– ಹಣ ಬಿಡುಗಡೆಗೆ ಕಾಣದ ಕೈಗಳು, ಮಧ್ಯವರ್ತಿಗಳ ಕಾಟ
– ನೀರಾವರಿ ಇಲಾಖೆಯಲ್ಲಿ ಬಲಾಢ್ಯರಿಗೆ 150 ಕೋಟಿ ಬಿಡುಗಡೆ
– ಸಣ್ಣ ಗುತ್ತಿಗೆದಾರರಿಗೆ 3 ವರ್ಷದಿಂದ ಹಣ ಬಿಡುಗಡೆ ಆಗಿಲ್ಲ
ಬೆಂಗಳೂರು: ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘ ಈಗ ಸಿಡಿದೆದ್ದಿದೆ. ಹಣ ಬಿಡುಗಡೆಗೆ ಕಾಣದ ಕೈಗಳು, ಮಧ್ಯವರ್ತಿಗಳ ಕಾಟ ಹೆಚ್ಚಾಗಿದೆ ಎಂದು ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ಸ್ ಅಸೋಸಿಯೇಷನ್ (Contractors’ Association) ಬಾಂಬ್ ಸಿಡಿಸಿದೆ.
ಸಣ್ಣ ಮತ್ತು ಮಧ್ಯಮ ವರ್ಗದ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಧ್ಯವರ್ತಿಗಳ ಕಾಟ ಕೊಡುತ್ತಿದ್ದಾರೆ. ಜೇಷ್ಠತೆ ಪಾಲಿಸದೇ ಸ್ಪೆಷಲ್ ಎಲ್‌ಓಸಿ ಸೃಷ್ಟಿ ಮಾಡಿ ಹಣ ಬಿಡುಗಡೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದ ಸಂಘ ಲೋಕೋಪಯೋಗಿ ಇಲಾಖೆ, ನಾಲ್ಕು ನೀರಾವರಿ ನಿಗಮ ಮತ್ತು ಸಣ್ಣ ನೀರಾವರಿ ಇಲಾಖೆಯಲ್ಲಿ ಕಾಣದ ಕೈಗಳ ಬಗ್ಗೆ ಚರ್ಚೆ ಮಾಡಿ ಸಣ್ಣ ಗುತ್ತಿಗೆದಾರರಿಗೆ ನ್ಯಾಯ ಒದಗಿಸುವಂತೆ ಪತ್ರ ಬರೆದಿದೆ. ಇದನ್ನೂ ಓದಿ: ದಾವಣಗೆರೆ | ಕೊಕ್ಕನೂರು ಆಂಜನೇಯ ಸ್ವಾಮಿಗೆ ದುಡ್ಡಿನ ಪಲ್ಲಕ್ಕಿ ಉತ್ಸವ – 12 ಲಕ್ಷ ರೂ. ನಗದಲ್ಲಿ ಅಲಂಕಾರ
- Advertisement3
- Advertisement
ಪಬ್ಲಿಕ್ ಟಿವಿ ಜೊತೆ ಸಂಘದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಲೋಕೋಪಯೋಗಿ ಇಲಾಖೆಯಲ್ಲಿ ಸತೀಶ್ ಜಾರಕಿಹೊಳಿ (Satish Jarkiholi) ಕುಟುಂಬಸ್ಥರು, ನೀರಾವರಿ ಇಲಾಖೆಯಲ್ಲಿ ಬೋಸರಾಜ್ (N Boseraju) ಮಗ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಜೊತೆ ಪಬ್ಲಿಕ್ ಟಿವಿ ಮಾತನಾಡಿದಾಗ ಅವರು ಹಲವು ವಿಚಾರಗಳನ್ನು ತಿಳಿಸಿದ್ದಾರೆ.
ಗುತ್ತಿಗೆದಾರರ ಸಂಘದ ಅಧ್ಯಕ್ಷ : ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರಿಗೆ ಪೇಮೆಂಟ್ ಸಿಗ್ತಿಲ್ಲ. ಎಲ್ಲಾ ಸ್ಪೆಷಲ್ ಎಲ್‌ಒಸಿ. ಸ್ಪೆಷಲ್ ಎಲ್‌ಒಸಿ.. ಜ್ಯೇಷ್ಠತೆ ಆಧಾರದ ಮೇಲೆ ಒಬ್ಬರೂ ಪೇಮೆಂಟ್ ಮಾಡ್ತಿಲ್ಲ. ಪಿಡಬ್ಲ್ಯೂಡಿಯಲ್ಲಿ ಯಾರೋ ಒಬ್ಬ ಕಾಣದ ಕೈ ಇಡೀ ಪಿಡಬ್ಲ್ಯೂಡಿಯನ್ನೇ ಕಂಟ್ರೋಲ್ ಮಾಡ್ತಿದೆ. ನಾಲ್ಕು ನಿಗಮಗಳಲ್ಲಿ ಎಲ್ಲಾ ದೊಡ್ಡ ದೊಡ್ಡವರಿಗೆ ಪೇಮೆಂಟ್ ಮಾಡ್ತಿದ್ದಾರೆ. 5-50 ಲಕ್ಷ ಇರೋರಿಗೆ ಪೇಮೆಂಟ್ ಮಾಡ್ತಿಲ್ಲ.
ಪ್ರತಿನಿಧಿ: ಯಾರು ಆ ಕಾಣದ ಕೈಗಳು?
ಗುತ್ತಿಗೆದಾರರ ಸಂಘದ ಅಧ್ಯಕ್ಷ : ಕಾಣದ ಕೈಗಳು ಸಂಬಂಧಿಕರು. ಎಲ್ಲರೂ ಒಬ್ಬೊಬ್ಬರು ಸಂಬಂಧಿಕರನ್ನು ಇಲಾಖೆ ನಡೆಸಿಬಿಟ್ಟರೆ, ಹೆಂಗಾಗುತ್ತೆ.
ಪ್ರತಿನಿಧಿ: ಯಾವ್ಯಾವ ಸಚಿವರು ಸಂಬಂಧಿಕರನ್ನು ಇಟ್ಟುಕೊಂಡಿದ್ದಾರೆ?
ಗುತ್ತಿಗೆದಾರರ ಸಂಘದ ಅಧ್ಯಕ್ಷ : ಪಿಡಬ್ಲ್ಯೂಡಿ ಸಚಿವರ ಸಂಬಂಧಿಕರು ಕಂಟ್ರೋಲ್ ಇಟ್ಟುಕೊಂಡಿದ್ದಾರೆ. ಎಲ್ಲಾ ಅಧಿಕಾರಿಗಳ ಮೇಲೆ ಅವರೇ ದರ್ಬಾರ್ ಮಾಡ್ತಿದ್ದಾರೆ. ಅಧಿಕಾರಿಗಳಿಗೆ ಕೇಳಿದ್ರೆ ನಮಗೆ ಗೊತ್ತಿಲ್ಲ ಅಂತಾರೆ. ಯಾರನ್ನು ಕೇಳಬೇಕು? ಇದನ್ನೂ ಓದಿ: 1 ಲಕ್ಷ ಪಾವತಿಸಿ ಶೂಟಿಂಗ್ | ಗೋಪಾಲಸ್ವಾಮಿ ಬೆಟ್ಟದ ಜಾಗ ಯಾರಿಗೆ ಸೇರಿದ್ದು? ಈಗ ಮತ್ತೊಂದು ವಿವಾದ
ಪ್ರತಿನಿಧಿ: ಅವರಿಗೇನು ಕಮೀಷನ್ ಕೊಡಬೇಕಾ?
ಗುತ್ತಿಗೆದಾರರ ಸಂಘದ ಅಧ್ಯಕ್ಷ : ಇಲ್ಲ ಹಂಗತಾ ಅಲ್ಲ. ಉದಾಹರಣೆಗೆ ಸೀನಿಯಾರಿಟಿ ಮೇಲೆ ಪೇಮೆಂಟ್ ಮಾಡಬೇಕು. ಆದ್ರೆ ಇವರು ಹಂಗಲ್ಲ, ಎಲ್ಲಾ ಎಲ್‌ಒಸಿ. ಸ್ಪೆಷಲ್ ಎಲ್‌ಒಸಿ ಯಾಕೆ ಇಂಟ್ರಡ್ಯೂಸ್ ಮಾಡಿದ್ರು. ಮೇಲೆ ಪೇಮೆಂಟ್ ಮಾಡ್ತಿದ್ದಾರೆ.
ಪ್ರತಿನಿಧಿ: ಸಂಬಂಧಿಕರು ಹೇಗೆ ಕಂಟ್ರೋಲ್ ಮಾಡ್ತಿದ್ದಾರೆ?
ಗುತ್ತಿಗೆದಾರರ ಸಂಘದ ಅಧ್ಯಕ್ಷ : ನಾವು ಸೆಕ್ರೆಟರಿ ಕೇಳಿದ್ರೆ ನಮಗೆ ಗೊತ್ತಿಲ್ಲ ಅಂತಾರೆ. ಒಎಸ್‌ಸಿ ಕೇಳಿದ್ರೆ ನಮಗೆ ಗೊತ್ತಿಲ್ಲ ಅಂತಾರೆ. ಆಮೇಲೆ ಐಎಫ್‌ಎ ಕೇಳಿದ್ರೆ ನಮಗೆ ಗೊತ್ತಿಲ್ಲ ಅಂತಾರೆ. ನಾವು ಯಾರನ್ನು ಕೇಳಬೇಕು.
ಪ್ರತಿನಿಧಿ: ನೀರಾವರಿ ಇಲಾಖೆಯಲ್ಲಿ ಏನಾಗ್ತಿದೆ?
ಗುತ್ತಿಗೆದಾರರ ಸಂಘದ ಅಧ್ಯಕ್ಷ : ಎಂಡಿಗಳು ಬರೀ ಬಲಾಡ್ಯರಿಗೆ ಕೊಡ್ತಿದ್ದಾರೆ. ದೊಡ್ದವರಿಗೆ 100 ಕೋಟಿ, 200 ಕೋಟಿ ಯಾರಿಗೆ ಕೊಡ್ತಾರೆ ಅನ್ನೋದೇ ಗೊತ್ತಾಗಲ್ಲ. 5 ರಿಂದ 50 ಕೋಟಿ ಬಾಕಿ ಇರುವವರು 60% ಇದ್ದಾರೆ. ಅವರಿಗೆ ಪೇಮೆಂಟ್ ಕೊಡಬೇಕು. 3 ವರ್ಷದಿಂದ ಒದ್ದಾಡುತ್ತಿದ್ದಾರೆ. ಎರಡು ಏನು? ಬೋಸರಾಜು ಮಗ ಹಸ್ತಕ್ಷೇಪ ಮಾಡ್ತಿದ್ದಾರೆ. ಅವರು ಯಾಕೆ ಬರಬೇಕು?
ಪ್ರತಿನಿಧಿ: ಸರ್ಕಾರದ ಇಲಾಖೆಗಳಲ್ಲಿ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡುವಲ್ಲಿ ಕುಟುಂಬಸ್ಥರ ಹಸ್ತಕ್ಷೇಪ ಇದ್ಯಾ?
ಗುತ್ತಿಗೆದಾರರ ಸಂಘದ ಅಧ್ಯಕ್ಷ : ಹೌದು ಡೆಫನೇಟ್ಲಿ. 100% ಇಷ್ಟ ಬಂದವರಿಗೆ ಹಣ ಬಿಡುಗಡೆ ಮಾಡ್ತಿದ್ದಾರೆ ? ಒಂದು ರೀತಿ ನೀತಿ ಇಲ್ಲ. ಹಳೇ ಕಾಲದ್ದು ಎಲ್‌ಒಸಿ ಬಿಡುಗಡೆ ವೇಳೆ, ಹಳೇ ಕಾಲದ್ದಕ್ಕಿಂದ ಹೆಚ್ಚು ಪೇಮೆಂಟ್ ಕಲೆಕ್ಟ್ ಮಾಡ್ತಿದ್ದಾರೆ. ಯಾಕೆ? ಹಿಂದಿನ ಸರ್ಕಾರಕ್ಕಿಂತ ಹೆಚ್ಚು ಪೇಮೆಂಟ್ ಕಲೆಕ್ಟ್ ಮಾಡ್ತಿದ್ದಾರೆ.
ಪ್ರತಿನಿಧಿ: ಎಷ್ಟು ಪೇಮೆಂಟ್ ಕಲೆಕ್ಟ್ ಮಾಡ್ತಾರೆ..?
ಗುತ್ತಿಗೆದಾರರ ಸಂಘದ ಅಧ್ಯಕ್ಷ : ಅದನ್ನ ಆಮೇಲೆ ಹೇಳ್ತಿವಿ.. ಈಗ ನಾವು ಎಲ್ಲಾ ಸರಿ ಆಗಬೇಕು ಅನ್ನೋದಷ್ಟೆ ನಮ್ಮ ಉದ್ದೇಶ. ಜಟಿಲ ಆಗಬಾರದು. ಮುಂದೆ ಸರಿಯಾಗದಿದ್ದರೆ, ಎಲ್ಲಾ ಬಹಿರಂಗವಾಗಿ ಹೇಳ್ತಿವಿ.