣವನ್ನು ಕಬ್ರಿಸ್ತಾನ್‍ಗಳಿಗಾಗಿ ವ್ಯರ್ಥ ಮಾಡಿದೆ: ಯೋಗಿ ಆದಿತ್ಯನಾಥ್
Advertisement
#WATCH | Veer Savarkar in his book has written that the Hindu religion doesn’t have any relation with Hindutva. He also wrote that cow… can’t be our mother and there is no problem in eating cow beef: Congress leader Digvijaya Singh in Madhya Pradesh’s Bhopal pic.twitter.com/wYsk4YXmDJ
— ANI (@ANI) December 25, 2021
Advertisement
ಕೆಲವೊಮ್ಮೆ ಸಾವರ್ಕರ್ ಮತ್ತು ಇತರೆ ಮಹಾನ್ ಪುರುಷರ ಹೆಸರಿನಲ್ಲಿ ದಿಗ್ವಿಜಯ್ ಸಿಂಗ್ ಸುಳ್ಳು ಹೇಳಿಕೆಗಳನ್ನು ನೀಡುತ್ತಾರೆ. ದಿಗ್ವಿಜಯ್ ಸಿಂಗ್ ಅವರ ದೃಷ್ಟಿಯಲ್ಲಿ ಭಯೋತ್ಪಾದಕರು ದೇವರು. ಹೀಗಾಗಿ ದೇಶದ್ರೋಹಿಗಳಿಗೆ ಬಿರಿಯಾನಿ ತಿನ್ನಿಸುವ ಉದ್ದೇಶವನ್ನು ಹೊಂದಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.