ರಿಯಾದ್: ಯೆಮೆನ್(Yemen) ಬಂದರು ನಗರವಾದ ಮುಕಲ್ಲಾ (Mukalla) ಮೇಲೆ ಸೌದಿ ಅರೇಬಿಯಾ ಇಂದು ಏರ್‌ಸ್ಟ್ರೈಕ್ (Air Strike) ಮಾಡಿದೆ. ಅಷ್ಟೇ ಅಲ್ಲದೇ ಯೆಮೆನ್‌ನ ಪ್ರತ್ಯೇಕವಾದಿಗಳಿಗೆ ಬೆಂಬಲ ನೀಡುತ್ತಿರುವುದು ಅತ್ಯಂತ ಅಪಾಯಕಾರಿ ಎಂದು ಯುಎಇಗೆ (UAE) ಎಚ್ಚರಿಕೆ ನೀಡಿದೆ.
ಬಾಂಬ್ ದಾಳಿಯ ಬಳಿಕ ಯೆಮೆನ್ ಅಧ್ಯಕ್ಷೀಯ ಮಂಡಳಿಯು ಯುಎಇ ರಕ್ಷಣಾ ಒಪ್ಪಂದವನ್ನು ರದ್ದುಗೊಳಿಸಿದೆ. ಯೆಮೆನ್‌ನ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ತಡೆಯಬೇಕು ಮತ್ತು ದೇಶದ ಹೊರಗೆ ಕಾರ್ಯನಿರ್ವಹಿಸುವ ಯಾವುದೇ ಸಂಘಟನೆಗಳಿಗೆ ಮಿಲಿಟರಿ ಮತ್ತು ಲಾಜಿಸ್ಟಿಕ್ ಬೆಂಬಲ ನೀಡುವುದನ್ನು ಯುಎಇ ತಕ್ಷಣವೇ ನಿಲ್ಲಿಸಬೇಕು ಎಂದು ಉನ್ನತ ರಾಜಕೀಯ ಮತ್ತು ಮಿಲಿಟರಿ ನಾಯಕರನ್ನು ಒಳಗೊಂಡ ಮಂಡಳಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
Yemen’s presidential council, backed by Saudi Arabia, says Emirati-backed forces must leave Yemen within 24 hours. It follows a Saudi air strike on Mukalla port after two ships unloaded weapons for southern separatists. Analysts are warning violence in Yemen could escalate. pic.twitter.com/wd9LCJ8WTV
— Al Jazeera English (@AJEnglish) December 30, 2025
ಸೌದಿ ದಾಳಿ ಮಾಡಿದ್ದು ಯಾಕೆ?
ಯೆಮೆನ್‌ನಲ್ಲಿ ಆಂತರಿಕ ಸಂಘರ್ಷವಿದ್ದು ವಿವಿಧ ರಾಜಕೀಯ ಪಕ್ಷಗಳು, ಬಂಡುಕೋರರು ಅಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಕೆಲ ಪ್ರದೇಶಗಳು ಬಂಡುಕೋರರ ಕೈಯಲ್ಲಿದ್ದರೆ ಕೆಲವು ಪ್ರದೇಶ ಸರ್ಕಾರದ ನಿಯಂತ್ರಣದಲ್ಲಿದೆ. ಇದನ್ನೂ ಓದಿ: 200% ಟ್ಯಾರಿಫ್ ವಿಧಿಸುವ ಬೆದರಿಕೆ ಹಾಕಿ ಭಾರತ-ಪಾಕ್ ಯುದ್ಧ ಕೊನೆಗೊಳಿಸಿದೆ – ನೆತನ್ಯಾಹು ಮುಂದೆ ಟ್ರಂಪ್ ಬಡಾಯಿ
ಎಸ್‌ಟಿಸಿಗೆ ಬಲ ತುಂಬಲು ಮುಕಲ್ಲಾ ಬಂದರಿಗೆ ಶಸ್ತ್ರಾಸ್ತ್ರಗಳು ಮತ್ತು ಶಸ್ತ್ರಸಜ್ಜಿತ ವಾಹನಗಳನ್ನು ಯುಎಇ ಕಳುಹಿಸಿಕೊಟ್ಟಿತ್ತು. ಶಸ್ತ್ರಾಸ್ತ್ರ ಕಳುಹಿಸಿದ ಹಿನ್ನೆಲೆಯಲ್ಲಿ ಸಿಟ್ಟಾದ ಸೌದಿ ಅರೇಬಿಯಾ ಈಗ ಶಸ್ತ್ರಾಸ್ತ್ರ ಸಂಗ್ರಹಿಸಿಟ್ಟಿರುವ ಮುಕಲ್ಲಾ ನಗರದ ಮೇಲೆಯೇ ಬಾಂಬ್ ದಾಳಿ ನಡೆಸಿದೆ.
The Saudi-led Coalition to Support Legitimacy in Yemen has announced that it carried out “limited” airstrikes in the last few hours on the Port of Mukalla in Southern Yemen, targeting military equipment and vehicles for the Southern Transitional Council (STC) that has arrived via… pic.twitter.com/34wsv0PG0e
— OSINTdefender (@sentdefender) December 30, 2025
ಎರಡು ದೇಶಕ್ಕೆ ಏನು ಆಸಕ್ತಿ?
ಯುಎಎ ಮತ್ತು ಸೌದಿ ಅರೇಬಿಯಾ ತೈಲ ಹೊಂದಿದ್ದರೂ ಎರಡೂ ದೇಶಗಳು ತೈಲ ನಿಕ್ಷೇಪದ ಮೇಲೆ ಕಣ್ಣಿಟ್ಟಿದೆ. ಈ ಕಾರಣಕ್ಕೆ ಅಲ್ಲಿರುವ ಎಸ್‌ಟಿಸಿ ಸಂಘಟನೆಗೆ ಯುಎಇ ನೆರವು ನೀಡುತ್ತಿದ್ದರೆ ಯೆಮೆನ್ ಸರ್ಕಾರಕ್ಕೆ ಸೌದಿ ಅರೇಬಿಯಾ ನೆರವು ನೀಡುತ್ತಿದೆ.
ಸೌದಿ ಅರೇಬಿಯಾ ಯೆಮೆನ್ ಜೊತೆ ಗಡಿಯನ್ನು ಹಂಚಿಕೊಂಡಿದ್ದರೂ ಸಂಪೂರ್ಣವಾಗಿ ನಿಯಂತ್ರಣ ಮಾಡುತ್ತಿಲ್ಲ. ಭೌಗೋಳಿಕ ರಾಜಕೀಯ, ಭದ್ರತೆ ಮತ್ತು ಆರ್ಥಿಕ ಹಿತಾಸಕ್ತಿಗಾಗಿ ಯೆಮೆನ್ ವಿಚಾರದಲ್ಲಿ ಆಸಕ್ತಿಯನ್ನು ಹೊಂದಿದೆ. ದಕ್ಷಿಣ ಭಾಗದಲ್ಲಿ ಬಂಡುಕೋರರನ್ನು ನಿಯಂತ್ರಿಸಿ ಸಮುದ್ರ ವ್ಯಾಪಾರ ಮಾರ್ಗದಲ್ಲಿ ಯಾವುದೇ ಸಮಸ್ಯೆ ಆಗದೇ ಇರಲು ಯೆಮೆನ್ ಸರ್ಕಾರಕ್ಕೆ ಬೆಂಬಲ ನೀಡುತ್ತಿದೆ.
BREAKING: Saudi Arabia accuses the UAE of dangerous actions in eastern Yemen, says they threaten Saudi national security, and warns it will respond to any red-line violations.
Riyadh calls on the UAE to withdraw ALL forces from Yemen within 24 hours and halt military and… pic.twitter.com/LRyXmggyrB
— Clash Report (@clashreport) December 30, 2025
ಯುಎಇಗೆ ಎಚ್ಚರಿಕೆ
ಎರಡು ಹಡಗುಗಳಿಂದ ಲೋಡ್ ಮಾಡಲಾದ ಶಸ್ತ್ರಾಸ್ತ್ರಗಳು ಮತ್ತು ಮಿಲಿಟರಿ ವಾಹನಗಳನ್ನು ಗುರಿಯಾಗಿಸಿಕೊಂಡು ಸೀಮಿತ ವಾಯುದಾಳಿಯನ್ನು ನಡೆಸಲಾಗಿದೆ. ಯುಎಇಯ ಪೂರ್ವ ಕರಾವಳಿಯ ಬಂದರು ನಗರವಾದ ಫುಜೈರಾದಿಂದ ಹಡಗುಗಳು ಬಂದ ನಂತರ ಈ ದಾಳಿ ನಡೆದಿದೆ.
ಪೂರ್ವ ಯೆಮೆನ್‌ನಲ್ಲಿ ಯುಎಇ ಅಪಾಯಕಾರಿ ನಿರ್ಧಾರಗಳು ಸೌದಿ ರಾಷ್ಟ್ರೀಯ ಭದ್ರತೆಗೆ ಬೆದರಿಕೆಯನ್ನುಂಟುಮಾಡುತ್ತವೆ. ಯೆಮೆನ್‌ನಲ್ಲಿರುವ ಎಲ್ಲಾ ಪಡೆಗಳನ್ನು 24 ಗಂಟೆಗಳ ಒಳಗೆ ಹಿಂತೆಗೆದುಕೊಳ್ಳಬೇಕು. ಯೆಮೆನ್ ಬಣಗಳಿಗೆ ಮಿಲಿಟರಿ ಮತ್ತು ಆರ್ಥಿಕ ಬೆಂಬಲವನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಯುಎಇಗೆ ಸೌದಿ ಸೂಚಿಸಿದೆ.

