– ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಬೆಂಬಲ
– ಪುಲ್ವಾಮಾ ದಾಳಿ ಬಗ್ಗೆ ಮಾತಿಲ್ಲ
ನವದೆಹಲಿ: ಉಗ್ರವಾದದ ವಿರುದ್ಧದ ಭಾರತದ ಹೋರಾಟಕ್ಕೆ ನಾವು ಬೆಂಬಲ ನೀಡುತ್ತೇವೆ ಸೌದಿ ಅರೇಬಿಯಾ ತಿಳಿಸಿದೆ.
ಪ್ರಧಾನಿ ಮೋದಿ ಮತ್ತು ಸೌದಿ ಯುವರಾಜ ಮೊಹ್ಮದ್ ಬಿನ್ ಸುಲ್ತಾನ್ ಮಾತುಕತೆಯ ಬಳಿಕ ಇಬ್ಬರು ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಸೌದಿ ಯುವರಾಜ, ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಭಾರತ ಮತ್ತು ನೆರೆ ದೇಶಗಳಿಗೆ ಬೆಂಬಲ ನೀಡುವುದಾಗಿ ತಿಳಿಸಿದರು. ಅಲ್ಲೇ ಭಾರತದ ಜೊತೆ ಗುಪ್ತಚರ ಮಾಹಿತಿ ಹಂಚಿಕೊಳ್ಳುವುದಾಗಿ ಘೋಷಣೆ ಮಾಡಿದರು. ಆದರೆ ಪಾಕಿಸ್ತಾನದಲ್ಲಿ ಪುಲ್ವಾಮಾ ದಾಳಿ ಕುರಿತಂತೆ ಮಾತನ್ನು ಆಡಲಿಲ್ಲ. ಆದರೆ ಪಾಕಿಸ್ತಾನದಲ್ಲಿ ಮಾತನಾಡುವ ವೇಳೆ ಉಗ್ರರ ದಮನಕ್ಕೆ ಪಾಕ್ ಸಾಕಷ್ಟು ಕ್ರಮ ಕೈಗೊಂಡಿದೆ ಎಂದಿದ್ದರು.
Advertisement
MEA: Saudi Arabia to invest $100 billion in India – a huge vote of confidence in the Indian economy. PM Modi welcomed the announcement by #SaudiCrownPrince to invest in areas like energy, refining, petrochemicals, infrastructure, agriculture, manufacturing, etc. pic.twitter.com/xr4Myl2xDQ
— ANI (@ANI) February 20, 2019
Advertisement
ಇತ್ತ ಪಾಕಿಸ್ತಾನದಲ್ಲಿ 20 ಬಿಲಿಯನ್ ಡಾಲರ್ ಹೂಡಿಕೆ ಮಾಡಿದ್ದ ಸೌದಿ ಭಾರತದಲ್ಲಿ 100 ಬಿಲಿಯನ್ ಹೂಡಿಕೆ ಮಾಡುವುದಾಗಿ ತಿಳಿಸಿದೆ. ಪ್ರಮುಖವಾಗಿ ಇಂಧನ, ಸಂಸ್ಕರಣೆ ಮತ್ತು ಮೂಲಭೂತ ಸೌಕರ್ಯದಲ್ಲಿ ಹೂಡಿಕೆ ಮಾಡಲಿದೆ. ಅಲ್ಲದೇ ದ್ವಿಪಕ್ಷೀಯ ಸಹಕಾರ ಕುರಿತ 7 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಇದೇ ವೇಳೆ 2014 ರಿಂದ ಮೋದಿ ಪಾಕಿಸ್ತಾನದೊಂದಿಗೆ ಸೌಹಾರ್ದಯುತ ಸಂಬಂಧ ಮುಂದುವರಿಸಲು ಕೈಗೊಂಡ ಕ್ರಮಗಳ ಬ್ಗಗೆ ಮೆಚ್ಚುಗೆ ವ್ಯಕ್ತಪಡಿಸಿದರು.
Advertisement
ಎರಡು ದಿನಗಳ ಭಾರತ ಭೇಟಿಗೆ ಆಗಮಿಸಿದ್ದ ಸೌದಿ ಯುವರಾಜರನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ಸ್ವಾಗತಿಸಿದ್ದರು. ಮೋದಿ ಅವರ ಈ ನಡೆಯನ್ನು ಕಾಂಗ್ರೆಸ್ ತೀವ್ರವಾಗಿ ಟೀಕೆ ಮಾಡಿದೆ. ಅಲ್ಲದೇ ಸೌದಿ ಯುವರಾಜ ಪಾಕ್‍ನಲ್ಲಿ ಕೊಟ್ಟಿದ್ದ ಹೇಳಿಕೆಯನ್ನು ಬದಲಿಸುವಂತೆ ಮಾಡಲಿ ಎಂದು ಸವಾಲು ಎಸೆದಿದೆ. ಪಾಕಿಸ್ತಾನಕ್ಕೆ ನೂರಾರು ಕೋಟಿ ನೆರವು ನೀಡಿದ ಕೆಲವೇ ಗಂಟೆಗಳಲ್ಲಿ ಮೋದಿಯವರು ಈ ರೀತಿ ಮಾಡಿದ್ದು ಸರೀನಾ? ಇದು ಹುತಾತ್ಮ ಯೋಧರು ಮತ್ತು ಕೋಟಿ ಕೋಟಿ ಭಾರತೀಯರ ಭಾವನೆಗಳಿಗೆ ಪ್ರಧಾನಿ ಮೋದಿ ಮಾಡುತ್ತಿರುವ ಅವಮಾನ ಎಂದು ಟೀಕಿಸಿದೆ.
Advertisement
MEA: Saudi Crown Prince appreciated the consistent efforts made by PM Modi since May 2014, including his personal initiatives to have friendly relations with Pakistan. Both sides agreed on the need for creation of conditions necessary for resumption of the comprehensive dialogue. pic.twitter.com/XpTe3UZF8B
— ANI (@ANI) February 20, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv