ಬೆಳಗಾವಿ: ಬರೋಬ್ಬರಿ 18 ತಿಂಗಳ ಬಳಿಕ ಇದೀಗ ಜಿಲ್ಲೆಯ ಸವದತ್ತಿ ಯಲ್ಲಮ್ಮ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಹೊರ ರಾಜ್ಯದ ಭಕ್ತರು ಸಹ ದರ್ಶನ ಪಡೆಯಬಹುದಾಗಿದೆ.
Advertisement
ಕೊರೊನಾ ಹಿನ್ನೆಲೆ ಕಳೆದ 18 ತಿಂಗಳಿಂದ ಭಕ್ತರಿಗೆ ದರ್ಶನ ಭಾಗ್ಯವೇ ಇರಲಿಲ್ಲ. ಆದರೆ ಬೆಳಗಾವಿ ಜಿಲ್ಲಾಡಳಿತ ಇಂದಿನಿಂದ ಭಕ್ತರಿಗೆ ದರ್ಶನ ಪಡೆಯಲು ಅವಕಾಶ ಮಾಡಿ ಕೊಟ್ಟಿದೆ. ಬೇರೆ ರಾಜ್ಯದ ಭಕ್ತರೇ ಹೆಚ್ಚು ಬರುವ ಈ ದೇವಸ್ಥಾನಕ್ಕೆ ಹಲವು ರಾಜ್ಯದ ಭಕ್ತರು ದೇವಸ್ಥಾನ ಭೇಟಿಗೆ ತುದಿಗಾಲಿನಲ್ಲಿ ನಿಂತಿದ್ದಾರೆ. ಅಲ್ಲದೆ ಸದ್ಯ ಬೆಳಗಾವಿ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಮಾಣ ಶೇ.3ರಷ್ಟು ಮಾತ್ರ ಇದ್ದು, ದೇವಸ್ಥಾನಕ್ಕೆ ಭಕ್ತರು ಭೇಟಿ ನೀಡಲು ಅವಕಾಶ ಮಾಡಿಕೊಡಲಾಗಿದೆ. ಇದನ್ನೂ ಓದಿ: ಕೊರೊನಾದಿಂದ ಚೇತರಿಕೆ ಕಾಣುತ್ತಿರುವ ಹೊತ್ತಲ್ಲಿ ಕೊಡಗಿನಲ್ಲಿ ಇಲಿ ಜ್ವರದ ಆತಂಕ
Advertisement
Advertisement
ದೇವಸ್ಥಾನಕ್ಕೆ ಬರುವವರು ಕೋವಿಡ್ ನಿಯಮ ಪಾಲಿಸುವುದು ಕಡ್ಡಾಯವಾಗಿದೆ. ಅಲ್ಲದೆ ಮಹಾರಾಷ್ಟ್ರದಿಂದ ಭಕ್ತರು ಹೆಚ್ಚು ಬರುವುದರಿಂದ ಗಡಿಯಲ್ಲಿರುವ ಎಲ್ಲ ಹಳ್ಳಿಯ ಜನರಿಗೆ ಕೋವಿಡ್ ಲಸಿಕೆ ಹಾಕಿಸಲಾಗಿದೆ. ದೇವಸ್ಥಾನದ ಆವರಣದಲ್ಲಿ ಕೋವಿಡ್ ಟೆಸ್ಟ್ ಮಾಡಿಸುವ ವ್ಯವಸ್ಥೆಯನ್ನು ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಬೇರೆ ರಾಜ್ಯದವರು 72 ಗಂಟೆ ಒಳಗಿನ ಆರ್‍ಟಿಪಿಸಿಆರ್ ನೆಗೆಟಿವ್ ವರದಿ ತರುವುದು ಕಡ್ಡಾಯವಾಗಿದೆ. ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಹಾಕಿಕೊಳ್ಳಬೇಕು ಎಂದು ಜಿಲ್ಲಾಡಳಿತ ಎಚ್ಚರಿಸಿದೆ.