`ಸತ್ಯ’ (Sathya Serial) ಧಾರಾವಾಹಿ ಮೂಲಕ ಮನೆ ಮಾತಾಗಿರುವ ಸೀರುಂಡೆ ರಘು (Seerunde Raghu) ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಸರಳವಾಗಿ ರಂಜಿತಾ (Ranjitha) ಎಂಬುವವರ ಜೊತೆ ಹೊಸ ಬಾಳಿಗೆ ನಟ ರಘು ಕಾಲಿಟ್ಟಿದ್ದಾರೆ.
`ಕಾಮಿಡಿ ಕಿಲಾಡಿಗಳು ಸೀಸನ್ 2′ ಮತ್ತು `ಸತ್ಯ’ ಸೀರಿಯಲ್ ಹೀರೋ ಕಾರ್ತಿಕ್ ಮೈದುನನ ಪಾತ್ರದಲ್ಲಿ ರಘು ಪರಿಚಿತರಾಗಿದ್ದಾರೆ. ಕಿರುತೆರೆಯಲ್ಲಿ ಪ್ರೇಕ್ಷಕರಿಗೆ ನಕ್ಕು ನಗಿಸುವ ಮೂಲಕ ಸೀರುಂಡೆ ರಘು ಗಮನ ಸೆಳೆದಿದ್ದರು. ಇದನ್ನೂ ಓದಿ: Exclusive:ಮತ್ತೊಂದು ಮಲ್ಟಿಸ್ಟಾರ್ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ
View this post on Instagram
ರಂಜಿತಾ ಎಂಬುವವರ ಜೊತೆ ನಟ ರಘು ಅವರು ಸರಳವಾಗಿ ಮದುವೆಯಾಗಿದ್ದಾರೆ. ಗುರುಹಿರಿಯರು, ಆಪ್ತರ ಸಮ್ಮುಖದಲ್ಲಿ ಬೆಂಗಳೂರಿನ ಖಾಸಗಿ ಕಲ್ಯಾಣ ಮಂಟಪದಲ್ಲಿ ಮದುವೆಯಾಗಿದ್ದಾರೆ. ಕಾಮಿಡಿ ಕಿಲಾಡಿಗಳು ಶೋ ಸ್ಪರ್ಧಿಗಳು, ಕಿರುತೆರೆ ನಟ-ನಟಿಯರು ಸೇರಿದಂತೆ ಹಲವರು ಮದುವೆ ಸಂಭ್ರಮದಲ್ಲಿ ಭಾಗಿಯಾಗಿ ನವಜೋಡಿಗೆ ಶುಭಹಾರೈಸಿದ್ದಾರೆ. ಅಭಿಮಾನಿಗಳ ಕೂಡ ರಘು ದಂಪತಿಗೆ ಶುಭಕೋರಿದ್ದಾರೆ.