ನವದೆಹಲಿ: ತಿಹಾರ್ ಜೈಲಿನ (Tihar Jail) ಶೌಚಾಲಯದಲ್ಲಿ (Washroom) ಕುಸಿದು ಬಿದ್ದ ಪರಿಣಾಮ ದೆಹಲಿಯ ಮಾಜಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ (Satyendar Jain) ಅವರನ್ನು ಗುರುವಾರ ಆಸ್ಪತ್ರೆಗೆ ದಾಖಲಿಸಲಾಗಿದೆ. ಸತ್ಯೇಂದ್ರ ಜೈನ್ ಕೇವಲ 3 ದಿನಗಳ ಬಳಿಕ ಮತ್ತೆ ಆಸ್ಪತ್ರೆ (Hospital) ಸೇರಿದ್ದಾರೆ.
ಅನಾರೋಗ್ಯದ ಕಾರಣದಿಂದಾಗಿ ಸತ್ಯೇಂದ್ರ ಜೈನ್ ಸೋಮವಾರ ಆಸ್ಪತ್ರೆ ದಾಖಲಾಗಿದ್ದರು. ಬಳಿಕ ಗುರುವಾರ ಅವರು ತಿಹಾರ್ ಜೈಲಿನ ಶೌಚಾಲಯದಲ್ಲಿ ಕುಸಿದು ಬಿದ್ದಿದ್ದರು. ಈ ಹಿನ್ನೆಲೆ ಅವರನ್ನು ರಾಜಧಾನಿಯ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
Advertisement
Advertisement
ಜೈಲು ಆವರಣದ ಸೆಲ್ ಸಂಖ್ಯೆ 7 ರಲ್ಲಿ ಸತ್ಯೇಂದ್ರ ಜೈನ್ ಅವರನ್ನು ಇರಿಸಲಾಗಿತ್ತು. ಗುರುವಾರ ಮುಂಜಾನೆ ಸುಮಾರು 6 ಗಂಟೆ ವೇಳೆಗೆ ಅವರು ಶೌಚಾಲಯದಲ್ಲಿ ಕುಸಿದು ಬಿದ್ದಿರುವುದು ಕಂಡುಬಂದಿದೆ. ಕೂಡಲೆ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಸತ್ಯೇಂದ್ರ ಜೈನ್ ಬೆನ್ನು ಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ತಿಹಾರ್ ಜೈಲಿನ ಡಿಜಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮಂಗಳೂರಿನಲ್ಲಿ ಟೇಕಾಫ್‍ಗೆ ಸಿದ್ಧವಾಗಿದ್ದ ವಿಮಾನಕ್ಕೆ ಹಕ್ಕಿ ಡಿಕ್ಕಿ – ಸಮಯಪ್ರಜ್ಞೆ ಮೆರೆದ ಪೈಲೆಟ್
Advertisement
ಕಳೆದ ವರ್ಷ ಭ್ರಷ್ಟಾಚಾರ ಪ್ರಕರಣದಲ್ಲಿ ಜೈನ್ ಅವರನ್ನು ಬಂಧಿಸಲಾಗಿತ್ತು. ಜೈಲಿಗೊಳಗಾದ ಬಳಿಕ ಸತ್ಯೇಂದ್ರ ಜೈನ್ ಅವರು ಸುಮಾರು 35 ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ. ಇದರಿಂದ ತೀವ್ರ ಅನಾರೋಗ್ಯಕ್ಕೊಳಗಾಗುತ್ತಿದ್ದಾರೆ ಎಂದು ಅವರ ಪರ ವಕೀಲರು ತಿಳಿಸಿದ್ದರು.
Advertisement
ಜೈಲಿನಲ್ಲಿ ನನಗೆ ಒಂಟಿತನ ಕಾಡುತ್ತಿದೆ. ಹೀಗಾಗಿ ತಾನು ಖಿನ್ನತೆಗೊಳಗಾಗಿರುವುದಾಗಿ ಇತ್ತೀಚೆಗಷ್ಟೇ ಸತ್ಯೇಂದ್ರ ಜೈನ್ ಅವರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅವರು ಜೈಲಿನಲ್ಲಿರುವ ಮನೋವೈದ್ಯರನ್ನು ಕೂಡ ಭೇಟಿಯಾಗಿದ್ದರು. ಇದನ್ನೂ ಓದಿ: ಸಂಸತ್ ಭವನ ಲೋಕಾರ್ಪಣೆ ಕಾರ್ಯಕ್ರಮಕ್ಕೆ ವಿಪಕ್ಷಗಳ ಬಹಿಷ್ಕಾರ – ಭಾಗವಹಿಸುತ್ತೇವೆ ಎಂದ 2 ಪಕ್ಷಗಳು