ಬೆಳಗಾವಿ: ಜಿಲ್ಲೆಯ ದಕ್ಷಿಣ ವಿಧಾನಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ವಿವಾದದಿಂದ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಸತೀಶ್ ಜಾರಕಿಹೋಳಿ ನಡುವೆ ಮತ್ತೊಂದು ಸುತ್ತಿನ ಮುನಿಸಿಗೆ ಕಾರಣವಾಗುವ ಸಾಧ್ಯತೆ ಇದೆ.
Advertisement
ಕೆಪಿಸಿಸಿ ಹಿಂದುಳಿದ ಘಟಕದ ಅಧ್ಯಕ್ಷ ಹಾಲಿ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮಿ ನಾರಾಯಣ್ ಈ ವಿವಾದದ ಮೂಲ. ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 35 ಸಾವಿರ ನೇಕಾರ ಸಮುದಾಯದ ಮತದಾರರಿದ್ದಾರೆ. ಆದ್ದರಿಂದ ನೇಕಾರ ಸಮುದಾಯದ ಲಕ್ಷ್ಮಿನಾರಾಯಣ್‍ಗೆ ಬೆಳಗಾವಿ ದಕ್ಷಿಣ ಟಿಕೆಟ್ ಎಂದು ಸಿಎಂ ಘೋಷಿಸಿದ್ದಾರೆ. ಇದು ಜಿಲ್ಲೆಯ ಪ್ರಭಾವಿ ನಾಯಕ ಸತೀಶ್ ಜಾರಕಿಹೋಳಿ ಕಣ್ಣು ಕೆಂಪಾಗಿಸಿದೆ.
Advertisement
Advertisement
ಜಿಲ್ಲಾ ಮುಖಂಡರ ಅನುಮತಿ ಪಡೆಯದೆ ತುಮಕೂರಿನ ಲಕ್ಷ್ಮಿನಾರಾಯಣ್ ಹೆಸರನ್ನು ಸಿಎಂ ಘೋಷಿಸಿದ್ದು ಹೇಗೆ? ಎಂದು ಸತೀಶ್ ಜಾರಕಿಹೋಳಿ ಸಿಟ್ಟಾಗಿದ್ದು, ಜಿಲ್ಲಾ ಮುಖಂಡರ ಸಮ್ಮುಖದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದು ಹೇಗೆ ಟಿಕೆಟ್ ಕೊಟ್ಟು ಸಿಎಂ ಗೆಲ್ಲಿಸ್ತಾರೆ ನೋಡೋಣ ಎಂದಿದ್ದಾರೆ.
Advertisement
ಅಲ್ಲದೆ ಇವರೊಬ್ಬರೆನಾ ಹಿಂದುಳಿದ ವರ್ಗದ ನಾಯಕ? ನಾನು ನೋಡ್ತೀನಿ ಎಂದು ಅಸಮಧಾನ ಹೊರಹಾಕಿದ್ದಾರೆ. ರಾಜ್ಯ ನಾಯಕರ ಬಳಿಯೂ ಅಸಮಧಾನ ತೋಡಿಕೊಂಡಿದ್ದಾರೆ ಎನ್ನಲಾಗಿದೆ.