ಚಿಕ್ಕೋಡಿ: ಚುನಾವಣೆ ಬಂತು ಅಂದರೆ ಮೋದಿ ಎರಡು ಬಾಂಬ್ ಇಟ್ಟುಕೊಂಡಿರುತ್ತಾರೆ. ಆ ಬಾಂಬ್‍ಗಳನ್ನ ಎಲ್ಲಿ ಹಾರಿಸುತ್ತಾರೆ ಗೊತ್ತಿಲ್ಲ. ಬಳಿಕ ಪಾಕಿಸ್ತಾನದ ಹೆಸರು ಹೇಳಿ ಬಿಡುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬೆಳಗಾವಿಯ ಜಿಲ್ಲೆಯ ಹಾರೂಗೇರಿ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡ ಮಹೇಶ ತಮ್ಮಣ್ಣವರ ಸೈಕಲ್ ಜಾಥಾ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮೋದಿ ಗೆಲ್ಲಲು ಏನು ಬೇಕಾದರೂ ಮಾಡಲು ತಯಾರಿ ಇರುತ್ತಾರೆ. ಆ ನಂತರ ಪಾಕಿಸ್ತಾನದ ಹೆಸರು ಹೇಳಿ, ದೇಶಕ್ಕೆ ಆಪತ್ತಿದೆ ಎಂದು ಬಿಡುತ್ತಾರೆ. ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರು ಗಟ್ಟಿಯಾಗಿರಬೇಕು. ಎಂಥ ಶಕ್ತಿ ಬಂದರೂ ಅದನ್ನು ಕಾರ್ಯಕರ್ತರು ನಿಭಾಯಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
Advertisement
Advertisement
ಸಿದ್ದರಾಮಯ್ಯ ಸಿಎಂ ಆಗುವ ಇಂಗಿತ ವಿಚಾರಕ್ಕೆ ಟಾಂಗ್ ನೀಡಿದ ಅವರು, ಚುನಾವಣೆ ಮುಗಿದ ಮೇಲೆ ಮುಖ್ಯಮಂತ್ರಿಗಳ ಆಯ್ಕೆ ಆಗುತ್ತದೆ. ಇನ್ನೂ ಸಮಯ ಇದೆ ಎಂದ ಅವರು, ಸಾಕಷ್ಟು ಬಾರಿ ಹೇಳಿದ್ದೇವೆ. ನಮ್ಮಲ್ಲಿ ಭಿನ್ನಮತವಿಲ್ಲ. ನಾವೆಲ್ಲ ಒಗ್ಗಟ್ಟಾಗಿ ಇದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಡ್ರೋನ್‌ಗೆ ಗುಂಡು -ಸೇನೆಯ ದಾಳಿಗೆ ಮರಳಿ ಪಾಕಿಗೆ ಓಡಿ ಹೋಯ್ತು
Advertisement
ಸಿದ್ದರಾಮೋತ್ಸವಕ್ಕೆ ಬಿಜೆಪಿ ಪರ್ಯಾಯ ಸಮಾವೇಶ ವಿಚಾರವಾಗಿ ಮಾತನಾಡಿ, ಬಿಜೆಪಿ ಅವರು ಸಮಾವೇಶ ಮಾಡಲಿ ಅವರಿಗೆ ಬೇಡ ಅಂದವರು ಯಾರು. ಅವರ ಕಾರ್ಯಕ್ರಮ ಬೇರೆಯಾಗಿದೆ ನಮ್ಮ ಕಾರ್ಯಕ್ರಮ ಬೇರೆಯಾಗಿದೆ. ಕಾಂಗ್ರೆಸ್ಸಿನವರು ನಾವು ಒಗ್ಗಟ್ಟಾಗಿ ಗಟ್ಟಿಯಾಗಿದ್ದೀವಿ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಮನೆ ಮುಂದೆ ನಿಲ್ಲಿಸಿದ್ದ ಶಾಸಕರ ಕಾರನ್ನೇ ಎಗರಿಸಿ ಖತರ್ನಾಕ್ ಕಳ್ಳರು