ಮಾರ್ಚ್ 4ರಂದು ಬಿಡುಗಡೆಯಾಗಿ ಪ್ರೇಕ್ಷಕರ ಮನಸೆಳೆಯಲು ಸಜ್ಜಾಗಿರುವ ‘ಕನ್ನೇರಿ’ ಸಿನಿಮಾದ ಮಗದೊಂದು ಹಾಡು ಬಿಡುಗಡೆಯಾಗಿದೆ. ‘ನೀನಾಸಂ ಮಂಜು’ ನಿರ್ದೇಶನದಲ್ಲಿ ಮೂಡಿ ಬಂದಿರುವ ನೈಜ ಘಟನೆ ಆಧಾರಿತ ಮಹಿಳಾ ಪ್ರಧಾನ ಚಿತ್ರದ ‘ಈ ಗಾಳಿ ತಂಗಾಳಿ’ ಹಾಡಿನ ಲಿರಿಕಲ್ ವೀಡಿಯೋ ಬಿಡುಗಡೆಯಾಗಿದೆ. ಈ ಹಾಡನ್ನು ಶಾಸಕರಾದ ಸತೀಶ್ ಜಾರಕಿಹೊಳಿ ಮೆಚ್ಚಿ ಬಿಡುಗಡೆ ಮಾಡಿರೋದು ವಿಶೇಷ.
Advertisement
ಈ ಹಿಂದೆ ಬಿಡುಗಡೆಯಾದ ಮೂರು ಹಾಡುಗಳು, ಟ್ರೇಲರ್ ಸಿನಿಪ್ರಿಯರ ಮನಸ್ಸಿನಲ್ಲಿ ಅಚ್ಚೆ ಒತ್ತಿ ಮನಸೆಳೆದಿದೆ. ಸಿನಿಮಾ ನೋಡಬೇಕೆಂಬ ಇಂಗಿತವನ್ನು ಚಿಗುರಿಸಿದೆ. ಇದೀಗ ಮತ್ತೊಂದು ಬಹುನಿರೀಕ್ಷೆ ‘ಭರಿತ’ ಹಾಡಿನ ಲಿರಿಕಲ್ ವೀಡಿಯೋ ಬಿಡುಗಡೆ ಮಾಡಿ ಪ್ರೇಕ್ಷಕರನ್ನು ಮತ್ತಷ್ಟು ಹಿಡಿದಿಡೋ ಪ್ರಯತ್ನ ಮಾಡಿದೆ ಚಿತ್ರತಂಡ. ವಿ.ರಘು ಶಾಸ್ತ್ರಿ ಬರೆದ ‘ಈ ಗಾಳಿ ತಂಗಾಳಿ’ ಹಾಡನ್ನು ಶ್ವೇತ ಪ್ರಭು ಹಾಡಿದ್ದು, ಮಣಿಕಾಂತ್ ಕದ್ರಿ ಮ್ಯೂಸಿಕ್ ಮತ್ತೆ ಮ್ಯಾಜಿಕ್ ಮಾಡಿದೆ. ಶಾಸಕರಾದ ಸತೀಶ್ ಜಾರಕಿಹೊಳಿ ಈ ಹಾಡನ್ನು ಕೇಳಿ ಸಂತಸಗೊಂಡಿದ್ದು, ಚಿತ್ರತಂಡದ ಪ್ರಯತ್ನ ಯಶಸ್ವಿಯಾಗಲೆಂದು ಹಾರೈಸಿದ್ದಾರೆ. ಇದನ್ನೂ ಓದಿ: ‘ಗೆಹ್ರೈಯಾನ್’ ಸಕ್ಸಸ್ ಸೆಲೆಬ್ರೇಟ್ ಮಾಡಲು ಬೆಂಗಳೂರಿಗೆ ಬರ್ತಿದ್ದಾರೆ ದೀಪಿಕಾ!
Advertisement
Advertisement
‘ಕನ್ನೇರಿ’ ಮಹಿಳಾ ಪ್ರಧಾನ ಚಿತ್ರ. ಚಿತ್ರಕ್ಕೆ ನೈಜ ಘಟನೆಯೇ ಪ್ರೇರಣೆ ಎನ್ನುವುದು ನಿರ್ದೇಶಕ ನೀಸಾಸಂ ಮಂಜು ಮಾತು. ಕೊಡಗಿನಲ್ಲಿ ಭಾರೀ ಸದ್ದು ಮಾಡಿದ್ದ ದಿಡ್ಡಳ್ಳಿ ಸಂತ್ರಸ್ತರ ಹೋರಾಟ ಮತ್ತು ಕ್ಷೀರಸಾಗರ ಅವರ ‘ಜೇನು: ಆಕಾಶದ ಅರಮನೆ’ ಕಾದಂಬರಿ ಎಳೆಯನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಕೋಟಿಗಾನಹಳ್ಳಿ ರಾಮಯ್ಯ ಚಿತ್ರದ ಕಥೆಯ ಜವಾಬ್ದಾರಿ ವಹಿಸಿಕೊಂಡಿದ್ರೆ, ಚಿತ್ರಕಥೆ ಹಾಗೂ ನಿರ್ದೇಶನದ ಸಾರಥ್ಯವನ್ನು ನೀಸಾಸಂ ಮಂಜು ನಿಭಾಯಿಸಿದ್ದಾರೆ.
Advertisement
ಪ್ರಕೃತಿಯ ಮಡಿಲಲ್ಲಿ ಬದುಕು ಕಟ್ಟಿಕೊಂಡಿದ್ದ ಬುಡಕಟ್ಟು ಜನಾಂಗವನ್ನು ಒಕ್ಕಲೆಬ್ಬಿಸಿದ ನಂತರ ಏನಾಯಿತು. ಅಲ್ಲಿನ ಹೆಣ್ಣು ಮಕ್ಕಳು ಹೇಗೆ ದೌರ್ಜನ್ಯಕ್ಕೆ ಒಳಗಾಗುತ್ತಾರೆ, ಅವರ ಬದುಕು ಯಾವೆಲ್ಲ ತಿರುವು ಪಡೆಯುತ್ತೆ ಎಂಬ ಹೋರಾಟದ ಕಥೆ ಹೊಂದಿರುವ ಈ ಚಿತ್ರಕ್ಕೆ ಅರ್ಚನಾ ಮಧುಸೂಧನ್ ಮುಖ್ಯಭೂಮಿಕೆಯಲ್ಲಿ ಜೀವ ತುಂಬಿದ್ದಾರೆ. ಚಿತ್ರದ ತಾರಾಗಣದಲ್ಲಿ ಅನಿತಾ ಭಟ್, ಅರುಣ್ ಸಾಗರ್, ಎಂ.ಕೆ.ಮಠ್, ಕರಿಸುಬ್ಬು ಒಳಗೊಂಡಂತೆ ಹಲವು ಪ್ರತಿಭಾನ್ವಿತರು ಚಿತ್ರಕ್ಕೆ ಜೊತೆಯಾಗಿದ್ದಾರೆ. ಇದನ್ನೂ ಓದಿ: ಮತ್ತೆ ಕಂಗನಾಗೆ ಬಂತು ಕಂಟಕ – ‘ಲಾಕ್‍ಆಪ್’ ವಿರುದ್ಧ ಕಾಪಿರೈಟ್
ನೈಜತೆಗೆ ಹೆಚ್ಚು ಒತ್ತು ನೀಡಿರುವ ಚಿತ್ರತಂಡ ಬುಡಕಟ್ಟು ಜನರನ್ನೂ ಕೂಡ ಚಿತ್ರದಲ್ಲಿ ತೊಡಗಿಸಿಕೊಂಡಿದೆ. ಬೆಂಗಳೂರು, ಎಚ್.ಡಿ.ಕೋಟೆ, ಕೋಲಾರ ಸೇರಿದಂತೆ ಹಲವು ಭಾಗಗಳಲ್ಲಿ ಸಿನಿಮಾ ಸೆರೆ ಹಿಡಿಯಲಾಗಿದೆ. ಗಣೇಶ್ ಹೆಗ್ಡೆ ಕ್ಯಾಮೆರಾ ವರ್ಕ್, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಸುಜಿತ್ ಎಸ್.ನಾಯಕ್ ಸಂಕಲನ ಚಿತ್ರಕ್ಕಿದೆ. ಚಿತ್ರದ ಸ್ಯಾಂಪಲ್ ಗಳ ಮೂಲಕ ಬಝ್ ಕ್ರಿಯೇಟ್ ಮಾಡಿರುವ ‘ಕನ್ನೇರಿ’ ಸಿನಿಮಾ ಮಾರ್ಚ್ 4ರಂದು ರಾಜ್ಯಾದ್ಯಂತ ಎಲ್ಲರ ಮನಸೆಳೆಯಲು ಚಿತ್ರಮಂದಿರದ ಅಂಗಳಕ್ಕೆ ಬರುತ್ತಿದೆ.