ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಎಎಪಿ ಮಾಜಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ (Satyendar Jain) ಅವರಿಗೆ ಕೋರಲಾದ ಮಧ್ಯಂತರ ವೈದ್ಯಕೀಯ ಜಾಮೀನು (Medical Bail) ವಿಸ್ತರಣೆಯನ್ನು ಜಾರಿ ನಿರ್ದೇಶನಾಲಯ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೇ ಸತ್ಯೇಂದರ್ ಜೈನ್ ಅವರು ಜೈಲಿನ ಆವರಣದಲ್ಲಿ ಸ್ವಿಮ್ಮಿಂಗ್ ಪೂಲ್ ಬೇಕೆಂದು ಕೇಳುತ್ತಿದ್ದಾರೆ ಎಂಬುದಾಗಿ ಜಾರಿ ನಿರ್ದೇಶನಾಲಯ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ (Supreme Court) ತಿಳಿಸಿದೆ.
Advertisement
ಜೈನ್ ಅವರ ವೈದ್ಯಕೀಯ ಸಲಹೆಯನ್ನ ಉಲ್ಲೇಖಿಸಿ ಅವರ ಮಧ್ಯಂತರ ಜಾಮೀನು ವಿಸ್ತರಣೆ ಮಾಡುವಂತೆ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದರು. ಸತ್ಯೇಂದರ್ ಜೈನ್ ಅವರು ಮಹತ್ವದ ಬೆನ್ನುಹುರಿ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಕೆಲವು ಬಹುಮುಖ್ಯ ಚಿಕಿತ್ಸೆಗಳಿಗೆ ಒಳಗಾಗುತ್ತಿದ್ದಾರೆ. ಹೀಗಾಗಿ ಅವರಿಗೆ ನೀಡಿರುವ ಮಧ್ಯಂತರ ಜಾಮೀನು ಅವಧಿಯನ್ನು ವಿಸ್ತರಿಸಬೇಕು ಎಂದು ಸಿಂಘ್ವಿ ಕೋರಿದ್ದರು.
Advertisement
Advertisement
ಜೈನ್ ಅವರಿಗೆ ಮಧ್ಯಂತರ ಜಾಮೀನು ವಿಸ್ತರಣೆ ಮಾಡಲು ವೈದ್ಯರ ಸಲಹೆ ಸಾಲುವುದಿಲ್ಲ ಎಂದು ಪ್ರತಿಪಾದಿಸಿದ ಜಾರಿ ನಿರ್ದೇಶನಾಲಯ, ಜಾಮೀನು ವಿಸ್ತರಣೆ ನೀಡುವ ಮನವಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಅವರು ಜೈಲಿನಲ್ಲಿ ಈಜುಕೊಳ ಬೇಕೆಂದು ಕೇಳುತ್ತಿದ್ದಾರೆ. ಎಲ್ಲರಿಗೂ ಇದು ಸಾಧ್ಯವಾಗಲ್ಲ ಎಂದು ಇಡಿ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ ರಾಜು ತಿಳಿಸಿದ್ದಾರೆ. ಇದನ್ನೂ ಓದಿ: ಹನಿಟ್ರ್ಯಾಪ್ ಭೀತಿ – ಯೂನಿಫಾರಂ ಧರಿಸಿ ಫೋಟೊ, ವೀಡಿಯೋ ಅಪ್ಲೋಡ್ ಮಾಡದಂತೆ ಅರೆಸೇನಾ ಪಡೆಗಳಿಗೆ ಸೂಚನೆ
Advertisement
ಜೈನ್ ಅವರನ್ನು ಏಮ್ಸ್ ವೈದ್ಯರ ತಂಡ ಸ್ವತಂತ್ರವಾಗಿ ತಪಾಸಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ ರಾಜು, ಅಗತ್ಯಬಿದ್ದರೆ, ಜೈನ್ ಅವರಿಗೆ ಫಿಸಿಯೋ ಥೆರಪಿ ನೀಡಲು ಅವರು ಈಜುಕೊಳಕ್ಕೆ ಕರೆದೊಯ್ಯಬಹುದು ಎಂದು ಹೇಳಿದರು. ಈ ವೇಳೆ ಕೋರ್ಟ್, ಆದ್ರೆ ಏನ್ ಮಾಡೋದು ಅವರು ಫಿಸಿಯೋಥೆರಪಿಗೆ ಒಳಗಾದ್ರೆ ನೀವು ಫೋಟೋ ತೆಗೆದು ಅವುಗಳನ್ನೂ ಪ್ರಕಟಿಸಿಬಿಡ್ತೀರಿ ಎಂದು ಹೇಳಿತು. ಬಳಿಕ ಜೈನ್ ಅವರ ಮಧ್ಯಂತರ ವೈದ್ಯಕೀಯ ಜಾಮೀನು ಅವಧಿಯನ್ನ ಸೆಪ್ಟೆಂಬರ್ 1ರವರೆಗೂ ವಿಸ್ತರಿಸಲು ಕೋರ್ಟ್ ಒಪ್ಪಿಗೆ ಸೂಚಿಸಿತು.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 2022ರಿಂದಲೂ ಜೈಲಿನಲ್ಲಿರುವ ಜೈನ್ ಅವರಿಗೆ ಜಾಮೀನು ನೀಡಲು ದೆಹಲಿ ಹೈಕೋರ್ಟ್ ಏಪ್ರಿಲ್ 6ರಂದು ನಿರಾಕರಿಸಿತ್ತು. ಜಾಮೀನು ನಿರಾಕರಿಸಿದ ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಯಾವುದೇ ಕಾನೂನುಬಾಹಿರ ಅಂಶ ಕಂಡುಬಂದಿಲ್ಲ ಎಂದು ಹೈಕೋರ್ಟ್ ಹೇಳಿತ್ತು. ಇದನ್ನು ಜೈನ್ ಅವರು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿದ್ದರು.
Web Stories