ಬೆಳಗಾವಿ: ಕ್ಯಾಬಿನೆಟ್ ಮೇಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೊದಲು ನಿಯಂತ್ರಣ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಎಂದರೆ ಎಲ್ಲವೂ ಅವರ ನಿಯಂತ್ರಣದಲ್ಲಿ ಇರಬೇಕು. ಆದರೆ ಬೊಮ್ಮಾಯಿ ಸರ್ಕಾರದ ಮಂತ್ರಿಗಳು ಏನೇನೋ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಿಎಂ ಮಾತನ್ನು ಮೀರಿ ಯಾರೂ ಹೇಳಿಕೆ ಕೊಡಬಾರದು ಎಂದು ಸಲಹೆ ನೀಡಿದರು.
ಜಾರಕಿಹೊಳಿ ಬ್ರದರ್ಸ್ ವಿರುದ್ಧ ಸಚಿವ ಉಮೇಶ್ ಕತ್ತಿ ಮತ್ತು ಅವರ ತಂಡ ಸಿಎಂಗೆ ದೂರು ವಿಚಾರವಾಗಿ ಮಾತನಾಡಿ, ಅವರ ಪಕ್ಷ ಇದೆ. ಎರಡು ಗುಂಪು ಇದೆ. ಆ ವಿಷಯದ ಕುರಿತಾಗಿ ಸಿಎಂ ಅವರು ಉತ್ತರ ಹೇಳಬೇಕು. ಅದರ ಬಗ್ಗೆ ನಾವು ಹೇಳೋಕೆ ಆಗಲ್ಲ. ನಾನು ಮಾಧ್ಯಮಗಳಲ್ಲಿ ಗಮನಿಸಿದೆ ಅದು ಅವರ ಪಕ್ಷಕ್ಕೆ ಸಂಬಂಧಿಸಿದ್ದು ಎಂದು ತಿಳಿಸಿದ ಅವರು, ರಮೇಶ್ ಜಾರಕಿಹೊಳಿ ಕಾಂಗ್ರೆಸ್‍ಗೆ ಬರುವುದು ಜಗತ್ತಿನ ಎಂಟನೇ ಅದ್ಭುತ. ಅವರು ಅಲ್ಲೇ ಇದ್ದಾರೆ ಅಲ್ಲೇ ಇರಲಿ ಎಂದು ವ್ಯಂಗ್ಯವಾಡಿದರು.
ಇದೇ ವೇಳೆ ಕತ್ತಿ ಸಹೋದರರು ಕಾಂಗ್ರೆಸ್‍ಗೆ ಬರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ರಮೇಶ್ ಕತ್ತಿ, ಉಮೇಶ್ ಕತ್ತಿ ಅವರೇ ಇದಕ್ಕೆ ಉತ್ತರಿಸಬೇಕು. ಈ ವರೆಗೂ ನಮ್ಮ ಗಮನಕ್ಕೆ ಬಂದಿಲ್ಲ ಹಾಗೂ ಯಾರೂ ನಮ್ಮನ್ನು ಕೇಳಿಲ್ಲ ಎಂದ ಅವರು, ಇನ್ನೂ ಹೊಗೆ ಏನೂ ಆಡಿಲ್ಲ. ಇದಕ್ಕೆ ಒಂದು ವರ್ಷ ಕಾಯಬೇಕು. ಆಗ ಡೋರ್ ಓಪನ್ ಇರುತ್ತದೆ. ಈಗ ಡೋರ್ ಕ್ಲೋಸ್ ಇದೆ. ಆ ಸಂದರ್ಭದಲ್ಲಿ ಫ್ಲೈಟ್, ಟ್ರೇನ್‍ನಲ್ಲಿ ಸೀಟ್ ಬ್ಲಾಕ್ ಮಾಡಿದ ಹಾಗೇ ಬ್ಲಾಕ್ ಮಾಡೋದು ಅಷ್ಟೇ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಸೋಮವಾರದಿಂದ ಶಾಲೆ ಆರಂಭ: ಬಿ.ಸಿ ನಾಗೇಶ್
ಪಂಚರಾಜ್ಯ ಚುನಾವಣೆ ಅದರಲ್ಲೂ ಯುಪಿ ಚುನಾವಣೆ ಇಡೀ ದೇಶದ ಮೇಲೆ ಎಫೆಕ್ಟ್ ಆಗುತ್ತದೆ ಎಂದ ಅವರು, ಪಕ್ಷಾಂತರವಾಗುವುದಕ್ಕೆ ಇನ್ನು ಒಂದು ವರ್ಷ ಕಾಯಬೇಕು. ಈ ಬಜೆಟ್ ಅಲ್ಲ ಮುಂದಿನ ಬಜೆಟ್‍ಗೆ ಪಕ್ಷಾಂತರ ಪರ್ವ ಶುರು ಆಗುತ್ತದೆ. ಮುಂದಿನ ಫೆಬ್ರವರಿ 1 ರಂದು ಹೇಳುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ನೈಟ್ ಕರ್ಫ್ಯೂ ರದ್ದು – ಸಿನಿಮಾಗೆ ಶೇ.50 ರಷ್ಟು ನಿರ್ಬಂಧ ಮುಂದುವರಿಕೆ
ಬಿಜೆಪಿ ನಾಯಕರು ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್‍ಗೆ ಯಾರೂ ಸೇರುತ್ತಾರೆ ಎನ್ನುವುದು ಗೊತ್ತಿಲ್ಲ ಎಂದ ಅವರು, ಮುಂದಿನ ಮಾರ್ಚ್‍ನಲ್ಲಿ ಬಜೆಟ್ ಮೇಲೆ ಆ ಪರ್ವ ಶುರುವಾಗುತ್ತದೆ. ಬೆಳಗಾವಿ ಜಿಲ್ಲೆಯಲ್ಲಿ 10ರಿಂದ 12 ಕ್ಷೇತ್ರ ಗೆಲ್ಲುವ ಟಾರ್ಗೆಟ್ ಮಾಡಿಕೊಂಡಿದ್ದೇವೆ. ಬೆಳಗಾವಿಯಲ್ಲಿ 10 ರಿಂದ 12 ಕ್ಷೇತ್ರ ಗೆದ್ದರೆ ರಾಜ್ಯದಲ್ಲಿ ಸರ್ಕಾರ ರಚಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.