ಬೆಂಗಳೂರು: ಸಚಿವ ರಾಜಣ್ಣ ಪುತ್ರ ರಾಜೇಂದ್ರ (Rajendra Rajanna) ಹತ್ಯೆಗೆ ಸುಪಾರಿ ಕೊಟ್ಟ ಪ್ರಭಾವಿ ನಾಯಕ ಯಾರು ಎಂದು ನೀವೇ ಒಂದು ಅಭಿಯಾನ ಶುರು ಮಾಡಿ. ನಿಮಗೆ ಸುಳಿವು ಸಿಗಬಹುದು, ನಿಮಗೆ ಸಿಕ್ಕೇ ಸಿಕ್ತಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) `ಪಬ್ಲಿಕ್ ಟಿವಿ’ಗೆ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಅವರು ಸಚಿವ ಮಹದೇವಪ್ಪ ಅವರನ್ನು ಭೇಟಿಯಾಗಿ, ಬಳಿಕ `ಪಬ್ಲಿಕ್ ಟಿವಿ’ ಮಾತನಾಡಿದರು. ಈ ವೇಳೆ ರಾಜೇಂದ್ರ ರಾಜಣ್ಣ ಹತ್ಯೆಗೆ ಸಂಚು ಹಾಗೂ ಹನಿಟ್ರ್ಯಾಪ್ ಪ್ರಕರಣ ಸಂಬಂಧ ದೂರು ಕೊಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದರು. ರಾಜೇಂದ್ರ ಕ್ಯಾರಸಂದ್ರದಲ್ಲಿ ದೂರು ಕೊಟ್ಟಿದ್ದಾರೆ. ಪೊಲೀಸರೆ ತನಿಖೆ ಮಾಡಿ ಆ ನಾಯಕ ಯಾರು ಅಂತ ಹೇಳಬೇಕು. ಯಾರ ಮೇಲೂ ಆರೋಪ ಮಾಡೋಕೆ ನಮಗೆ ಅಧಿಕಾರ ಇಲ್ಲ. ಕಾದು ನೋಡೋಣ ಎಂದಿದ್ದಾರೆ. ಇದನ್ನೂ ಓದಿ: ನನ್ನ ಕೊಲೆಗೆ 70 ಲಕ್ಷ ಸುಪಾರಿ ಕೊಡಲಾಗಿದೆ – ತುಮಕೂರು ಎಸ್ಪಿಗೆ ಸಚಿವ ರಾಜಣ್ಣ ಪುತ್ರ ದೂರು
ಮಹಾನಾಯಕರು ದೇಶದಲ್ಲಿ ತುಂಬಾ ಜನ ಇದ್ದಾರೆ. ಇಂತಹ ಘಟನೆಗಳು ಸಹ ಅನೇಕ ಇವೆ. ಬೇರೆ ರಾಜ್ಯಗಳಲ್ಲಿ ಇಂತಹ ಘಟನೆ ಆಗಿವೆ. ಇವರೆ, ಅವರೆ ಹೀಗೆ ಮಾಡಿದ್ದಾರೆ ಎಂದು ಹೇಳೋಕೆ ಅಗಲ್ಲ. ಪೊಲೀಸರು ಏನು ತನಿಖೆ ಮಡ್ತಾರೆ ಮಾಡಲಿ ಕಾದು ನೋಡೋಣ ಎಂದಿದ್ದಾರೆ.
ನಮ್ಮದು ಮಹದೇವಪ್ಪ ಅವರದ್ದು 30 ವರ್ಷಗಳ ಸ್ನೇಹ, ಭೇಟಿಗೆ ವಿಶೇಷ ಕಾರಣ ಏನಿಲ್ಲ. ದಹೆಲಿ ಭೇಟಿ ಬಗ್ಗೆ ನಿನ್ನೆ ಸವಿಸ್ತಾರವಾಗಿ ಹೇಳಿದ್ದೇನೆ. ಅದರಲ್ಲಿ ರಾಜಕೀಯ ಏನು ಇಲ್ಲ ಅಭಿವೃದ್ಧಿ ದೃಷ್ಟಿಯಿಂದ ನಾಲ್ವರು ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದೇನೆ. ಕುಮಾರಸ್ವಾಮಿ ಅವರನ್ನ ಮಂತ್ರಿ ಅಂತ ಭೇಟಿ ಆಗಿದ್ದೇನೆ ಅವರನ್ನ ಜೆಡಿಎಸ್ ವರಿಷ್ಠರು ಅಧ್ಯಕ್ಷರು ಅಂತ ಭೇಟಿ ಆಗಿಲ್ಲ ಎಂದು ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬೇಡಿಕೆ ಏನೂ ಇಟ್ಟಿಲ್ಲ. ಒಂದು ಸಾರಿ ಹೇಳಿದ್ದೇನೆ ಅದನ್ನ ಪದೇ ಪದೇ ಹೇಳುವ ಅವಶ್ಯಕತೆ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಹನಿಟ್ರ್ಯಾಪ್ ಕೇಸ್ – ಪರಮೇಶ್ವರ್ಗೆ ದೂರು ನೀಡದೇ ಮನವಿ ಕೊಟ್ಟ ರಾಜಣ್ಣ