ಬೆಳಗಾವಿ: ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ, ಒಂದೇ ಮತ, ಒಂದೇ ಅಭ್ಯರ್ಥಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಪರಿಷತ್ ಚುನಾವಣೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿ ಚನ್ನರಾಜ್ ಹಟ್ಟಿಹೊಳಿ ನಾಮಪತ್ರ ಸಲ್ಲಿಸುತ್ತಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಅರ್ಧದಷ್ಟು ಪ್ರಚಾರ ಕಾರ್ಯ ಮಾಡಿದ್ದೇವೆ. ಬಿಜೆಪಿಯಿಂದ ಇಬ್ಬರು ಸ್ಪರ್ಧೆ ಮಾಡುತ್ತಿದ್ದಾರೆ. ಅವರಿಗೆ ಚಾಲೆಂಜ್ ಇರೋದು. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ, ಒಂದೇ ಮತ, ಒಂದೇ ಅಭ್ಯರ್ಥಿ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಪ್ರಾಣವನ್ನೇ ಪಣಕ್ಕಿಟ್ಟು ಅರ್ಚಕನನ್ನು ರಕ್ಷಿಸಿದ ಟ್ರಾಫಿಕ್ ಪೊಲೀಸ್ – ವೀಡಿಯೋ ವೈರಲ್
Advertisement
Advertisement
ಪಕ್ಷೇತರ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು, ಚುನಾವಣೆಯನ್ನು ಪಕ್ಷದ ಮೇಲೆ ಮಾಡುತ್ತಿದ್ದೇವೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಚುನಾವಣೆಯಲ್ಲಿ ಗೆಲ್ಲಲೇಬೇಕು. ಲೋಕಸಭಾ ಉಪಚುನಾವಣೆ ನನ್ನ ವಿರುದ್ಧ ಹಣ ಹಂಚಿ ನನ್ನನ್ನು ಸೋಲಿಸಿದ್ದಾರೆ. ಲಖನ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ದುಡ್ಡು ಕೊಟ್ಟು ನನ್ನ ಸೋಲಿಸಿದ್ದಾರೆ. ಆ ನೋವು ನಮಗೆ ಹಾಗೂ ನಮ್ಮ ಕಾರ್ಯಕರ್ತರಿಗೂ ಇದೆ. ಬಹುಶಃ ಲಖನ್ ಜಾರಕಿಹೊಳಿ ಚುನಾವಣೆ ನಿಲ್ತಾರೋ ಇಲ್ವೋ ಅನುಮಾನ. ಪಕ್ಷದ ವರಿಷ್ಠರು ಒಳ್ಳೆಯ ಅವಕಾಶ ಕೊಡ್ತಿವಿ ಅಂದ್ರೆ ವಾಪಸ್ ಪಡಿಯುವ ಅವಕಾಶ ಇದೆ. ಲಖನ್ ಜಾರಕಿಹೊಳಿ ಜೊತೆಗೆ ಮಾತನಾಡುವ ಪ್ರಶ್ನೆ ಇಲ್ಲ ಎಂದು ಕಿಡಿಕಾರಿದರು.
Advertisement
Advertisement
ಇದು ಪಕ್ಷ ಆಧಾರದ ಮೇಲೆ ಚುನಾವಣೆ. ಕುಟುಂಬ ಆಧಾರದ ಮೇಲೆ ಚುನಾವಣೆ ಅಲ್ಲ. ಜಾರಕಿಹೊಳಿ ಕುಟುಂಬ, ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಫೈಟ್ ಅಲ್ಲ. ನಾವು ಜಾರಕಿಹೊಳಿ ಈ ಕಡೆ ಇದ್ದೇವೆ. ಸಹೋದರರ ಸವಾಲ್, ರಾಜಕೀಯ ಸವಾಲು ಇದ್ದೇ ಇರುತ್ತೆ. ರಮೇಶ್ ಜಾರಕಿಹೊಳಿ ಎಂದಿಗೂ ಸೀರಿಯಸ್ ಆಗೇ ಇರುತ್ತಾರೆ. ಅವರ ತಂಡ ಇರೋದು ನಾವು, ನೀವು ಎಂದು ನೋಡಿಲ್ಲ ಎಂದು ಟೀಕಿಸಿದರು. ಇದನ್ನೂ ಓದಿ: ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಹೈಟೆಕ್ ವಂಚನೆ