ರಿಯಾದ್: ಮಹತ್ವದ ಬೆಳವಣಿಗೆಯಲ್ಲಿ ಸೌದಿ ಅರೇಬಿಯಾ ಸರ್ಕಾರ ಸುನ್ನಿ ಇಸ್ಲಾಮಿಕ್ ಸಂಘಟನೆಯಾಗಿರುವ ತಬ್ಲಿಘಿ ಜಮಾತ್ ಅನ್ನು ನಿಷೇಧಿಸಿದೆ. ಈ ಸಂಘಟನೆ ಭಯೋತ್ಪಾದನೆ ಚಟುವಟಿಕೆಗಳಿಗೆ ಹೆಬ್ಬಾಗಿಲು ಎಂದಿರುವ ಸರ್ಕಾರ ಈ ಸಂಘಟನೆಯಿಂದ ದೂರ ಇರುವಂತೆ ಪ್ರಜೆಗಳಿಗೆ ಎಚ್ಚರಿಕೆ ನೀಡಿದೆ.
ಮುಂದಿನ ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ಈ ಕುರಿತು ಜನರಿಗೆ ಮಾಹಿತಿಯನ್ನು ನೀಡಬೇಕೆಂದು ಮಸೀದಿಗಳ ಮುಖ್ಯಸ್ಥರಿಗೆ ಸೌದಿ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯ ಸೂಚಿಸಿದೆ.
Advertisement
His Excellency the Minister of Islamic Affairs, Dr.#Abdullatif Al_Alsheikh directed the mosques' preachers and the mosques that held Friday prayer temporary to allocate the next Friday sermon 5/6/1443 H to warn against (the Tablighi and Da’wah group) which is called (Al Ahbab)
— Ministry of Islamic Affairs ???????? (@Saudi_MoiaEN) December 6, 2021
Advertisement
ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿದ ಇಸ್ಲಾಮಿಕ್ ವ್ಯವಹಾರ ಸಚಿವ ಡಾ. ಅಬ್ದುಲ್ಲತೀಫ್ ಆಲ್ ಶೇಖ್, ಶುಕ್ರವಾರ ಪ್ರಾರ್ಥನೆ ನಡೆಯುವ ವೇಳೆ ಎಲ್ಲ ಮಸೀದಿಗಳ ಮುಖ್ಯಸ್ಥರು ತಬ್ಲಿಘಿ ಮತ್ತು ದಾವಾ ಸಂಘಟನೆಯ ಬಗ್ಗೆ ಎಚ್ಚರಿಕೆ ನೀಡಿ 4 ಅಂಶಗಳ ಬಗ್ಗೆ ಹೇಳಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಾಕ್‍ನೊಂದಿಗೆ ಮಾತುಕತೆ ಇಲ್ಲದೇ ಉಗ್ರವಾದ ಅಂತ್ಯ ಅಸಾಧ್ಯವಾಗಿದೆ: ಫಾರೂಕ್ ಅಬ್ದುಲ್ಲಾ
Advertisement
4 ಅಂಶಗಳು ಯಾವುದು?
1. ಈ ಸಂಘಟನೆಯ ಜೊತೆ ನಂಟು ಹೊಂದುವುದನ್ನು ನಿಷೇಧಿಸಲಾಗಿದೆ ಎಂಬುದನ್ನು ತಿಳಿಸಬೇಕು.
2. ತಬ್ಲಿಘಿಗಳ ಪ್ರಮುಖ ತಪ್ಪು ನಡೆಗಳ ಬಗ್ಗೆ ವಿವರಿಸಬೇಕು.
3. ಭಯೋತ್ಪಾನೆಗೆ ಹೆಬ್ಬಾಗಿಲು, ತಪ್ಪು ಮಾರ್ಗದರ್ಶನ ನೀಡುವ ಈ ಸಂಘಟನೆಯಿಂದ ದೂರ ಇರುವಂತೆ ಹೇಳಬೇಕು.
4. ತಬ್ಲಿಘಿ ಸಂಘಟನೆಯಿಂದ ಸಮಾಜಕ್ಕೆ ಇರುವ ಅಪಾಯದ ಬಗ್ಗೆ ವಿವರಿಸಬೇಕು.
Advertisement
3- Mention their danger to society.
4- Statement that affiliation with partisan groups, including (the Tablighi and Da’wah Group) is prohibited in the Kingdom of Saudi Arabia.
— Ministry of Islamic Affairs ???????? (@Saudi_MoiaEN) December 6, 2021
ತಬ್ಲಿಘಿಗಳು ಯಾರು?
ಬ್ರಿಟಿಷರ ಅವಧಿಯಲ್ಲಿ 1926 ರಲ್ಲಿ ಭಾರತದಲ್ಲಿ ಹುಟ್ಟಿಕೊಂಡ ತಬ್ಲಿಘಿ ಜಮಾತ್ ಸುನ್ನಿ ಇಸ್ಲಾಮಿಕ್ ಮಿಷನರಿ ಸಂಘಟನೆಯಾಗಿದೆ. ಮುಸ್ಲಿಂ ಸಂಪ್ರದಾಯ, ಆಚರಣೆ, ಉಡುಪುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಎಂದು ಪ್ರತಿಪಾದಿಸುತ್ತದೆ. ಜಗತ್ತಿನಾದ್ಯಂತ 35 ರಿಂದ 40 ಕೋಟಿ ಅನುಯಾಯಿಗಳು ಇದ್ದಾರೆ ಎಂದು ಅಂದಾಜಿಸಲಾಗಿದೆ. ರಾಜಕೀಯ ಚಟುವಟಿಕೆಯಿಂದ ದೂರ ಇದ್ದು ಧರ್ಮ ಪ್ರಚಾರ ಮಾತ್ರ ನಮ್ಮ ಕೆಲಸ ಎಂದು ಸಂಘಟನೆ ಹೇಳಿಕೊಳ್ಳುತ್ತದೆ. ಇದನ್ನೂ ಓದಿ: ಹಿಂದೂ ಧರ್ಮಕ್ಕೆ ಮತಾಂತರಗೊಂಡ ಕೇರಳದ ಖ್ಯಾತ ಸಿನಿಮಾ ನಿರ್ದೇಶಕ ಅಲಿ ಅಕ್ಬರ್
ಕಳೆದ ವರ್ಷ ಕೋವಿಡ್ ಮೊದಲ ಅಲೆಯ ಸಮಯದಲ್ಲಿ ಭಾರತದಲ್ಲಿ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ಸಾಮೂಹಿಕ ಸಭೆಯ ಆಯೋಜಿಸಿದ್ದಕ್ಕೆ ಈ ಸಂಘಟನೆಯ ವಿರುದ್ಧ ಮೊದಲ ಬಾರಿಗೆ ದೇಶದಲ್ಲಿ ಭಾರೀ ಟೀಕೆಗಳು ವ್ಯಕ್ತವಾಗಿತ್ತು.
ತಬ್ಲಿಘಿಗಳು ನೇರವಾಗಿ ಉಗ್ರ ಕೃತ್ಯದಲ್ಲಿ ಭಾಗಿಯಾದ ಬಗ್ಗೆ ಉದಾಹರಣೆ ಇಲ್ಲ. ಆದರೆ ಈ ಸಂಘಟನೆ ನೀಡುವ ವಿಪರೀತ ಧರ್ಮ ಬೋಧನೆಯಿಂದ ಇದರ ಅನುಯಾಯಿಗಳು ತೀವ್ರವಾದಿ ಮುಸ್ಲಿಮ್ ಸಂಘಟನೆಗಳಿಗೆ ಸೇರುತ್ತಾರೆ ಎನ್ನುವುದು ಅಮೆರಿಕದ ಆರೋಪ.