ಕಾರವಾರ: ಬಿಜೆಪಿಯವರು ಹಿಂದುತ್ವ ಎನ್ನುತ್ತಾರೆ, ನಮ್ಮ ಮನೆಯಲ್ಲಿ ಅಲ್ಲಾ ಮತ್ತು ಏಸು ಫೋಟೋ ಇಟ್ಟಿದ್ದೇವೆಯೇ? ನಮಗೂ ಹಿಂದುತ್ವ ಗೊತ್ತಿದೆ ಎಂದು ಮಾಜಿ ಶಾಸಕ ಸತೀಶ್ ಸೈಲ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದವರು, ಬಿಜೆಪಿಯವರು ಹಿಂದುತ್ವ ಬಳಸಿ ನಮ್ಮನ್ನು ಬೇರೆಕಡೆಗೆ ಒಯ್ಯುತ್ತಿದ್ದಾರೆ. ನಾವು ನಮ್ಮ ಮನೆಯಲ್ಲಿ ಗಣಪತಿಯನ್ನು ಪೂಜಿಸುತ್ತಿದ್ದೇವೆ, ಬೇರೆ ದೇವರನ್ನಲ್ಲ ಎಂದು ಬಿಜೆಪಿಯವರು ಪರಿಷತ್ ಚುನಾವಣೆಯಲ್ಲಿ ಹಿಂದುತ್ವದ ಅಡಿ ಮತ ಸೆಳೆಯುತ್ತಿರುವ ಕುರಿತು ಆಕ್ರೋಶವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಭವಿಷ್ಯದಲ್ಲಿ ಮುರುಗೇಶ ನಿರಾಣಿ ಸಿಎಂ ಆಗಬಹುದು: ಹಾಲಪ್ಪ ಆಚಾರ್
Advertisement
ವಿಧಾನ ಪರಿಷತ್ ಚುನಾವಣಾ ಪ್ರಚಾರದ ಅಂಗವಾಗಿ ಇಂದು ಅಸ್ನೋಟಿ,ಮೂಡಗೇರಿ, ಹಣಕೋಣ,ಘಾಡಸಾಯಿ,ತೋಡುರು ಹಾಗೂ ಉಳಗಾ ಪಂಚಾಯತ್ ಸದಸ್ಯರ ಸಭೆ ನಡೆಸಿ ಪಕ್ಷದ ಅಭ್ಯರ್ಥಿ ಶ್ರೀ @BhimannaNaik1 ಅವರ ಪರವಾಗಿ ಮತಯಾಚಿಸಲಾಯಿತು.ಈ ಸಂದರ್ಭದಲ್ಲಿ ಪಕ್ಷದ ಪ್ರಮುಖ ಮುಖಂಡರು,ಬ್ಲಾಕ್ ಅಧ್ಯಕ್ಷರು, ಆಯಾ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು. @INCKarnataka pic.twitter.com/bvoKzHhzZl
— SATISH K. SAIL / ಸತೀಶ್ ಕೆ. ಸೈಲ್ (@Satish_Sail) November 30, 2021
Advertisement
ಹಿಂದೆ ಪರೇಶ್ ಮೇಸ್ತಾ ಪ್ರಕರಣವನ್ನು ಬಳಸಿಕೊಂಡರು, ಈಗ ಪರೇಶ್ ಮೇಸ್ತಾ ತಂದೆ ಕಾಣೆಯಾಗಿದ್ದಾರೆ. ಅವರು ನಿಜವಾದ ಹಿಂದೂ, ಅಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಆರ್.ವಿ ದೇಶಪಾಂಡೆಯವರು ಪರೇಶ್ ಮೇಸ್ತಾ ತಂದೆಗೆ ಸಹಾಯಾರ್ಥ ಹಣ ನೀಡಿದ್ದರು. ಪಡೆದ ಹಣವನ್ನು ಪರೇಶ್ ಮೇಸ್ತಾ ತಂದೆ ತಿರಸ್ಕರಿಸಿದ್ದರು. ಆದರೆ ಕೊಟ್ಟ ಹಣ ವಾಪಸ್ ಬರಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜಕೀಯದಲ್ಲಿ ಇಂತದೆಲ್ಲಾ ಇದೆ ಎಂದು ಗೊತ್ತಾಗಿದ್ದರೆ ದೇವರಾಣೆ ರಾಜಕೀಯಕ್ಕೆ ಬರುತ್ತಿರಲಿಲ್ಲ: ಕೆಜಿಎಫ್ ಬಾಬು