ನವದೆಹಲಿ: ವಿಶ್ವದ ಅತಿ ದೊಡ್ಡ ತೈಲ ಸಂಸ್ಕರಣಾ ಕಂಪನಿ ಸೌದಿ ಅರೇಬಿಯಾದ ಅರಾಮ್ಕೊ ಉಡುಪಿಯ ಪಾದೂರಿನ ತೈಲ ಸಂಗ್ರಹಾಗಾರದಲ್ಲಿ ದಾಸ್ತಾನು ಮಾಡುವ ಒಪ್ಪಂದಕ್ಕೆ ಸಹಿ ಹಾಕಿದೆ.
ಪೆಟ್ರೋಲಿಯಂ ಸಂಗ್ರಹಣೆ ಮಾಡಲು ಒಂದು ಭಾಗವನ್ನು ಸೌದಿ ಅರಾಮ್ಕೊಗೆ ಗುತ್ತಿಗೆ ನೀಡಲು ಭಾರತ ಮುಂದಾಗಿದ್ದು, ಈ ಮೂಲಕ ಸುಮಾರು 46 ಲಕ್ಷ ಬ್ಯಾರೆಲ್ ತೈಲವನ್ನು ಸಂಗ್ರಹಿಸಲು ಅವಕಾಶ ನೀಡುತ್ತಿದೆ.
Advertisement
Advertisement
ಈ ಕುರಿತು ಸರ್ಕಾರಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಇಂಧನ ಮೂಲಸೌಕರ್ಯವನ್ನು ವೃದ್ಧಿಸಲು ಭಾರತವು ಜಾಗತಿಕ ಹೂಡಿಕೆಗೆ ಅವಕಾಶ ನೀಡುತ್ತಿದೆ. ಜಾಗತಿಕ ತೈಲ ಉತ್ಪಾದಕರು ಭಾರತದಲ್ಲಿ ಹೂಡಿಕೆ ಮಾಡಲು ಉತ್ಸುಕರಾಗಿದ್ದು, ಇಂಧನ ಬೇಡಿಕೆ ಹೆಚ್ಚಾದಂತೆಲ್ಲ, ದೇಶದ ಆರ್ಥಿಕತೆ ಬೆಳೆಯುತ್ತದೆ ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದ್ದಾರೆ.
Advertisement
ಭಾರತದ ತೈಲ ಸಂಗ್ರಹಣೆಯ ಸರ್ಕಾರಿ ಕಂಪನಿಯಾದ ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಲಿಮಿಟೆಡ್ ಈ ಕುರಿತ ಒಪ್ಪಂದ ಪತ್ರಕ್ಕೆ ಸಹಿ ಹಾಕಿದೆ. ಉಡುಪಿ ಜಿಲ್ಲೆಯ ಪಾದೂರಿನ ಘಟಕದ ಒಟ್ಟು 25 ಲಕ್ಷ ಟನ್‍ಗಳಷ್ಟು ಸಂಗ್ರಹಣೆಗೆ ಅವಕಾಶ ಕಲ್ಪಿಸಲಾಗಿದೆ.
Advertisement
ಕೇವಲ ಒಂದು ಕಂಪಾರ್ಟ್‍ಮೆಂಟ್ ಗೆ ಕುರಿತ ಒಪ್ಪಂದಕ್ಕೆ ಮಾತ್ರ ಅರಾಮ್ಕೊ ಸಹಿ ಹಾಕಿದೆ ಎಂದು ಇಂಡಿಯನ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್‍ಪಿಎಸ್ ಅಹುಜಾ ತಿಳಿಸಿದ್ದಾರೆ. ಪಾದೂರು ಶೇಖರಣಾ ಘಟಕ ನಾಲ್ಕು ಕಂಪಾರ್ಟ್‍ಮೆಂಟ್‍ಗಳನ್ನು ಹೊಂದಿದೆ.
ಇಲ್ಲಿಯವರೆಗೆ ಭಾರತದಲ್ಲಿ ತೈಲವನ್ನು ಸಂಗ್ರಹಿಸುತ್ತಿರುವ ವಿದೇಶಿ ಕಂಪನಿಗಳ ಪೈಕಿ ಪಾದೂರಿನಲ್ಲಿ ತೈಲ ಸಂಗ್ರಹಣೆಗೆ ಒಪ್ಪಿರುವ ಏಕೈಕ ಕಂಪನಿ ಅರಾಮ್ಕೊ ಆಗಿದೆ. ಕಳೆದ ವರ್ಷ ಇದೇ ಕಂಪನಿ ಪಾದೂರಿನ ಮೀಸಲು ಸಾಮರ್ಥ್ಯದ ಅರ್ಧದಷ್ಟು ಭಾಗವನ್ನು ಬಳಸುವ ಪ್ರಾಥಮಿಕ ಒಪ್ಪಂದಕ್ಕೆ ಸಹಿ ಹಾಕಿತ್ತು.
ಅರಾಮ್ಕೊ ಭಾರತದ ಕಾರ್ಯತಂತ್ರದ ಅಗತ್ಯಗಳಿಗಾಗಿ 46 ಲಕ್ಷ ಬ್ಯಾರೆಲ್‍ಗಳನ್ನು ಇಟ್ಟುಕೊಳ್ಳಬೇಕಾಗುತ್ತದೆ. ಉಳಿದ ತೈಲವನ್ನು ಭಾರತೀಯ ರಿಫೈನರಿಗಳಿಗೆ ಮಾರಾಟ ಮಾಡಲಿದೆ ಎಂದು ಅಹುಜಾ ತಿಳಿಸಿದ್ದಾರೆ.
ಭಾರತ, ಮೂರು ಸ್ಥಳಗಳಲ್ಲಿ ಭೂಗತ ಸಂಗ್ರಹಾಗಾರಗಳನ್ನು ಹೊಂದಿದ್ದು ತುರ್ತು ಸಂದರ್ಭದಲ್ಲಿ ಬಳಕೆ ಮಾಡಲು ಒಟ್ಟು 36.87 ದಶಲಕ್ಷ ಬ್ಯಾರೆಲ್ ತೈಲವನ್ನು ಈ ಸಂಗ್ರಹಾಗಾರಗಳಲ್ಲಿ ಸಂಗ್ರಹಿಸಬಹುದಾಗಿದೆ.