ತುಮಕೂರು: ಹೋಟೆಲ್, ರೆಸ್ಟೋರೆಂಟ್‍ಗೆ ಹೋದಾಗ ಅಲ್ಲಿ ಕೊಡೋ ಸಾಸ್ ಬಳಸೋ ಮುನ್ನ ಸ್ವಲ್ಪ ಎಚ್ಚರ ವಹಿಸಿ. ಯಾಕಂದ್ರೆ ನಾಲಗೆಗೆ ಟೇಸ್ಟಿ ಆಗಿರೋ ಸಾಸ್‍ನಲ್ಲಿ ಹುಳಗಳದ್ದೇ ರಾಶಿ ಕಂಡುಬಂದಿದೆ.
Advertisement
ಸಾಸ್ ತುಂಬಿಸಿಟ್ಟಿದ್ದ ಕಂಟೈನರ್ ಗಳಲ್ಲಿ ಹುಳ-ಹುಪ್ಪಟ್ಟೆಗಳ ರಾಶಿ ಕಂಡಿದೆ. ಹುಳಗಳಿರುವ ಈ ಸಾಸನ್ನೇ ಬಾಟಲ್‍ಗಳಲ್ಲಿ ತುಂಬಿ ಸಪ್ಲೈ ಮಾಡ್ತಾರೆ. ಈ ಸಾಸನ್ನೇ ಹೋಟೆಲ್, ರೆಸ್ಟೋರೆಂಟ್‍ಗಳಲ್ಲಿ ಬಾಯಿ ಚಪ್ಪರಿಸೋಕೆ ಕೊಡ್ತಾರೆ. ಇನ್ನು ಸಾಸ್ ರೆಡಿ ಮಾಡೋ ಜಾಗ ನೋಡಿದ್ರೆ ಊಟ ಮಾಡೋಕೂ ಮನಸ್ಸಾಗಲ್ಲ.
Advertisement
Advertisement
ಇಂಥದ್ದೊಂದು ಸಾಸ್ ತಯಾರಾಗ್ತಿರೋದು ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರುವ ತುಮಕೂರಿನ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ. ಇಲ್ಲಿ ರಂಜಿತಾ ಎಂಟರ್ ಪ್ರೈಸಸ್ ಕಂಪನಿ ಗುಡ್ ಅಂಡ್ ಫ್ರೆಶ್ ಅನ್ನೋ ಹೆಸರಲ್ಲಿ ಸಾಸ್ ತಯಾರಿಸಿ ಮಾರುಕಟ್ಟೆಗೆ ಬಿಟ್ಟಿದೆ. ಟೊಮೆಟೋ ಬಳಸುವುದರ ಬದಲು ಮೈದಾ ಹಿಟ್ಟು, ಕೆಂಪು ಬಣ್ಣ ಸೇರಿಸಿ ಸಾಸ್ ರೆಡಿ ಮಾಡ್ತಾರೆ.
Advertisement
ಹಗಲು ಹೊತ್ತಲ್ಲಿ ಫ್ಯಾಕ್ಟರಿ ಓಪನ್ ಮಾಡಿದ್ರೆ ಬಣ್ಣ ಬಯಲಾಗುತ್ತೆ ಅಂತಾ ರಾತ್ರಿ ಹೊತ್ತು ಸಾಸ್ ರೆಡಿ ಮಾಡಿ ಬಾಟಲ್‍ಗೆ ತುಂಬಿಸ್ತಾರೆ. ಫ್ಯಾಕ್ಟರಿಯ ಒಳಗೆ ಹೋಗಿ ನೋಡಿದ್ರೆ ಸಾಸ್ ತುಂಬಿದ್ದ ಕಂಟೈನರ್‍ಗಳಲ್ಲಿ ಹುಳುಗಳದ್ದೇ ರಾಶಿ ಕಂಡುಬಂದಿದೆ.