ರಷ್ಯಾ ತೈಲ ನಿಷೇಧ- ಅಮೆರಿಕ ಅಧ್ಯಕ್ಷರ ಫೋನ್‌ ಕರೆಗೂ ಕ್ಯಾರೆ ಎನ್ನದ ಸೌದಿ ಅರೇಬಿಯಾ, ಯುಎಇ

Public TV
2 Min Read
joe biden Mohammed bin Salman

ವಾಷಿಂಗ್ಟನ್‌: ರಷ್ಯಾದಿಂದ ಆಮದಾಗುತ್ತಿದ್ದ ತೈಲಕ್ಕೆ ಅಮೆರಿಕ ನಿರ್ಬಂಧ ವಿಧಿಸಿದೆ. ಇದರ ನಡುವೆಯೇ ತೈಲ ಶ್ರೀಮಂತ ರಾಷ್ಟ್ರಗಳಾದ ಸೌದಿ ಅರೇಬಿಯಾ ಮತ್ತು ಸಂಯುಕ್ತ ಅರಬ್‌ ಒಕ್ಕೂಟ (ಯುಎಇ) ಸಂಪರ್ಕಿಸಲು ಅಮೆರಿಕ ಮುಂದಾಗಿದೆ. ಆದರೆ ಅಮೆರಿಕ ಅಧ್ಯಕ್ಷರ ಫೋನ್‌ ಕರೆಗೂ ಈ ಎರಡೂ ದೇಶಗಳ ರಾಜರು ಕ್ಯಾರೆ ಎಂದಿಲ್ಲ.

ಸೌದಿ ಅರೇಬಿಯಾದ ರಾಜ ಮಹಮ್ಮದ್‌ ಬಿನ್‌ ಸಲ್ಮಾನ್‌ ಮತ್ತು ಸಂಯುಕ್ತ ಅರಬ್‌ ಒಕ್ಕೂಟದ ಶೇಖ್‌ ಮಹಮ್ಮದ್‌ ಬಿನ್‌ ಜಯಾದ್‌ ಅಲ್‌ ನಹ್ಯಾನ್‌ ಅವರು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರೊಂದಿಗೆ ಫೋನ್‌ ಕರೆಯಲ್ಲಿ ಮಾತನಾಡಲು ನಿರಾಕರಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‌ ಸರ್ಕಾರ ಉರುಳಿಸಲು ಯತ್ನಿಸಿಲ್ಲ: ರಷ್ಯಾ

Saudi aramco oil

ರಷ್ಯಾದಿಂದ ಆಮದಾಗುತ್ತಿದ್ದ ತೈಲಕ್ಕೆ ನಿರ್ಬಂಧ ವಿಧಿಸಿದ ಅಮೆರಿಕವು ತೈಲ ಶ್ರೀಮಂತ ರಾಷ್ಟ್ರಗಳಾದ ಸೌದಿ ಅರೇಬಿಯಾ, ಯುಎಇ ಅನ್ನು ಭೇಟಿಯಾಗಲು ಯೋಜನೆ ರೂಪಿಸಿತ್ತು. ಸೌದಿ ಮತ್ತು ಯುಎಇ ಅಧಿಕಾರಿಗಳು ಬೈಡೆನ್‌ ಆಡಳಿತದೊಂದಿಗೆ ಸಂವಾದ ನಡೆಸಲು ನಿರಾಕರಿಸಿದ್ದಾರೆ.

ಕೆಲವು ನಿರೀಕ್ಷೆಗಳನ್ನಿಟ್ಟುಕೊಂಡು ಫೋನ್‌ ಕರೆ ಮಾಡಲಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ ಎಂದು ಸೌದಿ ಮತ್ತು ಯುಎಇ ನಿಲುವಿನ ಬಗ್ಗೆ ಅಮೆರಿಕ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಪುಟಿನ್‍ನ್ನು ತಡೆಯದಿದ್ದರೇ ಯಾರೂ ಸುರಕ್ಷಿತವಾಗಿರಲ್ಲ: ಉಕ್ರೇನ್ ಅಧ್ಯಕ್ಷರ ಪತ್ನಿ

Joe Biden

2018ರಲ್ಲಿ ಪತ್ರಕರ್ತ ಜಮಾಲ್‌ ಖಶೋಗ್ಗಿ ಹತ್ಯೆ ಆರೋಪವನ್ನು ಸೌದಿ ರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಮೇಲೆ ಅಮೆರಿಕ ಹೊರಿಸಿತ್ತು. ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತವು ಸಹಿ ಹಾಕಿದ್ದ ಒಪ್ಪಂದವನ್ನು ರದ್ದುಪಡಿಸುವ ಮೂಲಕ ಸೌದಿ ಅರೆಬಿಯಾಕ್ಕೆ ಶಸ್ತ್ರಾಸ್ತ್ರಗಳ ಮಾರಾಟವನ್ನು ಬೈಡೆನ್‌ ಆಡಳಿತ ಸ್ಥಗಿತಗೊಳಿಸಿತ್ತು. ಇರಾನ್‌ ಪರಮಾಣು ಒಪ್ಪಂದವನ್ನು ಪುನರುಜ್ಜೀವನಗೊಳಿಸುವ ಯುಎಸ್‌ ಅಧ್ಯಕ್ಷರ ಪ್ರಯತ್ನ ಮತ್ತು ಆಸ್ಟ್ರಿಯಾದ ವಿಯೆನ್ನಾದ ಮಾತುಕತೆ ನಡೆಸುವುದು ಸೌದಿಯನ್ನು ಕೆರಳಿಸಿತ್ತು.

ಸುನ್ನಿ ಮುಸ್ಲಿಂ ಸೌದಿ ಅರೇಬಿಯಾ ಮತ್ತು ಅದರ ಶಿಯಾ ಪ್ರತಿಸ್ಪರ್ಧಿ ಇರಾನ್‌ ಎರಡರೊಂದಿಗೂ ರಷ್ಯಾ ಸೌಹಾರ್ದ ಸಂಬಂಧವನ್ನು ಹೊಂದಿದೆ. ಜೊತೆಗೆ ಸಿರಿಯಾದಲ್ಲಿ ಮಿಲಿಟರಿ ಹಸ್ತಕ್ಷೇಪ ಮಾಡಿದ ವಾಷಿಂಗ್ಟನ್‌ ವಿರುದ್ಧ ಇಡೀ ಮಧ್ಯಪ್ರಾಚ್ಯದೊಂದಿಗೆ ಅಧ್ಯಕ್ಷ ಪುಟಿನ್‌ ನಾಗರಿಕ ಯುದ್ಧದಲ್ಲಿ ಅಧ್ಯಕ್ಷ ಬಶರ್‌ ಅಸ್ಸಾದ್‌ ಅವರ ಬೆಂಬಲಕ್ಕೆ ನಿಂತಿದ್ದರು. ಇದನ್ನೂ ಓದಿ: ಉಕ್ರೇನ್ ನಟನ ಸಾವಿನ ಬೆನ್ನಲ್ಲೆ ಅವರ ಕೊನೆಯ ಪೋಸ್ಟ್ ವೈರಲ್

Russia Ukraine War 1 1

ರಷ್ಯಾದ ತೈಲ ಆಮದು ರದ್ದುಗೊಳಿಸುತ್ತಿದ್ದಂತೆ ಅಮೆರಿಕವು ತೈಲ ಶ್ರೀಮಂತ ರಾಷ್ಟ್ರ ಸೌದಿ ಅರೇಬಿಯಾ ಮತ್ತು ಯುಎಇನೊಂದಿಗೆ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳಲು ಹರಸಾಹಸಪಟ್ಟಿದೆ. ಆದರೆ ಯುಎಇ ವಿದೇಶಾಂಗ ಸಚಿವಾಲಯವು ಕರೆಯನ್ನು ಮರು ನಿಗದಿಪಡಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.

Share This Article
Leave a Comment

Leave a Reply

Your email address will not be published. Required fields are marked *