ಬೆಳಗಾವಿ: ಲಾಲ್ ಕೃಷ್ಣ ಅಡ್ವಾಣಿ (LK Advani) ಅವರು ಭಾರತ ರತ್ನ (Bharat Ratna) ಗೌರವಕ್ಕೆ ಭಾಜನರಾಗಿರುವದಕ್ಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಸಂತಸ ವ್ಯಕ್ತಪಡಿಸಿದ್ದಾರೆ.
ಹುಕ್ಕೇರಿ ತಾಲೂಕಿನ ಹೊಸೂರು ಗ್ರಾಮದಲ್ಲಿ ಪಬ್ಲಿಕ್ ಟಿವಿಗೆ ಹೇಳಿಕೆ ನೀಡಿದ ಅವರು ಅಡ್ವಾಣಿ ಅವರಿಗೆ ಭಾರತ ರತ್ನ ನೀಡಿದರೆ ಒಳ್ಳೆಯದು. ಬಹಳ ದಿನಗಳ ಹಿಂದೆಯೇ ಅವರಿಗೆ ಭಾರತ ರತ್ನ ಕೊಡಬೇಕಿತ್ತು. ಭಾರತ ರತ್ನಕ್ಕೆ ಅವರು ಅರ್ಹರಿದ್ದಾರೆ. ಅವರೊಬ್ಬರು ಒಳ್ಳೆಯ ರಾಜಕಾರಣಿ ಎಂದು ಅಡ್ವಾಣಿ ಅವರನ್ನು ಹಾಡಿ ಹೊಗಳಿದರು. ಇದನ್ನೂ ಓದಿ: ಎಲ್‌ಕೆ ಅಡ್ವಾಣಿಗೆ ಭಾರತ ರತ್ನ : ನರೇಂದ್ರ ಮೋದಿ ಘೋಷಣೆ
Advertisement
Advertisement
ಕನಕ ಪೀಠದ ಸ್ವಾಮೀಜಿಗಳಿಗೆ ದೇವಸ್ಥಾನ (Temple) ಗರ್ಭಗುಡಿ ಪ್ರವೇಶಕ್ಕೆ ನಿರ್ಬಂಧ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಈ ದೇಶದಲ್ಲಿ ಜಾತಿ ವ್ಯವಸ್ಥೆ ನಡೆಯುತ್ತಿದೆ. ಜನ ಬದಲಾವಣೆ ಆಗಬೇಕು ಸಮಾಜ ಬದಲಾವಣೆ ಆಗಬೇಕು.ಇದು ಹೊಸದೇನಲ್ಲ ಬಹಳ ಕಡೆ ಆಗಿದೆ. ಸಮಾನತೆ ಬಂದು 70 ವರ್ಷ ಆಯಿತು, ಈ ಬಗ್ಗೆ ಹೆಚ್ಚು ಗಮನ ಕೊಡಬೇಕು.ಜಾತಿ ವ್ಯವಸ್ಥೆಯಿಂದ ಬಿಟ್ಟು ಜನ,ಸಮಾಜ, ಧರ್ಮಗಳು ಹೊರಗೆ ಬರಬೇಕು ಇನ್ನೂ ಹಳೆ ಪದ್ದತಿಯಲ್ಲಿದ್ದು ಹೊಸದರಲ್ಲಿ ಬರಬೇಕು ಎಂದರು. ಇದನ್ನೂ ಓದಿ: ನಾನು ಬದುಕಿದ್ದೇನೆ : ವಿಡಿಯೋ ಮಾಡಿ ಶಾಕ್ ಕೊಟ್ಟ ಪೂನಂ
Advertisement
ಲೋಕಸಭೆ ಚುನಾವಣೆ (Lok Sabha Election) ಟಿಕೆಟ್ ವಿಚಾರದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸತೀಶ ಜಾರಕಿಹೊಳಿ ನಡುವೆ ಶೀತಲ ಸಮರದ ವಿಚಾರದ ಬಗ್ಗೆ ಹೇಳಿಕೆ ಕೊಡುವ ಅವಶ್ಯಕತೆಯಿಲ್ಲ. ನಾನು ಹಾಗೂ ಲಕ್ಷ್ಮೀ ಹೆಬ್ಬಾಳಕರ್ ಇಬ್ಬರೂ ಚೆನ್ನಾಗಿದ್ದೇವೆ. ಲೋಕಸಭೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗಳಿಸದಿದ್ದರೆ ಗ್ಯಾರಂಟಿ ಯೋಜನೆಗಳ ಸ್ಥಗಿತಗೊಳಿಸುವ ಬಗ್ಗೆ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕು. ಆ ವಿಷಯ ಎಲ್ಲಿಯೂ ಚರ್ಚೆ ಆಗಿಲ್ಲ ಎಂದರು.
Advertisement