ಬೆಳಗಾವಿ: ಕಳೆದ 2018ರ ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿಯನ್ನು ಸೋಲಿಸಲು ಸ್ವಪಕ್ಷದ ನಾಯಕರ ತಂತ್ರಗಾರಿಕೆ ಬಗೆಗಿನ ಗುಟ್ಟನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬಹಿರಂಗಪಡಿಸಿದ್ದಾರೆ.
ನನ್ನನ್ನು ಸೋಲಿಸಲು ಕ್ಷೇತ್ರದಲ್ಲಿ ಸ್ವಪಕ್ಷದವರಿಂದಲೇ ಹಣ ಹಂಚಿಕೆ ಮಾಡಿದ್ದರು. ನಾವು ಅವರನ್ನು ಸೋಲಿಸಲು ಪ್ರಯತ್ನ ಮಾಡಿದ್ವಿ ಎನ್ನುವ ಮೂಲಕ ಕಾಂಗ್ರೆಸ್‍ನಲ್ಲಿರುವ ತಮ್ಮ ವಿರೋಧಿಗಳ ಹೆಸರನ್ನು ಪ್ರಸ್ತಾಪಿಸದೇ ಗುಟ್ಟನ್ನು ಬಹಿರಂಗ ಮಾಡಿದ್ದಾರೆ. ಇದನ್ನೂ ಓದಿ: ಭಾರತ ನನ್ನ ಕುಟುಂಬದಂತೆ: ಓದಿನ ನೆರವಿಗಾಗಿ ಅಫ್ಘನ್ ಯುವತಿಯಿಂದ ಮೋದಿಗೆ ಮನವಿ
Advertisement
Advertisement
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಈ ಬಾರಿ ಆದ ತಪ್ಪು ಈಗ ಆಗಲ್ಲ. ನನ್ನನ್ನು ಕಟ್ಟಿಹಾಕಲು ಕ್ಷೇತ್ರದಲ್ಲಿ ಈಗಾಗಲೇ ಪೂರಕವಾಗಿ ಬಿಜೆಪಿಯ ನಾಯಕರು ಕೆಲಸ ಮಾಡುತ್ತಿದ್ದಾರೆ. ಯಮಕನಮರಡಿ ಕ್ಷೇತ್ರಕ್ಕೆ ನನ್ನನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ. ಕ್ಷೇತ್ರದ ಮೇಲೆ ಹಿಡಿತ ಇದೆ. ಜನರು ಯಾರ ಪರವಾಗಿ ಇದ್ದಾರೆ ಅಂತ ಗೊತ್ತಿದೆ. ರಾಜ್ಯದ 224 ಕ್ಷೇತ್ರದಲ್ಲಿ ವಿರೋಧ ಅಲೆ ಇರುವುದು ಸಹಜ ಎಂದಿದ್ದಾರೆ.
Advertisement
Advertisement
ಯಮಕನಮರಡಿ ಕ್ಷೇತ್ರದಲ್ಲಿ ಆಪ್ತ ಸಹಾಯಕರ ಹಾವಳಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪ್ರಮುಖ ಕಾರ್ಯಕರ್ತರು, ಆಪ್ತ ಸಹಾಯಕರು ಇಲ್ಲದೇ ಕೆಲಸ ಮಾಡಲು ಸಾಧ್ಯವಿಲ್ಲ. ತಪ್ಪನ್ನು ಸರಿ ಮಾಡಲು ನಿರಂತರ ಪ್ರಯತ್ನ ನಡೆಯಲಿದೆ. ಆಪ್ತ ಸಹಾಯಕರು ಇಲ್ಲದೇ ಶಾಸಕರು ಕೆಲಸ ಮಾಡಲು ಕಷ್ಟವಾಗುತ್ತದೆ. ಬಿಜೆಪಿಯವರು ಎಂಆರ್‌ಪಿ ಫಿಕ್ಸ್ ಎಂದು ಹಿಡಿದುಕೊಂಡು ಕುಳಿತಿದ್ದಾರೆ. ಇದು ರಾಜಕೀಯ. ಆಗಿನ ಸಂದರ್ಭ ಬೇರೆ ಇತ್ತು. ಈಗ ಬೇರೆ ಇದೆ. ಕ್ಷೇತ್ರದಲ್ಲಿ ಪ್ರಚಾರ ನಡೆಸದೇ, ಹಣ ಖರ್ಚು ಮಾಡದೇ ಗೆದ್ದಿದ್ದೇನೆ. ಇದರ ಅರಿವು ಬಿಜೆಪಿ ನಾಯಕರಿಗೆ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಕಿತ್ತೂರು ಕರ್ನಾಟಕದ ಭಾಗದಲ್ಲಿ 56 ವಿಧಾನಸಭೆ ಕ್ಷೇತ್ರಗಳು ಇವೆ. 2019ರ ಲೋಕಸಭೆ ಚುನಾವಣೆಯ ಫಲಿತಾಂಶ ಬಿಜೆಪಿ ನಾಯಕರು ನೋಡಬೇಕು. 56 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪ್ಲಸ್ ಇರುವುದು ಚಿಕ್ಕೋಡಿ ಕ್ಷೇತ್ರ ಮಾತ್ರ. ಅತೀ ಕಡಿಮೆ ಮೈನಸ್ ಇರುವುದು ಯಮಕನಮರಡಿ ಕ್ಷೇತ್ರವಾಗಿದೆ. ಅನೇಕ ನಾಯಕರ ಕ್ಷೇತ್ರದಲ್ಲಿ 30-40 ಸಾವಿರ ಮೈನಸ್ ಆಗಿದೆ. ಹಾಗಾದರೆ ಅವರೆಲ್ಲಾ ಚುನಾವಣೆಯಲ್ಲಿ ಸೋಲಲಿದ್ದಾರೆಯೇ? ಕಾಂಗ್ರೆಸ್ ಘಟಾನುಘಟಿ ನಾಯಕರ ಕ್ಷೇತ್ರದಲ್ಲಿ ಮೈನಸ್ ಇದೆ. ಕ್ಷೇತ್ರದ ಪ್ರಚಾರ ನಡೆಸದೇ ಚುನಾವಣೆ ಗೆಲ್ಲಬೇಕು ಎನ್ನುವ ಹಠ ಇತ್ತು. ಕಳೆದ ಚುನಾವಣೆಯಲ್ಲಿ ಪ್ರಚಾರ ನಡಸದೇ ಹಣ ಖರ್ಚು ಮಾಡದೇ ಗೆದ್ದಿದ್ದೇನೆ. ಹೀಗಾಗಿ ನನ್ನ ಗೆಲುವಿನ ಅಂತರ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಥುರಾ ದೇವಾಲಯದಲ್ಲಿ ಜನದಟ್ಟಣೆ – ಉಸಿರುಗಟ್ಟಿ ಇಬ್ಬರ ಸಾವು
ನಮ್ಮ ಬೆಂಬಲಿಗರು ಸಹ ಅತಿ ಆತ್ಮವಿಶ್ವಾಸದಿಂದ ಪ್ರಚಾರ ನಡೆಸಲಿಲ್ಲ. ನಮ್ಮ ಪಕ್ಷದ ನಾಯಕರ ಹಣ ಸ್ವಲ್ಪ ವರ್ಕ್ ಮಾಡಿದೆ. ಈ ಸಲ ಯಾವುದೇ ಹಣ ನಮ್ಮ ಕ್ಷೇತ್ರಕ್ಕೆ ಬರಲ್ಲ. ಬಿಜೆಪಿ ಹಣದಿಂದ ಅಲ್ಲ. ಬದಲಾಗಿ ನಮ್ಮದೇ ಪಕ್ಷದವರು ಹಣ ಕಳುಹಿಸಿದ್ದರು. ಇದರಿಂದ ನನ್ನ ಗೆಲುವಿನ ಅಂತರ ಕಡಿಮೆ ಆಗುವುದಕ್ಕೆ ಕಾರಣವಾಯಿತು. ನಾವು ಆ ಕಡೆ ಹಣ ಕೊಟ್ಟಿದ್ದೇವು ಅವರು ಇಲ್ಲಿ ಕೊಟ್ಟರು ಎಲ್ಲಾ ಸರಿಸಮವಾಗಿದೆ. ಮುಂದಿನ ಚುನಾವಣೆಯಲ್ಲಿ ಅಂತಹ ತಪ್ಪು ಯಾವುದು ಆಗಲ್ಲ ಎಂದು ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ.