ಬೆಂಗಳೂರು: ಸ್ಯಾಂಡಲ್‍ವುಡ್‍ನ ಹಿರಿಯ ಕಲಾವಿದ ಸತ್ಯಜಿತ್ ಅವರು ನಮ್ಮನ್ನು ಅಗಲಿದ್ದಾರೆ. ಕಳೆದ 6 ದಿನಗಳಿಂದ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪಿದ್ದಾರೆ.
ಸತ್ಯಜಿತ್ ಪುತ್ರ ಆಕಾಶ್ ಸತ್ಯಜಿತ್ ಮಾಧ್ಯಮದವರೊಂದಿಗೆ ಮಾತನಾಡಿ, ನಮ್ಮ ತಂದೆ ದೊಡ್ಡ ಹೃದಯವಂತರು. ನಿನ್ನೆ ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ವದಂತಿಗಳು ಹಬ್ಬಿತ್ತು. ಅದರಿಂದ ಬೇಸರವಾಗಿತ್ತು. ನೂರಾರು ಕರೆಗಳು ಬಂದಿದ್ದವು. ಸಿನಿಮಾ ರಂಗದವರು ಕರೆ ಮಾಡಿ ವಿಚಾರಿಸಿದ್ದಾರೆ. ಆದರೆ ಸುಳ್ಳು ವದಂತಿಯಿಂದ ಬೇಸರವಾಗಿತ್ತು. ನಿನ್ನೆ ರಾತ್ರಿ ತಂದೆ ಮೃತಪಟ್ಟಿದ್ದಾರೆ, ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು. ವೈದ್ಯರ ಚಿಕಿತ್ಸೆಗೆ ತಂದೆ ಸ್ಪಂದಿಸುತ್ತಿರಲಿಲ್ಲ. ವೈದ್ಯರು ಸಹ ನಮ್ಮ ಬಳಿ ತಂದೆಯ ಪರಿಸ್ಥಿತಿಯನ್ನ ತಿಳಿಸಿದ್ದರು. ಮಾನಸಿಕವಾಗಿ ಸಿದ್ಧರಿರುವಂತೆ ಹೇಳಿದ್ದರು ಎಂದಿದ್ದಾರೆ. ಇದನ್ನೂ ಓದಿ: ಸ್ಯಾಂಡಲ್‍ವುಡ್ ಹಿರಿಯ ನಟ ಸತ್ಯಜಿತ್ ಇನ್ನಿಲ್ಲ
ತಂದೆಯ ಸಾವಿನ ದುಃಖ ಇದೆ. ಅವರಿಗೆ ಸರ್ಕಾರದಿಂದ ಮತ್ತು ಸಿನಿಮಾ ಇಂಡಸ್ಟ್ರಿಯಿಂದ ಸಹಾಯ ಬೇಕಾಗಿದೆ. ಬಿಡಿಎ ಸೈಟ್‍ಗಾಗಿ ನಮ್ಮ ತಂದೆ ಪ್ರಯತ್ನ ಪಟ್ಟಿದ್ದರು. ಸರ್ಕಾರದಿಂದ, ಚಿತ್ರರಂಗದಿಂದ ಸಹಾಯ ಅಗತ್ಯವಿದೆ. ನಮ್ಮ ತಂದೆಯಂತೆ ಯಾರೂ ಬರೋಲ್ಲ. ದೊಡ್ಡ ಮನಸ್ಸಿನ ವ್ಯಕ್ತಿ, ಸಾಕಷ್ಟು ಕಷ್ಟಪಟ್ಟು ಬೆಳೆದಿದ್ದರು. ಇಂದು ಮಧ್ಯಾಹ್ನ 2 ರಿಂದ 3 ಗಂಟೆಯೊಳಗೆ ಅಂತಿಮ ಸಂಸ್ಕಾರ ಮಾಡುತ್ತೇವೆ. ಅಲ್ಲಿವರೆಗೆ ಅಭಿಮಾನಿಗಳಿಗೆ, ಚಿತ್ರರಂಗದವರಿಗೆ ಅಂತಿಮ ದರ್ಶನದ ವ್ಯವಸ್ಥೆ ಇರಲಿದೆ. ಹೆಗ್ಡೆನಗರದ ಖಬರ್‌ಸ್ತಾನ್‌ನಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸ್ಟಾರ್ ನಟರೆಲ್ಲ ಕೈಬಿಟ್ರು: ಚಿಕಿತ್ಸೆಗೆ ಬಾಗಲಕೋಟೆಗೆ ಬಂದು ನೋವು ತೋಡಿಕೊಂಡ ಸತ್ಯಜಿತ್