ಮೈಸೂರು: ಮಹಿಳೆ ಕಿಡ್ನಾಪ್ (Woman Kidnap Case) ಪ್ರಕರಣದಲ್ಲಿ ಎಫ್‍ಐಆರ್ ದಾಖಲಾಗುವ ಮುನ್ನವೇ ಸತೀಶ್ ಬಾಬುವನ್ನು ವಶಕ್ಕೆ ಪಡೆದಿದ್ದಾರೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ (SaRa Mahesh) ಹೊಸ ಬಾಂಬ್ ಸಿಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣ ಸಂಬಂಧ ಎಫ್‍ಐಆರ್ ಆಗುತ್ತೆ ಎಂದು ಇವರಿಗೆ ಕನಸು ಬಿದ್ದಿತ್ತಾ..?. ರಾತ್ರಿ 9.5 ರ ಸುಮಾರಿಗೆ ಎಫ್‍ಐಆರ್ ಆಗಿದೆ. ಆದರೆ ಮಧ್ಯಾಹ್ನ 12 ಗಂಟೆಗೆ ಸತೀಶ್ ಬಾಬುರನ್ನ ಕರೆದುಕೊಂಡು ಹೋಗಿದ್ದಾರೆ. ಬೇಕರಿಯೊಂದರ ಸಿಸಿ ಕ್ಯಾಮೆರಾದಲ್ಲಿ ಇದು ಸೆರೆಯಾಗಿದೆ. ಇದು ಗೊತ್ತಾಗುತ್ತಿದ್ದಂತೆ ಬೇಕರಿಯ ಹಾರ್ಡ್ ಡಿಸ್ಕ್ ತೆಗೆದುಕೊಂಡು ಹೋಗಿ ಈಗ ಡಿಲೀಟ್ ಮಾಡಿ ಕೊಟ್ಟಿದ್ದಾರೆ ಎಂದರು.
Advertisement
Advertisement
ಆದರೆ ಈ ದೃಶ್ಯಗಳನ್ನು ಮತ್ತೊಬ್ಬ ಮೊಬೈಲ್ ವೀಡಿಯೋ ಮಾಡಿ ಅದನ್ನ ಬೇರೊಬ್ಬರಿಗೆ ಕಳುಹಿಸಿದ್ದಾನೆ. ಇದನ್ನು ಇಂದು ನಮ್ಮ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ. ಇದಕ್ಕಾಗಿ ಮೈಸೂರಿನಿಂದ ಸಬ್ ಇನ್ಸ್ ಪೆಕ್ಟರ್ ಆಲ್ಟೊ ಕಾರಿನಲ್ಲಿ ಹೋಗಿದ್ದರು. ಇದೆಲ್ಲ ದಾಖಲೆಗಳು ನಮ್ಮ ಬಳಿ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಿಡ್ನ್ಯಾಪ್ ಕೇಸ್‌ಗೆ ಟ್ವಿಸ್ಟ್; ಭವಾನಿ ಅಕ್ಕ, ರೇವಣ್ಣ, ಪ್ರಜ್ಜು ಅಣ್ಣನಿಂದ ಏನೂ ತೊಂದ್ರೆ ಆಗಿಲ್ಲವೆಂದ ಸಂತ್ರಸ್ತೆ!
Advertisement
Advertisement
ದೂರು ಕೊಟ್ಟ ಹುಡುಗ ಅಮಾಯಕ. ಆತನಿಗೆ ಹಣ ಕೊಟ್ಟು ಖಾಲಿ ಪೇಪರ್ ನಲ್ಲಿ ಸಹಿ ಪಡೆದಿದ್ದಾರೆ. ದೂರು ಕೊಟ್ಟ ಯುವಕ ಎಲ್ಲಿದ್ದಾನೆ. ಈವರೆಗೂ ಆತ ಎಲ್ಲಿ ಹೋಗಿದ್ದಾನೆ ಎಂದು ಗೊತ್ತಿಲ್ಲ. ಆ ಮಹಿಳೆ ಬಳಿಯೂ ಈವರೆಗೂ 164 ಹೇಳಿಕೆ ಏಕೆ ದಾಖಲಿಸಿಲ್ಲ. ಕುರಿ ಮೇಯಿಸುತ್ತಿದ್ದರು ಎಂದು ತೋಟದಲ್ಲಿದ್ದವರು ಹೇಳಿದ್ದಾರೆ. ಆಕೆ ಅಲ್ಲಿ ಹೋಗಿದ್ದು ಸತ್ಯ. ಕುರಿ ಮೇಯಿಸುತ್ತಿದ್ದ ಮೇಲೆ ಕಿಡ್ನಾಪ್ ಹೇಗೆ ಆಗುತ್ತದೆ ಎಂದು ಮಾಜಿ ಸಚಿವರು ಪ್ರಶ್ನಿಸಿದ್ದಾರೆ.