-ಮಹಾರಾಷ್ಟ್ರ ರಾಜಕೀಯವನ್ನು ಕರ್ನಾಟಕಕ್ಕೆ ಹೋಲಿಸಲು ಸಾಧ್ಯವಿಲ್ಲ
ಬೆಂಗಳೂರು: ಏಕನಾಥ್ ಶಿಂಧೆ (Eknath Shinde) ಮಾತಾಡಲು ಸ್ವತಂತ್ರರು, ಅವರು ಮಾತಾಡ್ತಾರೆ, ಮಾತಾಡಲಿ. ನಮ್ಮ ಸರ್ಕಾರ ಇನ್ನೂ ನಾಲ್ಕು ವರ್ಷ ಇರಲಿದೆ. ಸರ್ಕಾರ ಪತನದ ಪ್ರಶ್ನೆಯೇ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.
Advertisement
ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಕರ್ನಾಟಕದಲ್ಲಿ ಸರ್ಕಾರ ಬೀಳಿಸಲು ತೆರೆಮರೆಯಲ್ಲಿ ಕಸರತ್ತು ನಡೆಯುತ್ತಿದೆ ಎಂಬ ಮಹಾರಾಷ್ಟ್ರದ ಸಿಎಂ ಏಕನಾಥ್ ಶಿಂಧೆಯವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಪಕ್ಷದೊಳಗೆ ಅಸಮಾಧಾನ ಇರೋದು ನಿಜ. ಸರ್ಕಾರ ಇರುವವರೆಗೂ ಇಂತಹ ಸಮಸ್ಯೆಗಳು ಇರಲಿದೆ. ಆಗಾಗ ಇದಕ್ಕೆಲ್ಲ ರಿಪೇರಿ ಮಾಡುತ್ತೇವೆ. ಇದೇ ವಿಚಾರ ಇಟ್ಟುಕೊಂಡು ಸರ್ಕಾರ ಬೀಳಲಿದೆ ಎನುವುದು ಸರಿಯಲ್ಲ. ಪಕ್ಷದೊಳಗಿನ ಸಮಸ್ಯೆಯನ್ನು ಪಕ್ಷದ ವರಿಷ್ಠರು ಸರಿಪಡಿಸುತ್ತಾರೆ ಎಂದರು. ಇದನ್ನೂ ಓದಿ: Exclusive: ಕರ್ನಾಟಕದಲ್ಲಿ ‘ಆಪರೇಷನ್ ನಾಥ’ ಸುಳಿವು ಕೊಟ್ಟ ಏಕನಾಥ ಶಿಂಧೆ!
Advertisement
5 ಮೀಟರ್, 7 ಮೀಟರ್ ಜಂಪ್ ಮಾಡಬಹುದು, 15 ಮೀಟರ್ ಜಂಪ್ ಮಾಡುವುದು ಕಷ್ಟದ ಕೆಲಸ. ಈ ಗ್ಯಾಪ್ ಬಹಳ ಇದೆ, ನಮ್ಮ ಸರ್ಕಾರ ಬೀಳಲ್ಲ. ನಮಗೆ 5 ವರ್ಷ ವಿಧಾನಸಭೆಗೆ ಜನಾದೇಶ ಇದೆ. ನಮ್ಮದೇನಿದ್ರೂ ಪಾರ್ಟಿ ಒಳಗಿನ ಅಸಮಾಧಾನ, ಪಾರ್ಟಿ ಹೊರಗೆ ನಮ್ಮ ಘರ್ಷಣೆಯಲ್ಲ. ಅವರ ಪಕ್ಷದಲ್ಲೂ ಭಿನ್ನಮತ ಇಲ್ವಾ? ಬಿಜೆಪಿಯವರು ಹೇಗೆಲ್ಲ ಮಾತಾಡ್ತಿದ್ದಾರೆ ಗೊತ್ತಿಲ್ವಾ? ವರ್ಗಾವಣೆ, ಅಭಿವೃದ್ಧಿ ವಿಚಾರದಲ್ಲಿ ಸಮಸ್ಯೆ ಇರಬಹುದು, ಅದನ್ನೇ ಇಟ್ಕೊಂಡು ಸರ್ಕಾರ ಬೀಳುತ್ತೆ ಎನ್ನುವುದು ಸುಳ್ಳು. ಮಹಾರಾಷ್ಟ್ರ ರಾಜಕೀಯ ಬೇರೆ, ಅದನ್ನು ಕರ್ನಾಟಕಕ್ಕೆ ಹೋಲಿಕೆ ಮಾಡಲು ಬರುವುದಿಲ್ಲ ಎಂದು ಅವರು ತಿರುಗೇಟು ಕೊಟ್ಟಿದ್ದಾರೆ.
Advertisement
Advertisement
ಸಂಪುಟ ಪುನರ್ ರಚನೆ ವಿಚಾರವಾಗಿ, ಇದನ್ನು ಸಿಎಂ ಅವರನ್ನೇ ಕೇಳಬೇಕು. ಲೋಕಸಭೆಗೆ ಯಾವ ಟಾಸ್ಕ್ ಹಾಗೂ ಕಂಡೀಷನ್ ಕೊಟ್ಟಿರಲಿಲ್ಲ. ಗೆಲ್ಲಿಸಿಕೊಂಡು ಬರಲೇಬೇಕೆಂದು ಹೇಳಿರಲಿಲ್ಲ. ಇಂಗ್ಲೇಂಡ್‍ನಂತೆ ನಮ್ಮಲ್ಲಿ ಆ ರೀತಿ ಪರಿಸ್ಥಿತಿ ಇಲ್ಲ ಎಂದರು.
ಇದೇ ವೇಳೆ ಸಮುದಾಯಕ್ಕೊಂದು ಡಿಸಿಎಂಗಳ ವಿಚಾರವಾಗಿ, ಡಿಸಿಎಂ ಸ್ಥಾನ ಕೊಡೋದು ಬಿಡೋದು ಹೈಕಮಾಂಡ್‍ಗೆ ಸೇರಿದ್ದು. ನಾವು ಅದರ ಬಗ್ಗೆ ಹೇಳಿದ್ದೆವು. ಪಕ್ಷ ಈ ಬಗ್ಗೆ ನಿರ್ಧರಿಸಬೇಕು ಎಂದರು. ಇದನ್ನೂ ಓದಿ: ದಕ್ಷಿಣ ಭಾರತದಲ್ಲಿ ಬಿಜೆಪಿಗೆ ದೊಡ್ಡ ಗೆಲುವು ಸಿಗಲಿದೆ – Mission South ಬಗ್ಗೆ ಅಮಿತ್ ಶಾ ಹೇಳಿದ್ದೇನು?