ಬೆಳಗಾವಿ: ನನ್ನ ಮೌನವೂ ವೀಕ್ನೆಸ್ ಅಲ್ಲ ಎಂದು ಹೇಲುವ ಮೂಲಕ ಸಚಿವ ಸತೀಶ್ ಜಾರಕಿಹೊಳಿಗೆ (Sathish Jarakiholi) ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ತಿರುಗೇಟು ನೀಡಿದ್ದಾರೆ.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಜಿಲ್ಲಾ ರಾಜಕಾರಣದ ಬಗ್ಗೆ ಬೆಳಗಾವಿ ಮಾಧ್ಯಮಗಳಿಗೆ ಗೊತ್ತಿದೆ. ಬೇರೆ ಜಿಲ್ಲೆಯ ವರದಿಗಾರರು ಕೇಳಿದ್ರೆ ಉತ್ತರ ಕೊಡುತ್ತಿದ್ದೆ. ನಮ್ಮ ಜಿಲ್ಲೆಯಲ್ಲಿ ಯಾವುದೇ ರೀತಿಯ ಸಣ್ಣ ಸಮಸ್ಯೆಯಿಲ್ಲ. ರಾಜ್ಯದ ಜನರು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ನಾವೆಲ್ಲರೂ ಹೊಂದಾಣಿಕೆಯಿಂದ ಕೆಲಸ ಮಾಡ್ತಿದ್ದೇವೆ ಎಂದರು.
Advertisement
Advertisement
ಮೈಸೂರು ಪ್ರವಾಸದ ಲಿಸ್ಟ್ ನಲ್ಲಿ ನಾನೂ ಇದ್ದೆ. ನಾನೇ ನಮ್ಮ ಜಿಲ್ಲೆಯ ರಾಜು ಕಾಗೆ, ಮಹಾಂತೇಶ ಕೌಜಲಗಿ ಜೊತೆಗೆ ಮಾತನಾಡಿದ್ದೆ. ಎಲ್ಲರೂ ಸೇರಿ ಮೈಸೂರು ಪ್ರವಾಸಕ್ಕೆ ಹೋಗಲು ತೀರ್ಮಾನಿಸಿದ್ದೆವು. ಇದನ್ನು ಬಂಡಾಯ ಎಂದು ಬಿಂಬಿಸುವುದು ಸರಿಯಲ್ಲ. ಮೈಸೂರಿನಲ್ಲಿ ಮಹಿಳಾ ದಸರಾ ಉದ್ಘಾಟನೆ ನಾನೇ ಮಾಡಬೇಕಿತ್ತು. ಆದರೆ ಬಾಯ್ಲರ್ ಉದ್ಘಾಟನೆ ಮಾಡಬೇಕಿತ್ತು, ಸಹೋದರ ಕರೆದ. ಅದಕ್ಕೆ ನಾನು ಬೆಳಗಾವಿಗೆ (Belagavi) ಮರಳಿ ನಂತರ ಭದ್ರಾವತಿಗೆ ಹೋದೆ ಎಂದು ಹೇಳಿದರು. ಇದನ್ನೂ ಓದಿ: ದಾಂಡಿಯಾ ಹೆಸರಲ್ಲಿ ಡ್ರಗ್ಸ್ ಪಾರ್ಟಿನಾ? – ಮಂಗಳೂರಿನಲ್ಲಿ VHP ವಿರೋಧ
Advertisement
Advertisement
ಮೈಸೂರು ಪ್ರವಾಸ ಕ್ಯಾನ್ಸಲ್ ಆಗಿದ್ದೇಕೆ ನನಗೆ ಗೊತ್ತಿಲ್ಲ ಸತೀಶ್ ಅವರನ್ನು ಕೇಳಿ. ಡಿಕೆಶಿ ಬೆಳಗಾವಿಗೆ ಬಂದಾಗ ಯಾರದರೂ ಶಾಸಕರು ಸ್ವಾಗತಕ್ಕೆ ಬರಬೇಕಿತ್ತು ಎಂದು ಹೇಳುವ ಮೂಲಕ ಮತ್ತೊಮ್ಮೆ ಬೇಸರ ವ್ಯಕ್ತಪಡಿಸಿದರು.
ಮೊನ್ನೆಯಷ್ಟೇ ಸತೀಶ್ ಜಾರಕಿಹೊಳಿ ಮಾತನಾಡಿ, ಡಿಕೆಶಿ ಜೊತೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾನು ತಿಂಗಳಿಂದ ಹೊಂದುಕೊಂಡು ಹೋಗುತ್ತಿದ್ದೇನೆ. ಸೈಲೆಂಟ್ ಆಗಿರೋದೇ ನನ್ನ ವೀಕ್ನೆಸ್ ಅಲ್ಲ ಎಂದು ಹೇಳಿದ್ದರು. ಇದೀಗ ಸತೀಶ್ ಜಾರಕಿಹೊಳಿಗೆ ಅವರದ್ದೇ ಮಾತಿನಲ್ಲೇ ಲಕ್ಷ್ಮಿ ಹೆಬ್ಬಾಳ್ಕರ್ ಉತ್ತರ ಕೊಟ್ರಾ ಅನ್ನೋ ಪ್ರಶ್ನೆ ಎದ್ದಿದೆ.
ಒಂದೇ ವಿಮಾನದಲ್ಲಿ ಆಗಮನ: ಬೆಳಗಾವಿ ರಾಜಕೀಯದಲ್ಲಿ ಡಿಕೆ ಶಿವಕುಮಾರ ಹಸ್ತಕ್ಷೇಪ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಇಂದು ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸತೀಶ್ ಜಾರಕಿಹೊಳಿ ಒಂದೇ ವಿಮಾನದಲ್ಲಿ ಬೆಂಗಳೂರಿನಿಂದ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ಮೂಲಕ ನಮ್ಮ ನಡುವೆ ಯಾವುದೇ ಅಸಮಾಧಾನ ಇಲ್ಲ ಎನ್ನುವುದ ತೋರಿಸುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗುತ್ತಿದೆ.
Web Stories