ಮುಂಬೈ: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ (World’s Richest T20 League) ಆರಂಭಿಸಲು ಸೌದಿ ಅರೇಬಿಯಾ (Saudi Arabia) ಮುಂದಾಗಿದ್ದು ಐಪಿಎಲ್ ಮಾಲೀಕರನ್ನು ಸಂಪರ್ಕಿಸಿದೆ.
2008ರಲ್ಲಿ ಆರಂಭಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ (IPL)ಗೆ ವಿಶ್ವದ ದುಬಾರಿ ಕ್ರೀಡೆ ಎಂದೇ ಖ್ಯಾತಿ ಪಡೆದುಕೊಂಡಿದೆ. ದೇಶ-ವಿದೇಶದ ಆಟಗಾರರು ಐಪಿಎಲ್‌ನಲ್ಲಿ ಆಡಬೇಕೆಂದು ಬಯಸುತ್ತಾರೆ. ಈ ಲೀಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ವಿಶ್ವಮಟ್ಟದಲ್ಲಿ ದಾಖಲೆಗಳನ್ನೂ ಮಾಡುತ್ತಾರೆ. ಆದರೀಗ ಪ್ರತಿಷ್ಠಿತ ಐಪಿಎಲ್‌ಗೆ ಸೆಡ್ಡು ಹೊಡೆಯಲು ಸೌದಿ ಅರೇಬಿಯಾ ಮಾಸ್ಟರ್ ಪ್ಲ್ಯಾನ್ ಮಾಡಿದೆ.
Advertisement
Advertisement
ಸೌದಿ ಅರೇಬಿಯಾದಲ್ಲಿ ಕ್ರಿಕೆಟ್ ಉತ್ತೇಜಿಸುವ ಸಲುವಾಗಿ, ಐಪಿಎಲ್‌ಗಿಂತಲೂ ಶ್ರೀಮಂತ ಟಿ20 ಕ್ರಿಕೆಟ್ ಲೀಗ್ ಆಯೋಜಿಸಲು ಸಿದ್ಧತೆ ನಡೆಸಲಾಗುತ್ತಿದೆ. ಸೌದಿ ಒಂದು ವರ್ಷದ ಹಿಂದೆಯೇ ಈ ಬಗ್ಗೆ ಕೆಲಸ ಆರಂಭಿಸಿದ್ದು ಐಪಿಎಲ್ ಮಾಲೀಕರನ್ನು ಸಂಪರ್ಕಿಸಿದೆ. ಇದನ್ನೂ ಓದಿ: IPL 2023: ಡೆಲ್ಲಿಗೆ ಸತತ 5ನೇ ಸೋಲು – ತವರಿನಲ್ಲಿ RCBಗೆ 23 ರನ್‌ಗಳ ಭರ್ಜರಿ ಜಯ
Advertisement
ಈಗಾಗಲೇ ಫುಟ್ಬಾಲ್ ನಂತಹ ಕ್ರೀಡೆಗಳಿಗೆ ಸೌದಿ ಅರೇಬಿಯಾ ಸಾಕಷ್ಟು ಹಣ ಹೂಡಿಕೆ ಮಾಡಿದೆ. ಇನ್ಮುಂದೆ ಕ್ರಿಕೆಟ್‌ನಲ್ಲೂ ಹೂಡಿಕೆ ಮಾಡುವ ಮೂಲಕ ಗಮನ ಸೆಳೆಯಲು ಮುಂದಾಗಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ ಮುಂದಿನ ವರ್ಷದಿಂದ ಸೌದಿಯಲ್ಲಿ ದುಬಾರಿ ಟಿ20 ಲೀಗ್ ಆರಂಭವಾಗುವ ಸಾಧ್ಯತೆ ಇದೆ.
Advertisement
ಈ ವಿಚಾರಕ್ಕೆ ಮಾಧ್ಯಮಕ್ಕೆ ಬಿಸಿಸಿಐ (BCCI) ಪ್ರತಿನಿಧಿಗಳು ಪ್ರತಿಕ್ರಿಯಿಸಿದ್ದು, ಭಾರತೀಯ ಆಟಗಾರರು ಯಾವುದೇ ವಿದೇಶಿ ಲೀಗ್‌ಗಳಲ್ಲಿ ಭಾಗವಹಿಸುವುದಿಲ್ಲ. ಆದರೆ ಐಪಿಎಲ್ ತಂಡಗಳು ಭಾಗವಹಿಸಲು ಯಾವುದೇ ನಿರ್ಬಂಧವಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಖೂಷ್ಬೂ ಸುಂದರ್ ಅತ್ತೆಯನ್ನು ಭೇಟಿಯಾದ ಧೋನಿ
ಲವು ದೇಶಗಳಲ್ಲಿ ಟಿ20 ಲೀಗ್ ನಡೆಯುತ್ತಿದ್ದರೂ ಇಲ್ಲಿಯವರೆಗೂ ಭಾರತದ ತಂಡದ ಹಾಲಿ ಆಟಗಾರರಿಗೆ ಆ ಟೂರ್ನಿಯಲ್ಲಿ ಭಾಗವಹಿಸಲು ಅನುಮತಿಯನ್ನು ಬಿಸಿಸಿಐ ನೀಡಿಲ್ಲ.